Webdunia - Bharat's app for daily news and videos

Install App

ವಿಭಿನ್ನ ಕಥೆಗಳ ಸಂಗಮ 'ದಸ್ ಕಹಾನಿಯಾನ್'

Webdunia
IFM
ಕೆಲಬಾರಿ ಭರ್ತಿ ಎರಡೂವರೆ ಗಂಟೆಕಾಲ ಸಮಯ ತೆಗೆದುಕೊಂಡೂ ಕಥೆ ಹೇಳಲಾಗದ ತಿಣುಕಾಡುವ ನಿರ್ದೇಶಕರು ಮತ್ತು ಹತ್ತು ವಿಭಿನ್ನ ಕಥೆಗಳನ್ನು ಎರಡೂವರೆ ಗಂಟೆಯ ಅವಧಿಯಲ್ಲಿ ಸಾಫ್ ಸೀದಾ ಮನಕ್ಕೆ ನಾಟುವಂತೆ ಸಂಜಯ ಗುಪ್ತಾ ಮತ್ತವರ ನಿರ್ದೇಶಕರ ತಂಡ ಯಶಸ್ವಿಯಾಗಿದೆ. ಸಂಶಯವೇ ಬೇಡ ಚಿತ್ರಕಥೆ ಮತ್ತು ಕಥಾ ಪ್ರಸ್ತುತಿಯಲ್ಲಿ ಹತ್ತು ಕಥೆಗಳ ನಿರ್ದೇಶಕರು ಸಂಪೂರ್ಣವಾಗಿ ಸಫಲರಾಗಿದ್ದಾರೆ.

ಡರ್ನಾ ಮನಾ ಹೈ, ಡರ್ನಾ ಜರೂರಿ ಹೈ, ಸಲಾಮೇ ಇಷ್ಕ್ ಮುಂತಾದವುಗಳೊಂದಿಗೆ 'ದಸ್ ಕಹಾನಿಯಾನ್' ಚಿತ್ರವನ್ನು ಹೋಲಿಸುವುದು ಸರಿಯಲ್ಲ. ಇದಕ್ಕೆ ಚಾಕ್ ಮತ್ತು ಚೀಸ್‌ನಂತೆ ನಿರೂಪಣಾ ಶೈಲಿಯು ವಿಭಿನ್ನತೆಯೊಂದೇ ಕಾರಣವಲ್ಲ. 'ದಸ್ ಕಹಾನಿಯಾನ್'ನಲ್ಲಿರುವ ಪ್ರತೀ ಹತ್ತು ನಿಮಿಷದ ಕಥೆಯಲ್ಲಿ ಹೇಳುವಂತಹ ವಿಷಯವಿದೆ. ಅಲ್ಲದೆ ಇದರಲ್ಲಿರುವ ಸಂದೇಶವು ಸ್ಪಷ್ಟವಾಗಿದೆ. ಈ ಮೊದಲಿನ ಕಿರುಗಥೆಗಳ ಚಿತ್ರಕ್ಕಿಂತ 'ದಸ್ ಕಹಾನಿಯಾ' ಚಿತ್ರವು ವಿಭಿನ್ನವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ದಿನದ ಕೊನೆಯಲ್ಲಿ ಪರಿಣಾಮಕಾರಿಯಾಗಿ ಆಸಕ್ತಿದಾಯಕ ಚಿತ್ರವನ್ನು ನೋಡಿದ ಅನುಭವ ಪ್ರೇಕ್ಷಕನಿಗೆ ಆಗುವುದರಲ್ಲಿ ಸಂಶಯವಿಲ್ಲ. ಸಂಜಯ್ ಗುಪ್ತಾ ಮತ್ತು ಅವರ ನಿರ್ದೇಶಕರ ತಂಡವು ಹತ್ತು ವಿವಿಧ ಕಥೆಗಳನ್ನು ಆಯ್ಕೆ ಮಾಡಿದ್ದು, ಅವುಗಳು ಒಂದಕ್ಕೊಂದು ಸಂಬಂಧವೇ ಇಲ್ಲದ, ಸೂತ್ರವೂ ಇಲ್ಲದ ಕಥೆಗಳನ್ನು ಒಂದೇ ಚಿತ್ರದಲ್ಲಿ ಹೇಳುವ ನಿರ್ದೇಶಕರ ಸಾಹಸ ಮೆಚ್ಚುವಂತದ್ದು. ಹತ್ತು ಕಥೆಗಳ ಮುಕ್ತಾಯ ಮತ್ತು ಆರಂಭ ಎಕರೂಪವಾಗಿಲ್ಲ. ಎಲ್ಲವೂ ಭಿನ್ನ, ವಿಭಿನ್ನ.

ರೈಸ್ ಪ್ಲೇಟ್
( ಅಭಿನಯ: ಶಭಾನಾ ಆಜ್ಮಿ, ನಾಸೀರುದ್ದಿನ್ ಶಾ)
ಒಬ್ಬ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ನಡುವೆ ನಡೆಯುವ ವಾಗ್ಯುದ್ದವೇ ರೈಸ್ ಪ್ಲೇಟ್‌ನ ಕಥಾ ವಸ್ತು. ಹಿಂದೂ ಯುವತಿಯ ಅನ್ನದ ತಟ್ಟೆಯ ಮೇಲೆ ಮುಸ್ಲಿಂ ಯುವಕ ಹಕ್ಕು ಸಾಧಿಸಿದ ಸಮಯದಲ್ಲಿ ಆಕೆ ಎದುರಿಸಿದ ಸವಾಲುಗಳೇ ಚಿತ್ರದ ಕಥಾವಸ್ತು. ಹಸಿವು ಮತ್ತು ನಂಬಿಕೆಯ ನಡುವೆ ತೊಳಲಾಡುವ ಯುವತಿ ಯಾವ ರೀತಿ ಪರಿಸ್ಥಿತಿಗೆ ಪ್ರತಿಕ್ರಿಯಿಸುತ್ತಾಳೆ ಎನ್ನುವುದನ್ನು ತಿಳಿದುಕೊಳ್ಳಬೇಕಾದರೆ ನೀವು ಚಿತ್ರವನ್ನು ನೋಡಲೇಬೇಕಾಗುತ್ತದೆ. ಇದು ರೋಹಿತ್ ರಾಯ್ ಅವರ ಚೊಚ್ಚಲ ನಿರ್ದೇಶನ. ಶಬಾನಾ ಮತ್ತು ನಾಸೀರುದ್ದಿನ್ ಶಾ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ.

ಗುಬ್ಬಾರೆ
( ಅಭಿನಯ: ನಾನಾ ಪಾಟೇಕರ್, ಅನಿತಾ ಮತ್ತು ರೋಹಿತ್ ರಾಯ್)

ಬಸ್‌ನಲ್ಲಿ ಪ್ರಯಾಣಿಸುತ್ತಿರುವಾಗ ಗಂಡ ಮತ್ತು ಹೆಂಡತಿಯ ನಡುವೆ ವಾಗ್ವಾದ ನಡೆದು, ಹೆಂಡತಿಯು 11 ಬಲೂನುಗಳನ್ನು ಹಿಡಿದುಕೊಂಡು ಕುಳಿತಿದ್ದ ಒಬ್ಬ ಪಿತೂರಿಕಾರ ಮನುಷ್ಯನ ಬಳಿಯಲ್ಲಿ ಕುಳಿತುಕೊಳ್ಳುತ್ತಾಳೆ. ಇದರಲ್ಲಿ ನಾನಾ ಪಾಟೇಕರ್, ಅನಿತಾ ಮತ್ತು ರೋಹಿತ್ ರಾಯ್ ತಾರಾಗಣವಿದ್ದು, ಜೀವನದಲ್ಲಿ ಮುಖ್ಯ ಪಾಠದ ಕುರಿತು ಈ ಮನುಷ್ಯನ ಜೀವನದ ಪಯಣದೊಳಗೆ ಈ ಕಥೆಯ ಪ್ರಯಾಣವು ಸಾಗುತ್ತದೆ.ನಾನಾ ಅಭಿನಯ ಚಕಾರವೆತ್ತುವಂತಿಲ್ಲ. ಅನಿತಾ ಅಭಿನಯ ಗಮನ ಸೇಳೆಯುತ್ತದೆ. ಇದು ಸಂಜಯ ಗುಪ್ತಾ ಅವರ ಭಟ್ಟಿಯಲ್ಲಿ ತಯಾರು ಆಗಿದ್ದು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments