Select Your Language

Notifications

webdunia
webdunia
webdunia
webdunia

ಏಜಂಟ್ ಎಕೆ 49 : ಬಿಜೆಪಿಯ ಹೊಸ ಚಿತ್ರ ಅರವಿಂದ್ ಕೇಜ್ರಿವಾಲ್‌ಗೆ ಅರ್ಪಣೆ

ಏಜಂಟ್ ಎಕೆ 49 : ಬಿಜೆಪಿಯ ಹೊಸ ಚಿತ್ರ ಅರವಿಂದ್ ಕೇಜ್ರಿವಾಲ್‌ಗೆ ಅರ್ಪಣೆ
, ಗುರುವಾರ, 27 ಮಾರ್ಚ್ 2014 (20:16 IST)
PR
PR
ನವದೆಹಲಿ: ನರೇಂದ್ರ ಮೋದಿ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು 'ಎಕೆ 49' ಮತ್ತು ಪಾಕಿಸ್ತಾನ ಏಜಂಟ್ ಎಂದು ವ್ಯಂಗ್ಯವಾಡಿದ ನಂತರ ಬಿಜೆಪಿ ಮಾಧ್ಯಮವನ್ನು ಕರೆದು 'ಏಜೆಂಟ್ ಎಕೆ 49' ಪ್ರಮಾದಗಳ ಬಗ್ಗೆ ಕಿರು ಚಿತ್ರವನ್ನು ಅರ್ಪಣೆಮಾಡುವುದಾಗಿ ತಿಳಿಸಿದೆ. ವರದಿಗಾರರಿಗೆ ಕೆಲವು ದೃಶ್ಯಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ತೋರಿಸಲಾಯಿತು. ಇವು ಕೇಜ್ರಿವಾಲ್‌ಗೆ ಸಂಬಂಧಿಸಿದ ವಿವಾದಗಳ ಬಗ್ಗೆ ಗಮನಸೆಳೆದಿದ್ದವು. ಆಮ್ ಆದ್ಮಿ ಪಕ್ಷವನ್ನು 'ಅರವಿಂದ್ ಅಪ್ನಾ ಪ್ರೊಪೆಗಂಡಾ' ಪಕ್ಷ ಎಂದು ಹೇಳಿದೆ.ಪ್ರಧಾನಿ ಅಭ್ಯರ್ಥಿ ಮೋದಿಗೆ ಎಎಪಿ ನಾಯಕನ ಸವಾಲನ್ನು ಬಿಜೆಪಿ ಹಗುರವಾಗಿ ತೆಗೆದುಕೊಂಡಿಲ್ಲ ಎನ್ನುವುದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿರುವ ಚಿತ್ರ ತೋರಿಸಿದೆ.

ಪಾಕಿಸ್ತಾನವನ್ನು ಮೂರು ಎಕೆಗಳು ಸಹಾಯಮಾಡುತ್ತಿವೆ. ಒಂದು ಎಕೆ-47, ಇದನ್ನು ಕಾಶ್ಮೀರದಲ್ಲಿ ರಕ್ತಪಾತಕ್ಕೆ ಬಳಸಲಾಯಿತು. ಎರಡನೆಯದು ಎಕೆ ಆಂಟೋನಿ. ಪಾಕಿಸ್ತಾನ ಸೇನೆಯ ಸಮವಸ್ತ್ರದಲ್ಲಿದ್ದ ಸೈನಿಕರು ನಮ್ಮ ಸೈನಿಕರ ತಲೆ ತುಂಡರಿಸಿದರು ಎಂದು ಎಕೆ ಆಂಟೋನಿ ಹೇಳಿಕೆ ಮತ್ತು ಮೂರನೆಯವರು ಎಕೆ-49 ಈಗತಾನೇ ಹೊಸ ಪಕ್ಷಕ್ಕೆ ಜನ್ಮ ನೀಡಿದೆ ಎಂದು ನರೇಂದ್ರ ಮೋದಿ ಜಮ್ಮುವಿನಲ್ಲಿ ನಡೆದ ರ‌್ಯಾಲಿಯಲ್ಲಿ ಹೇಳಿದ್ದರು. 49 ಕೇಜ್ರಿವಾಲ್ ದೆಹಲಿಯಲ್ಲಿ ಮುಖ್ಯಮಂತ್ರಿಯಾಗಿ ಆಳಿದ ದಿನಗಳ ಸಂಖ್ಯೆಯಾಗಿದೆ.

Share this Story:

Follow Webdunia kannada