Select Your Language

Notifications

webdunia
webdunia
webdunia
webdunia

ಕುಡಿದು ಚಿತ್ತಾಗಿದ್ದಾಗ 'ತಲಾಖ್' ಉಚ್ಚರಿಸಿದ್ದರೂ ಅದು ಸಿಂಧು

ಕುಡಿದು ಚಿತ್ತಾಗಿದ್ದಾಗ 'ತಲಾಖ್' ಉಚ್ಚರಿಸಿದ್ದರೂ ಅದು ಸಿಂಧು
ಲಕ್ನೋ , ಬುಧವಾರ, 7 ಜನವರಿ 2009 (10:51 IST)
ಕುಡಿದಮತ್ತಿನಲ್ಲಿ ಮತ್ತು ಕೋಪದ ಕೈಗೆ ಬುದ್ಧಿಯನ್ನು ಕೊಟ್ಟು ಮೂರು ಬಾರಿ ಹೇಳುವ ತಲಾಖ್ ಇಲ್ಲವೇ, ಎಸ್ಎಂಎಸ್‌ನಲ್ಲಿ 'ತಲಾಖ್' ಎಂದು ಟೈಪ್ ಮಾಡಿ ಕಳುಹಿಸದೇ ಇದ್ದರೂ ಶರಿಯಾ ಪ್ರಕಾರ ಅಂತಹ ಪತಿ-ಪತ್ನಿಯರು ಪ್ರತ್ಯೇಕಗೊಳ್ಳಬೇಕಾಗುತ್ತದೆ.

ಅಮಲೇರಿದ ಸ್ಥಿತಿಯಲ್ಲಿ, ಅಥವಾ ಕೋಪೋದ್ರಿಕ್ತವಾಗಿದ್ದ ವೇಳೆ ಅಥವಾ ತನ್ನ ಪತ್ನಿಗೆ 'ತಲಾಕ್' ಸಂದೇಶ ಸಂವಹಿಸಲಾಗಿಲ್ಲದಿದ್ದರೆ ಅಂತಹ ಪ್ರಕರಣಗಳು ಇಸ್ಲಾಮಿನಲ್ಲಿ ವಿಚ್ಚೇದನಕ್ಕೆ ಅರ್ಹವಾಗುವುದಿಲ್ಲ ಎಂಬ ಸಾಮಾನ್ಯ ನಂಬುಗೆಗೆ ವ್ಯತಿರಿಕ್ತವೆಂಬಂತೆ ಇತ್ತೀಚೆಗೆ ದಾರುಲ್ ಉಲೂಮ್-ದೇವಬಂದ್ ಫತ್ವಾ ಹೊರಡಿಸಿದೆ.

ಒಬ್ಬ ವ್ಯಕ್ತಿ ತನ್ನ ಪತ್ನಿಗೆ ತಲಾಖ್ ನೀಡುವ ಉದ್ದೇಶದಿಂದ ಮೊಬೈಲ್‌ನಲ್ಲಿ "ನಾನು ನಿನಗೆ ಒಂದು ತಲಾಖ್ ನೀಡುತ್ತೇನೆ" ಎಂಬುದಾಗಿ ಎಸ್ಎಂಎಸ್ ಸಂದೇಶ ಟೈಪ್ ಮಾಡುತ್ತಾನೆ. ಆದರೆ ನಂತರ ಮನಸ್ಸು ಬದಲಿಸಿ ಆತ ಈ ಸಂದೇಶವನ್ನು ಕಳುಹಿಸುವುದಿಲ್ಲ. ಇದು ತಲಾಖ್ ಆಗುತ್ತದೆಯೇ ಎಂದು ಡಿಸೆಂಬರ್ 28ರಂದು ಬಾಂಗ್ಲಾದೇಶದಿಂದ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ದಾರ್-ಉಲ್-ಇಫ್ತಾ ಪ್ರಕಾರ, ಮೇಲಿನ ಪ್ರಕರಣದಲ್ಲಿ 'ತಲಾಖ್' ಎಂದು ಟೈಪ್ ಮಾಡಿದ ಬಳಿಕ ಅದನ್ನು ಕಳುಹಿಸಿದರೂ, ಇಲ್ಲವಾದರೂ, ಒಂದು ತಲಾಖ್ ಹೇಳಿದಂತೆಯೇ.

ಎಸ್ಎಂಎಸ್ ಒಂದು ಪಠ್ಯವಾಗಿರುವ ಕಾರಣ ಇದನ್ನು ಪತಿಯು ತಲಾಖ್ ನೀಡುವ ಉದ್ದೇಶದಿಂದ ಬರೆದಿದ್ದರೆ, ಅದು ಸಿಂಧುವಾಗುತ್ತದೆ. ಇನ್ನೋರ್ವ ವ್ಯಕ್ತಿ ತನ್ನ ಪತ್ನಿಗೆ ತಲಾಖ್ ನೀಡುವ ಉದ್ದೇಶವಿಲ್ಲದಿದ್ದರೂ, ಪತ್ನಿಯೊಂದಿಗೆ ಜಗಳವಾಡುವ ವೇಳೆ ಕೋಪದ ಭರದಲ್ಲಿ ಮೂರು ಬಾರಿ ತಲಾಖ್ ಹೇಳಿದ್ದ. ಇದಾದ ಒಂದು ವಾರದ ಬಳಿಕ ತನ್ನ ಪತ್ನಿ ಗರ್ಭಿಣಿ ಎಂಬ ವಿಚಾರ ತಿಳಿದು, ತಾವೀಗ ಒಟ್ಟಿಗೆ ಬದುಕಲು ಇಚ್ಚಿಸುತ್ತೇವೆ ಎಂಬುದಾಗಿ ಜನವರಿ 3ರಂದು ದಾರ್-ಉಲ್-ಇಫ್ತಾಗೆ ಕೇಳಲಾಗಿತ್ತು.

ಇದಕ್ಕೆ ಉತ್ತರ ನೀಡಿರುವ ದಾರ್-ಉಲ್-ಇಫ್ತಾ, ಅದು ಉದ್ದೇಶಪೂರಿತವಾಗಿ ಅಲ್ಲದಿದ್ದರೂ, ತಲಾಖ್ ಮೂರು ಬಾರಿ ಸ್ಪಷ್ಟವಾಗಿ ಉಚ್ಚರಿಸಿರುವ ಕಾರಣ ಇಂತಹ ವೇಳೆ ಉದ್ದೇಶ ಔರಸವೆನಿಸುವುದಿಲ್ಲ ಎಂದು ಹೇಳಿದೆ.

ಇನ್ನೊಂದು ಪ್ರಕರಣದಲ್ಲಿ ಸಂಪೂರ್ಣ ಪಾನಮತ್ತನಾಗಿದ್ದ ವ್ಯಕ್ತಿ ತಾನೇನು ಮಾಡುತ್ತೇನೆ ಎಂಬ ಅರಿವಿಲ್ಲದೆ, ತನ್ನ ಪತ್ನಿಗೆ ಬಡಿದು ಬಳಿಕ ಮೂರು ಬಾರಿ 'ತಲಾಖ್' ಉಚ್ಚರಿಸಿದ್ದ. ಇಲ್ಲಿಯೂ ಮದುವೆ ವಿಚ್ಚೇದನಗೊಳ್ಳುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ದಾರ್-ಉಲ್-ಇಫ್ತಾ ಹನಾಫಿ ಪಂಥದ ಪ್ರಕಾರ ಕುಡಿದ ಮತ್ತಿನಲ್ಲಿ ತಲಾಖ್ ನೀಡುವುದು ಸಿಂಧು ಎಂದು ಹೇಳಿದೆ.

ಇಸ್ಲಾಮಿಕ್ ವಿದ್ವಾಂಸರು ಹೇಳುವಂತೆ ಶರಿಯಾ ಪ್ರಕಾರ, 30 ದಿನಗಳ ಅಂತರದಲ್ಲಿ ಒಂದು ತಲಾಖ್ ಉಚ್ಚರಿಸಬೇಕು. ಇದರಿಂದಾಗಿ ಕೋಪಾವೇಶದಲ್ಲಿ ಇಲ್ಲವೇ ಕುಡಿದ ಮತ್ತಿನಲ್ಲಿ ಆಗುವಂತಹ ಅನಾಹುತಗಳನ್ನು ತಪ್ಪಿಸಬಹುದು. ಹೀಗಾದಾಗ ಒಮ್ಮೆ ಅಥವಾ ಎರಡು ಬಾರಿ ತಲಾಖ್ ಉಚ್ಚರಿಸಿದ್ದರೂ, ಬಳಿಕ ಮನಸ್ಸು ಬದಲಾಯಿಸಿದರೆ 40 ದಿನಗಳೊಳಗಾಗಿ ಕೊನೆಯ ತಲಾಖ್ ಹೇಳುವ ಮುಂಚೆ, ಹಿಂದಿನ ತನ್ನ 'ತಲಾಖ್' ಉಚ್ಚಾರವನ್ನು ಹಿಂತೆಗೆದುಕೊಂಡು ತನ್ನ ಮದುವೆ ಮುರಿಯದಂತೆ ಕಾಪಾಡಿಕೊಳ್ಳಬಹುದು.

Share this Story:

Follow Webdunia kannada