Webdunia - Bharat's app for daily news and videos

Install App

ರಂಗು ಕಳೆದುಕೊಂಡ 'ದೆಹಲಿ 6'ನಲ್ಲಿ ಏನಿದೆ?

Webdunia
IFM
ಚಿತ್ರ: ದೆಹಲಿ 6
ತಾರಾಗಣ: ಅಭಿಷೇಕ್ ಬಚ್ಚನ್, ಸೋನಮ್ ಕಪೂರ್, ವಹೀದಾ ರೆಹಮಾನ್, ಓಂ ಪುರಿ, ಅಮಿತಾಭ್ ಬಚ್ಚನ್
ನಿರ್ದೇಶನ: ರಾಕೇಶ್ ಓಂಪ್ರಕಾಶ್ ಮೆಹ್ರಾ
ಸಂಗೀತ: ಎ.ಆರ್. ರೆಹಮಾನ್

ನ್ಯೂಯಾರ್ಕ್ ಮ‌ೂಲದ ರೋಷನ್ (ಅಭಿಷೇಕ್) ತನ್ನ ಅಜ್ಜಿಯನ್ನು (ವಹೀದಾ) ತಾಯ್ನೆಲದಲ್ಲಿಯೇ ಪ್ರಾಣ ಬಿಡುವ ಆಕೆಯ ಆಸೆಯಂತೆ ಕರೆದುಕೊಂಡು ಭಾರತಕ್ಕೆ ಬಂದಿರುತ್ತಾನೆ. ಅದು ದೆಹಲಿಯ ಚಾಂದ್ನಿ ಚೌಕ್. ಅಲ್ಲಿನ ಪಿನ್ ಕೋಡ್ 06.

ಆಕೆಯ ಮಗನಿಗೆ ಭಾರತವೆಂದರೆ ದ್ವೇಷ. ಅದು ಮತೀಯವಾದಿಗಳೇ ತುಂಬಿರುವ ದೇಶ ಎಂಬ ಭಾವನೆ ಆತನಿಗೆ. ಅದೇ ಕಾರಣಕ್ಕೆ ಭಾರತದಿಂದ ತನ್ನ ಮುಸ್ಲಿಮ್ ಹೆಂಡತಿಯೊಂದಿಗೆ ವಿದೇಶಕ್ಕೆ ಹೋಗಿರುತ್ತಾನೆ. ಆದರೂ ಮೊಮ್ಮಗ ಇದೊಂದು ಚಿಕ್ಕ ಕೆಲಸ ಎಂಬಂತೆ ಅಜ್ಜಿಯನ್ನು ಕರೆದುಕೊಂಡು ದೆಹಲಿಯ ಹವೇಲಿಗೆ ಕರೆದುಕೊಂಡು ಬರುತ್ತಾನೆ. ರೋಷನ್ ಕೂಡ ಭಾರತದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿರುವುದಿಲ್ಲ. ಹಾಗಾಗಿ ತನ್ನ ತಂದೆಯ ಅಭಿಪ್ರಾಯ ಸರಿಯಿರಬಹುದು ಅಂದುಕೊಂಡಿರುತ್ತಾನೆ. ಆದರೆ ಭಾರತಕ್ಕೆ ಬಂದ ಮೇಲೆ ಆತನ ದೃಷ್ಟಿಕೋನ ಬದಲಾಗುತ್ತದೆ.

ಹೀಗೆ ಭಾರತಕ್ಕೆ ಬಂದಿದ್ದ ರೋಷನ್ ಅಕ್ಕಪಕ್ಕದ ಮನೆಯವರೊಂದಿಗೆ ತುಂಬಾ ಸಲುಗೆಯಿಂದ ಸ್ನೇಹ ಬೆಳೆಸುತ್ತಾನೆ. ಆತನಿಗೆ ಭಾರತದ ಪರಿಸರ, ಆಹಾರ, ಜೀವನ ಕ್ರಮ, ಇಲ್ಲಿನ ಜನ ಎಲ್ಲವೂ ಇಷ್ಟವಾಗುತ್ತದೆ. ಜತೆಗೆ ಪಕ್ಕದ ಮನೆಯ ಸುಂದರಿ ಬಿಟ್ಟೂ (ಸೋನಮ್ ಕಪೂರ್) ಕೂಡ. ನಂತರ ಅಲ್ಲಿಯೂ ವಿಚಿತ್ರ ವ್ಯಕ್ತಿಯೊಬ್ಬನ ಕಾರಣದಿಂದ ಕೋಮು ಗಲಭೆ ನಡೆದು ಬಿಡುತ್ತದೆ. ಅಣ್ಣ-ತಮ್ಮಂದಿರು, ಅತ್ತಿಗೆಯರಾಟ ಇಲ್ಲಿಯೂ ನಡೆಯುತ್ತದೆ.

IFM
ರೋಷನ್‌ಗೆ ಹತ್ತಿರದವರ ಒಳ್ಳೆಯತನದ ಸೋಗಿನ ಪರಿಚಯವಾಗುತ್ತದೆ. ಈ ಜಗತ್ತಿನಲ್ಲಿ ಇತರರನ್ನು ನಾವು ತುಂಬಾ ಬೇಗ ಎಂಥವರೆಂದು ನಿರ್ಧರಿಸಿಬಿಡುತ್ತೇವೆ. ಆದರೆ ನಮ್ಮೊಳಗೆ ಹೊಕ್ಕು ನೋಡಿದಾಗ ನಮ್ಮಲ್ಲಿನ ಹುಳುಕುಗಳು ಹಾಗೇ ಉಳಿದಿರುವುದು ಗಮನಕ್ಕೆ ಬರುತ್ತದೆ ಎಂಬುವುದನ್ನೂ ಆತ ಅರ್ಥೈಸಿಕೊಳ್ಳುತ್ತಾನೆ.

ಹಲವಾರು ಸೂಕ್ಷ್ಮ ವಿಚಾರಗಳು ಬಂದಾಗ ನಿರ್ದೇಶಕರು ವಹಿಸಿರುವ ಚಾಣಾಕ್ಷತನ ಮೆಚ್ಚುಗೆ ಗಳಿಸುತ್ತದೆ. ಎಲ್ಲಿಯೂ ಅತಿರೇಕವೆನಿಸದಂತೆ ಎಲ್ಲವನ್ನೂ ಹಿತಮಿತವಾಗಿ ತೋರಿಸಲಾಗಿದೆ. ಆದರೆ ಚಿತ್ರಕಥೆ ಬೋರು ಹೊಡೆಸುತ್ತದೆ. ರೊಮ್ಯಾಂಟಿಕ್ ವಿಚಾರಗಳು ತೀರಾ ಬಸವಳಿದು ಪ್ರೀತಿಯಿಂದಲೇ ಕಥೆ ಬಿದ್ದು ಹೋಗುತ್ತದೆ.

ಅಭಿಷೇಕ್ ಬಚ್ಚನ್ ವಿದೇಶೀಯನ ಪಾತ್ರಕ್ಕೆ ಸರಿಯಾಗಿ ಹೊಂದಿಕೊಂಡಿಲ್ಲ. ಸೋನಮ್ ಬೇಕೆಂದು ಅನ್ನಿಸುತ್ತಾಳೆ. ವಹೀದಾ ರೆಹಮಾನ್ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಿಷಿ ಕಪೂರ್‌ರನ್ನು ಸುಮ್ಮನೆ ಕರೆಸಿ ಬಣ್ಣ ಹಚ್ಚಲಾಗಿದೆ. ಓಂಪುರಿ, ಪವನ್ ಮಲ್ಹೋತ್ರಾ, ವಿಜಯ್ ರಾಜ್, ದೀಪಕ್ ದೊಬ್ರಿಯಾಲ್, ದಿವ್ಯಾ ದತ್ತಾ ಮತ್ತು ಸೈರಸ್ ಸಾಹುಕಾರ್ ಇಷ್ಟವಾಗದಿರಲು ಕಾರಣಗಳು ಕಡಿಮೆ ಸಿಗುತ್ತವೆ.

ಅಮಿತಾಭ್ ಬಚ್ಚನ್‌ರ ಕೆಲವು ನಿಮಿಷಗಳು ವೇಸ್ಟ್ ಆಗಿವೆ. ದುಷ್ಟನ ಪಾತ್ರದಲ್ಲಿರುವ ಅಖಿಲೇಂದ್ರ ಮಿಶ್ರ ಓ.ಕೆ. 'ದೆಹಲಿ 6' ಪ್ರಾರಂಭದ ಕೆಲ ಹೊತ್ತು ಬೋರು ಹೊಡೆಸಿದರೂ ದ್ವಿತೀಯಾರ್ಧ ಚೇತರಿಸಿಕೊಳ್ಳುತ್ತದೆ. ಮತ್ತೆ ಕ್ಲೈಮ್ಯಾಕ್ಸ್ ಪೇಲವ ಮಾಡಲಾಗಿದೆ.

' ದೆಹಲಿ 6' ನಿರ್ದೇಶಿಸಿರುವ ರಾಕೇಶ್ ಓಂಪ್ರಕಾಶ್ ಮೆಹ್ರಾರ ಹಿಂದಿನ ಚಿತ್ರ 'ರಂಗ್ ದೇ ಬಸಂತಿ'ಗಿಂತ ದೂರವೇ ಉಳಿಯುತ್ತಾರೆ. ಅಕ್ಸ್ ಅವರ ಮೊದಲ ಚಿತ್ರ. ಆದರೂ ಅಲ್ಲಲ್ಲಿ ಕೆಲವು ನೈಜ ಸತ್ಯಗಳನ್ನು ಬಹಿರಂಗಪಡಿಸುತ್ತಾ ಹೋಗುತ್ತಾರೆ. ಸಂಗೀತದ ಬಗ್ಗೆ ಉತ್ತಮ ಅಭಿಪ್ರಾಯಗಳು ಕೇಳಿ ಬಂದಿವೆ.

IFM

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments