Webdunia - Bharat's app for daily news and videos

Install App

ಐದು ವರ್ಷದ ಮಗುವಿನ ಅತ್ಯಾಚಾರಿಗೆ ಮರಣದಂಡನೆ

Webdunia
ಬುಧವಾರ, 26 ಮಾರ್ಚ್ 2014 (08:49 IST)
ಐದು ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ 54 ವರ್ಷದ ವ್ಯಕ್ತಿ ಗೆ ಬಾಂಬೆ ಹೈಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ. 'ನ್ಯಾಯಾಲಯದಲ್ಲಿ ವಿಚಾರಣೆಗೊಳಪಟ್ಟ ಪ್ರಕರಣಗಳಲ್ಲಿ ಇದು ಅಪರೂಪದ್ದಾಗಿದ್ದು ಆತನ ಕೃತ್ಯ ಗಂಭೀರ ಮತ್ತು ಘೋರವಾದದ್ದು' ಎಂದು ಕೋರ್ಟ ಹೇಳಿದೆ.
PTI

ಅಪರಾಧಿ ರೊಕಡೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಎಸಗಿದ್ದು ಸಾಬೀತಾಗಿದ್ದರಿಂದ ಜಸ್ಟೀಸ್ ವಿ.ಕೆ.ಟಾಹಿಲರಮಾನಿ ಮತ್ತು ವಿ ಎಲ್ ಅಚಲಿಯಾರನ್ನೊಳಗೊಂಡ ನ್ಯಾಯಪೀಠ ಆತನಿಗೆ ಜಾರಿ ಮಾಡಿದ್ದ ಮರಣದಂಡನೆಯನ್ನುಎತ್ತಿ ಹಿಡಿದಿದೆ. ಹುಡುಗಿ ಆತನ ನೆರೆ ಮನೆಯವಳಾಗಿದ್ದು, ಘಟನೆ ಥಾಣೆ ಜಿಲ್ಲೆಯಲ್ಲಿ ಕಳೆದ ವರ್ಷ ಜನವರಿ 22 ರಂದು ನಡೆದಿತ್ತು.

" ಅಪರಾಧಿ ಗಂಭೀರ ಅಪರಾಧ ಮಾಡಿದ್ದಾನೆ. ಅಲ್ಲದೇ ಆತನಿಗೆ ತಾನು ಎಸಗಿದ ದುಷ್ಕೃತ್ಯಕ್ಕೆ ಪ್ರತಿಯಾಗಿ ಯಾವ ಪಶ್ಚಾತಾಪವೂ ಇಲ್ಲ. ಆತ ವಿಕೃತ ಮನಸ್ಸಿನವನಾಗಿದ್ದಾನೆ. ಆತನ ಹಿಡಿತದಿಂದ ತಪ್ಪಿಸಿಕೊಳ್ಳಲು ಅರಿಯದ ಪುಟ್ಟ ಬಾಲಕಿಯನ್ನು ಆತ ಬಳಸಿಕೊಂಡಿದ್ದಾನೆ. ಆತ ಬದಲಾಗುತ್ತಾನೆ ಎಂದು ನಾವು ಯೋಚಿಸಲು ಸಾಧ್ಯವೇ ಇಲ್ಲ. ಹಾಗಾಗಿ ಆತನನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ" ಎಂದು ನ್ಯಾಯಪೀಠ ತಿಳಿಸಿದೆ.

ಠಾಣೆಯ ಕೋಪರಿ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ ತನ್ನ ಮನೆಯ ಹೊರಗೆ ಆಡುತ್ತಿದ್ದ ಮಗುವನ್ನು ಪುಸಲಾಯಿಸಿ ಕರೆದುಕೊಂಡು ಹೋದ ಅಪರಾಧಿ ಬಾಲಕಿಯ ಬಾಯಿಯನ್ನು ಕಟ್ಟಿ, ಆಕೆಯ ಮೇಲೆ ಅನೇಕ ಬಾರಿ ಬಲಾತ್ಕಾರ ಎಸಗಿ ಕೊನೆಗೆ ಆಕೆಯ ಕುತ್ತಿಗೆ ಹಿಚುಕಿ ಕೊಂದಿದ್ದ. ಆನಂತರ ಆಕೆಯ ಶವವನ್ನು ಪ್ಲಾಸ್ಟಿಕ್ ಕವರ್ ಒಂದರಲ್ಲಿ ಹಾಕಿ ಹೊರಗೆ ಎಸೆದಿದ್ದ. ಮಾರನೆ ದಿನ ಆಕೆಯ ಶವ ಪತ್ತೆಯಾಗಿತ್ತು.

ಮಗು ಕಾಣೆಯಾದ ನಂತರ ಅನುಮಾನಾಸ್ಪದ ವರ್ತನೆ ತೋರುತ್ತಿದ್ದ ರೊಕಡೆಯನ್ನು ಬಂಧಿಸಲಾಯಿತು. ಆತನ ಮಗ, ಮಗಳು, ಪತ್ನಿ ಸೇರಿದಂತೆ ಗ್ರಾಮದ 27 ಜನ ಆತನ ವಿರುದ್ಧ ಕೋರ್ಟನಲ್ಲಿ ಸಾಕ್ಷಿ ನುಡಿದಿದ್ದರು ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments