Webdunia - Bharat's app for daily news and videos

Install App

ಮಸಾಲೆಯೇ ಇಲ್ಲದ 'ಆಲೂ ಚಾಟ್' ಸವಿ ಸಪ್ಪೆ

Webdunia
IFM
ಸಿಂಪಲ್ ಸ್ಟೋರಿಯನ್ನು ಸಿಂಪಲ್ ಆಗಿರುವ ಮಾದರಿಯಲ್ಲೇ ನಿರೂಪಿಸಿ ಸಿನಿಮಾ ಮಾಡುವ ಸಂಪ್ರದಾಯವನ್ನು ಹೃಷಿಕೇಶ್ ಮುಖರ್ಜಿ ಹುಟ್ಟುಹಾಕಿರುವಂತಿದೆ.ಹಲವರು ಇದರಿಂದ ಉತ್ತೇಜಿತರಾದಂತಿದೆ. ಇದಕ್ಕೆ ರಾಬಿ ಗ್ರೆವಾಲ್ ಕೂಡಾ ಹೊರತಲ್ಲ. ರಾಬಿ ಗ್ರೆವಾಲ್ ಅವರ ನಿರ್ದೇಶನದ 'ಆಲೂ ಚಾಟ್' ಯಾಕೋ ಮಸಾಲೆಯೇ ಇಲ್ಲದ ಆಲೂ ಚಾಟ್ ತಿಂದಂತಿದೆ ಎಂದು ಒಂದೇ ಮಾತಿನಲ್ಲಿ ಹೇಳಬಹುದೇನೋ.

ನಿಜವಾದ ಅಂಶ ಎಂದರೆ ಸಿಂಪಲ್ ಕಥೆಯಿಂದಾಗಿಯೇ ಸಿನಿಮಾ ತನ್ನ ಸಿಹಿಯನ್ನೇ ಕಳೆದುಕೊಂಡಂತೆ ಅನಿಸುತ್ತದೆ. ಚಿತ್ರದಲ್ಲಿ ಕೆಲವೊಂದು ಭಾಗಗಳು ನಿಮ್ಮನ್ನು ನಗಿಸಬಹುದು. ಕೆಲವೆಡೆ ಮನೆಯಲ್ಲಿ ಕೂತು ಸುಮ್ಮನೆ ಟಿವಿ ಸೀರಿಯಲ್ಲು ನೋಡಿದಂತೆ ಅನಿಸುತ್ತದೆ. ಜತೆಗೆ ಈ ಸಿನಿಮಾವನ್ನು 20 ನಿಮಿಷ ನೋಡಿದ ತಕ್ಷಣ ಸಿನಿಮಾ ಹೇಗೆ ಅಂತ್ಯವಾಗುತ್ತದೆ ಎಂದು ನಾವೇ ಧಾರಾಳವಾಗಿ ಗೆಸ್ ಮಾಡಬಹುದು. ಆಲೂ ಚಾಟ್ ಸವಿಯಲು ಹೊರಟರೆ ದುಡ್ಡು ಕೊಟ್ಟಿದ್ದು ದಂಡ ಅಂತ ಚಾಟ್ ಅಂಗಡಿಯಿಂದ ಮೂಗು ಮುರಿದು ಬಂದಂತೆ ಥಿಯೇಟರ್‌ನಿಂದಲೇ ಬರಬೇಕಷ್ಟೆ. ಮಸಾಲೆಯೇ ಇಲ್ಲದ ಚಾಟ್ ರುಚಿ ಹೇಗಿರಬಹುದು ಊಹಿಸಿ ನೋಡಿ.

IFM
ನಿಖಿಲ್ (ಅಫ್ತಾಬ್) ತನ್ನ ಕುಟುಂಬ ವರ್ಗದ ಜತೆಯಾಗಲು ದೆಹಲಿಯಿಂದ ಬರುತ್ತಾನೆ. ಅವನ ಕುಟುಂಬ ವರ್ಗ ಅವನಿಗೆ ಮದುವೆಯಾಗಲು ವಧುಪರೀಕ್ಷೆಗಾಗಿ ಪಂಜಾಬಿ ಹುಡುಗಿಯರನ್ನೇ ತೋರಿಸುತ್ತಿರುತ್ತಾರೆ. ಅಪ್ಪನ ಕೋಪತಾಪವನ್ನು ಅರಿತಿದ್ದ ನಿಖಿಲ್ ತನ್ನ ಅಪ್ಪ ಪುರುಷೋತ್ತಮನಿಗೆ ತನ್ನ ಪ್ರೀತಿಯನ್ನು ಹೇಳಲು ಹಿಂಜರಿಯುತ್ತಾನೆ. ಹೀಗಾಗಿ ತನ್ನ ತಂದೆಯ ಆತ್ಮೀಯ ಗೆಳೆಯನನ್ನು ಭೇಟಿಯಾಗುವ ನಿಖಿಲ್ ತನ್ನ ವಿಷಯವನ್ನು ಹೇಳುತ್ತಾನೆ. ಜತೆಗೆ ಅಪ್ಪನ ಗೆಳೆಯನ ಸಹಕಾರದಿಂದ ತನ್ನ ಗರ್ಲ್‌ಫ್ರೆಂಡನ್ನು (ಅಮನಾ ಶರೀಫ್) ತನ್ನ ಕುಟುಂಬಕ್ಕೆ ಕರೆತರುವಲ್ಲಿ ಸಫಲನಾಗುತ್ತಾನೆ. ಹೀಗೊಂದು ಆಲೂ ಚಾಟ್ ಮುಗಿಯುತ್ತದೆ.

ಆಲೂ ಚಾಟ್ ಎಡವೋದು ಯಾಕೆ ಎಂದರೆ ಪ್ರಮುಖವಾಗಿ ಅನಿಸುವುದು, ಇದು ಪ್ರೇಕ್ಷಕರ ಗಮನವನ್ನು ತನ್ನೆಡೆ ಹಿಡಿದಿಟ್ಟುಕೊಳ್ಳುವಲ್ಲಿ ಸೋಲುವುದರಿಂದ. ಅದೇ ಹಳೆಯ ಟ್ರಿಕ್ಕುಗಳನ್ನು ಮಾಡುತ್ತೋ ಹೋದರೆ ಜನ ಇಷ್ಟಪಡುವುದಿಲ್ಲ ಎಂದು ಯಾಕೋ ಆಲೂ ಚಾಟ್ ಸ್ಕ್ರೀನ್‌ಪ್ಲೇ ನಿರ್ವಹಿಸಿದ ದಿವ್ಯಾನಿಧಿಗೆ ಅರ್ಥವಾಗಿಲ್ಲವೇನೋ. 'ಮೇರಾ ಪೆಹ್ಲಾ ಪೆಹ್ಲಾ ಪ್ಯಾರ್' ಎಂಬ ಎಂಪಿಥ್ರೀ ನೀಡಿ ಶಹಬ್ಬಾಸ್ ಗಿರಿ ಪಡೆದ ರಾಬಿ ಗ್ರೇವಾಲ್ 'ಆಲೂ ಚಾಟ್' ಮಾತ್ರ ಯಾಕೋ ವರ್ಕ್ ಔಟ್ ಆಗಿಲ್ಲ.

ಆದರೂ, ಆಲೂಚಾಟ್ ಸಂಗೀತ ಮಾತ್ರ ಸವಿಯಾಗಿದೆ. ಕೇಳುಗನ ಮನ ತಣಿಸುತ್ತದೆ. ಪ್ರೇಮಿಗಳಿಗೂ ಇದು ಹೇಳಿ ಮಾಡಿಸಿದಂತಿದೆ ಎಂದರೆ ತಪ್ಪಲ್ಲ. ಸಂಭಾಷಣೆ ಹೆಣೆದಿದ್ದು ಚೆನ್ನಾಗಿದೆ. ಅಫ್ತಾಬ್ ಹಾಗೂ ಅಮನಾ ಇಬ್ಬರೂ ಕೆಲವೊಂದು ಸನ್ನಿವೇಶಗಳ ನಟನೆಯಲ್ಲಿ ಅಷ್ಟಾಗಿ ಗಮನ ಸೆಳೆಯದಿದ್ದರೂ ಒಟ್ಟಾರೆ ಒಕೆ. ಬಹುಶಃ ಇದು ಅವರ ತಪ್ಪೂ ಅಲ್ಲ ಬಿಡಿ. ಸಹನಟರ ನಟನೆ ಚೆನ್ನಾಗಿದೆ. ಒಟ್ಟಾಗಿ ಹೇಳುವುದಾದರೆ ಆಲೂ ಚಾಟ್‌ನಲ್ಲಿ ಮಸಾಲೆಯೇ ಇಲ್ಲ. ಹಾಗಾಗಿ ಮತ್ತೆ ಆಲೂ ಸವಿ ಸವಿಯಬೇಕೆನಿಸುವುದಿಲ್ಲ. ಸಾಮಾನ್ಯವಾಗಿದೆ ಎನ್ನಬಹುದೇನೋ.
IFM

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments