Select Your Language

Notifications

webdunia
webdunia
webdunia
webdunia

ಕಾಂಗೋ ದೇಶದ ಮಹಿಳೆಯ ಮೇಲೆ ಇಬ್ಬರು ಆರೋಪಿಗಳಿಂದ ಗ್ಯಾಂಗ್‌ರೇಪ್

ಕಾಂಗೋ ದೇಶದ ಮಹಿಳೆಯ ಮೇಲೆ ಇಬ್ಬರು ಆರೋಪಿಗಳಿಂದ ಗ್ಯಾಂಗ್‌ರೇಪ್
ನವದೆಹಲಿ , ಶನಿವಾರ, 5 ಏಪ್ರಿಲ್ 2014 (16:01 IST)
ಮತ್ತೊಂದು ಆಘಾತಕಾರಿ ಘಟನೆಯಲ್ಲಿ ಕಾಂಗೋ ದೇಶದ ಮಹಿಳೆಯ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ.

ನವದೆಹಲಿಯಲ್ಲಿರುವ ಆಕೆಯ ನಿವಾಸಕ್ಕೆ ಬಲತ್ಕಾರವಾಗಿ ನುಗ್ಗಿದ ಇಬ್ಬರು ಸೇಲ್ಸ್‌ಮೆನ್‌‌‌ಗಳು ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ.

ಇಬ್ಬರು ಆರೋಪಿಗಳು ಒತ್ತಾಯಪೂರ್ವಕವಾಗಿ ಅತ್ಯಾಚಾರವೆಸಗಿ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಹತ್ಯೆ ಮಾಡುವ ಬೆದರಿಕೆಯೊಡ್ಡಿದ್ದಾರೆ. ತದನಂತರ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ ದೂರು ನೀಡಿದ್ದಾಳೆ.

ಪೊಲೀಸ್ ಮೂಲಗಳ ಪ್ರಕಾರ ಪ್ರಕರಣದಲ್ಲಿ ಮಹಿಳೆ ನೀಡಿದ ದೂರು ಮತ್ತು ಆಕೆಯ ಗೆಳತಿ ನೀಡಿದ ದೂರು ಹೋಲಿಕೆಯಾಗುತ್ತಿಲ್ಲ. ಸತ್ಯಾಸತ್ಯತೆಯ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ವ್ಯಕ್ತಿಗಳು ಒತ್ತಾಯಪೂರ್ವಕವಾಗಿ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ನೀಡಿದ್ದಾಳೆ. ಆದರೆ, ಮನೆಯಲ್ಲಿರುವ ಸಿಸಿಟಿವಿಯಲ್ಲಿ ಯಾವುದೇ ವ್ಯಕ್ತಿ ಮನೆಯೊಳಗೆ ಪ್ರವೇಶಿಸಿದ ದೃಶ್ಯಗಳು ಕಂಡು ಬಂದಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada