Webdunia - Bharat's app for daily news and videos

Install App

ಅಯ್ಯಯ್ಯೋ..! ದೆಹಲಿಯಲ್ಲಿ ಮಹಿಳೆಯರಿಗೆ ರಕ್ಷಣೆ ಯಾಕಿಲ್ಲಾ ಗೊತ್ತಾ? ಬಿಜೆಪಿಯಿಂದ : ಹೀಗಂತ ಹೇಳಿದ್ದು ಬಿಜೆಪಿ..!

Webdunia
ಶನಿವಾರ, 30 ನವೆಂಬರ್ 2013 (11:47 IST)
PTI
PTI
" ದೆಹಲಿಯಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ? ಇದಕ್ಕೆ ಉತ್ತರ ನಾವೇ.." ಹೀಗಂತ ಪೋಸ್ಟರ್‌ ಹಾಕಿಕೊಂಡು "ದೆಹಲಿಯಲ್ಲಿ ಮಹಿಳೆಯರ ರಕ್ಷಣೆ ಸಾಧ್ಯವಾಗದಿರುವುದಕ್ಕೆ ನಾವೇ ಕಾರಣ ಎಂಬಂತೆ ಪ್ರಕಟಿಸಿದ್ದಾರೆ ಸ್ವತಃ ಬಿಜೆಪಿ ಕಾರ್ಯಕರ್ತರು.

ಬಿಜೆಪಿ ಅಭ್ಯರ್ಥಿ ಪರ್ವೇಶ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಯುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ. ಇಂತಹ ಎಲ್ಲಾ ಸಮಸ್ಯೆಗಳಿಗೆ ಉತ್ತರ ಬಿಜೆಪಿಯಿಂದ ಸಿಗಲಿದೆ. ಬಿಜೆಪಿಗೆ ಮತ ಹಾಕಿದ್ರೆ ಮಹಿಳೆಯರಿಗೆ ರಕ್ಷಣೆ ಒದಗಿಸುವ ಕೆಲಸ ಮಾಡ್ತೀವಿ ಎಂದು ಹೇಳಿಕೊಳ್ಳುವಂತೆ ಒಂದು ಪೋಸ್ಟರ್‌ ಪ್ರಿಂಟ್ ಮಾಡಿ ಅದನ್ನು ಕ್ಷೇತ್ರದ ಎಲ್ಲೆಡೆ ಅಂಟಿಸಿ ಜನರ ಗಮನ ಸೆಳೆಯಬೆಕು ಅಂತ ಪರ್ವೇಶ್‌ ಪ್ರಯತ್ನಿಸಿದ್ರು.

ಆದ್ರೆ ಇಂಗ್ಲೀಷ್‌ನಲ್ಲಿ ಉಂಟಾದ ಪದ ದೋಷದಿಂದಾಗಿ, ಅದರ ಅರ್ಥವೇ ಬದಲಾಗಿ ಹೋಗಿದೆ. ಪರ್ವೇಶ್‌ ಪ್ರದರ್ಶಿಸಿರುವ ಪೋಸ್ಟರ್‌ಗಳು ಇದೀಗ ಅಪಹಾಸ್ಯಕ್ಕೆ ಕಾರಣವಾಗಿದೆ.

' ದೆಹಲಿಯಲ್ಲಿ ಮಹಿಳೆಯರು ಸುರಕ್ಷಿತವೆಂದು ಪರಿಗಣಿಸದೇ ಇರಲು ಕಾರಣವೇನು?' 'ಇದಕ್ಕೆ ನಾವೇ (ಬಿಜೆಪಿ) ಉತ್ತರ' ಎಂದು ಪ್ರಕಟಿಸುವ ಮೂಲಕ ಮಹಿಳೆಯರಿಗೆ ಬಿಜೆಪಿಯಿಂದಲೇ ಕಂಟಕ ಎಂದು ತೋರಿಸಿ, ಅಪಹಾಸ್ಯಕ್ಕೀಡಾಗಿದ್ದರೆ. ಇಲ್ಲಿ ಸುರಕ್ಷತೆ ನೀಡಲು ಬಿಜೆಪಿ ಸಮರ್ಥವಿದೆ ಎನ್ನುವ ಬದಲು, ಮಹಿಳೆಯರ ಅಸುರಕ್ಷತೆಗೆ ಯಾರು ಕಾರಣ ಎನ್ನುವ ಪದದ ಕೆಳಗೆ, ಅದಕ್ಕೆ ನಾವೇ ಉತ್ತರ ಎಂದು ಬರೆದಿರುವುದು, ಅಪಹಾಸ್ಯಕ್ಕೆ ಕಾರಣವಾಗಿದೆ.

ಬಿಜೆಪಿಯ ಒಬ್ಬ ಜನಪ್ರತಿನಿಧಿ ಇಂತಹ ಪೋಸ್ಟರ್‌ ಪ್ರಕಟಿಸುವುದರ ಮೂಲಕ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments