Webdunia - Bharat's app for daily news and videos

Install App

ಮನೋರಂಜನಾತ್ಮಕ ಚಿತ್ರ ರಬ್ನೆ ಬನಾ ದಿ ಜೋಡಿ

Webdunia
IFM
ನಿರ್ಮಾಪಕ: ಯಶ್ ಚೋಪ್ರಾ, ಆದಿತ್ಯ ಚೋಪ್ರಾ.
ನಿರ್ದೇಶನ, ಕತೆ, ಚಿತ್ರಕತೆ, ಸಂಭಾಷಣೆ: ಆದಿತ್ಯ ಚೋಪ್ರಾ.
ಸಾಹಿತ್ಯ: ಜಯ್‌ದೀಪ್ ಸಹಾನಿ
ಸಂಗೀತಕಾರ: ಸಲೀಮ್ ಮರ್ಚೆಂಟ್-ಸುಲೇಮಾನ್ ಮರ್ಚೆಂಟ್.
ಕಲಾವಿದರು: ಶಾರುಖ್ ಖಾನ್, ಅನೌಷ್ಕ ಶರ್ಮ, ವಿನಯ್ ಪಾಠಕ್, ವಿಶೇಷ ಭೂಮಿಕೆಯಲ್ಲಿ- ಕಾಜೋಲ್, ರಾಣಿ ಮುಖರ್ಜಿ, ಪ್ರೀತಿ ಜಿಂಟಾ, ಲಾರ ದತ್ತಾ ಮತ್ತು ಬಿಪಾಶ ಬಸು.

ರೊಮ್ಯಾಂಟಿಕ್ ಚಿತ್ರ ತಯಾರಿಸುವುದರಲ್ಲಿ ಯಶ್‌ರಾಜ್ ಫಿಲಂಸ್ ಮಹಾರಥಿಯೆನಿಸಿದ್ದಾರೆ. ಯಶ್ ಚೋಪ್ರಾ ಬಹಳಷ್ಟು ರೊಮ್ಯಾಂಟಿಕ್ ಚಿತ್ರಗಳನ್ನು ನೀಡಿದ್ದಾರೆ ಮತ್ತು ಈ ಬಾರಿ ಆದಿತ್ಯ ಚೋಪ್ರಾ ಸಹ ಮುಳುಗುತ್ತಿರುವ ಯಶ್ ರಾಜ್ ಫಿಲಂಸ್‌ ಅನ್ನು ಮೇಲತ್ತಲು ತಮ್ಮ ಎವರ್ ಗ್ರೀನ್ ಫಾರ್ಮುಲಾಗೆ ಮರಳಿದ್ದಾರೆ.

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂದು ಹೇಳಲಾಗುತ್ತದೆ ಮತ್ತು ನಿಜವಾಗಿ ಪ್ರೀತಿಸಿದವರಲ್ಲಿ ದೇವರೇ ಕಾಣಿಸುತ್ತಾನೆ ಎನ್ನಲಾಗುತ್ತದೆ. ಈ ರೀತಿಯ ನಿಜವಾದ ಪ್ರೀತಿಯಲ್ಲಿ ಯಾವುದೇ ಸ್ವಾರ್ಥ ಇರುವುದಿಲ್ಲ ಬದಲಾಗಿ ಇನ್ನೊಬ್ಬರ ಖುಷಿಯನ್ನೇ ಯಾವಾಗಲೂ ಪ್ರೇಮಿಗಳು ಬಯಸುತ್ತಾರೆ. ಇವೇ ಹಳೆಯ ವಿಷಯಗಳನ್ನು ಆಧಾರವಾಗಿರಿಸಿ ಆದಿತ್ಯ ಹೊಸ ರೀತಿಯಲ್ಲಿ ಚಿತ್ರವನ್ನು ಪ್ರಸ್ತುತ ಪಡಿಸಿದ್ದಾರೆ.

ಯಶ್ ರಾಜ್ ಹಳೆಯ ಚಿತ್ರಕ್ಕೂ ರಬ್ನೆ ಬನಾ ದಿ ಜೋಡಿಗೂ ಹಲವಾರು ವತ್ಯಾಸಗಳಿವೆ. ಈ ಬಾರಿ ಸ್ವಿರ್ಜರ್ಲ್ಯಾಂಡ್‌ನಲ್ಲಿ ಚಿತ್ರೀಕರಣ ಮಾಡಲಾಗಿಲ್ಲ ಬದಲಾಗಿ ಭಾರತದ ಒಂದು ನಗರದಲ್ಲಿಯೇ ಕಥೆ ಸಾಗುತ್ತದೆ. ಈ ಬಾರಿ ಚಿತ್ರದಲ್ಲಿನ ಪಾತ್ರಧಾರಿಗಳು ದುಬಾರಿ ಬೆಲೆಯ ಉಡುಪು ಧರಿಸುವುದಿಲ್ಲ ಬದಲಾಗಿ ಸಾಮಾನ್ಯರಂತಹ ಉಡುಪುಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಸೌಂದರ್ಯ ಮುಖ ಅಥವಾ ದೇಹದಲ್ಲಿಲ್ಲ ಬದಲಾಗಿ ಹೃದಯದಲ್ಲಿದೆ ಎಂಬುದನ್ನು ತೋರಿಸಲಾಗಿದೆ.
IFM


ಈ ಕಥೆ ಸುರಿಂದರ್ ಸಹಾನಿಯದ್ದು (ಶಾರುಖ್ ಖಾನ್). ಪಂಜಾಬ್ ಪವರ್‌ನಲ್ಲಿ ಸುರಿಂದರ್ ಉದ್ಯೋಗಿ, ಒಳ್ಳೆಯ ವ್ಯಕ್ತಿ ಆದರೆ ಆಧುನಿಕ ಭಾಷೆಯಲ್ಲಿ ಹೇಳುವುದಾದರೆ 'ಸ್ಮಾರ್ಟ್' ಅಲ್ಲ. ದೊಡ್ಡ ಕನ್ನಡಕ ಹಾಕಿಕೊಳ್ಳುವ ಸುರಿಂದರ್‌ಗೆ ಫ್ಯಾಶನ್ ಎಂದರೇನೆಂದೇ ತಿಳಿಯದು. ಸುರಿಂದರ್‌ ತನ್ನ ಪ್ರೋಫೆಸರ್‌ರ ಮಗಳ ಮದುವೆಗೆ ಹೋಗುತ್ತಾನೆ ಆದರೆ ದಾರಿಯಲ್ಲಿ ಅಪಘಾತಕ್ಕೀಡಾಗಿ ವಧು ತಾನಿ ಪ್ರೇಮಿಸುತ್ತಿದ್ದ ವರ ಮತ್ತು ಆತನ ಮನೆಯವರೆಲ್ಲರೂ ಸಾವಿಗೀಡಾಗುತ್ತಾರೆ.

ತನ್ನ ತಂದೆಯ ಮಾತಿನಂತೆ ತಾನಿ ಸುರಿಂದರ್‌ನನ್ನು ಮದುವೆಯಾಗುತ್ತಾಳೆ. ತಾನಿಯಾದು ಸುರಿಂದರ್‌ಗಿಂತ ವಿರುದ್ಧ ವ್ಯಕ್ತಿತ್ವ. ತಾನಿ ಸುರಿಂದರ್‌ಗೆ ಋಣಿಯಾಗಿರುತ್ತಾಳೆ ಆದರೆ ಆತನನ್ನು ಪ್ರೀತಿಸುವುದಿಲ್ಲ. ತಾನಿ ಡಾನ್ಸ್ ಕಲಿಯಲು ಹೋಗುತ್ತಾಳೆ ಮತ್ತು ಸುರಿಂದರ್ ಸಹ ಹೊಸ ಲುಕ್‌ನೊಂದಿಗೆ ತಾನಿಯ ಮನಸ್ಸು ಗೆಲ್ಲಲು ರಾಜ ಎಂಬ ಹೊಸ ಹೆಸರಿನೊಂದಿಗೆ ಅಲ್ಲಿ ತಲುಪುತ್ತಾನೆ.

IFM
ರಾಜನಾದ ಸುರಿಂದರ್ ತನ್ನ ಪೂರ್ಣ ಲುಕ್‌ನೊಂದಿಗೆ ವ್ಯಕ್ತಿತ್ವವನ್ನೂ ಬದಲಿಸಿಕೊಳ್ಳುತ್ತಾನೆ. ಬಹಳಷ್ಟು ರೊಮ್ಯಾಂಟಿಕ ಮಾತುಗಳನ್ನಾಡುತ್ತಾ ತಾನಿಯನ್ನು ಪ್ರೀತಿಸತೊಡಗುತ್ತಾನೆ. ರಾಜ್ ಯಾರೆಂಬ ನಿಜ ತಿಳಿಯದ ತಾನಿ ಅವನೊಂದಿಗೆ ಓಡಿಹೋಗುವುದಕ್ಕೆ ತಯಾರಾಗುತ್ತಾಳೆ. ಆದರೆ ಸುರಿಂದರ್ ತಾನು ಇರುವಂತೆಯೇ ತಾನಿ ತನ್ನನ್ನು ಪ್ರೀತಿಸಬೇಕೆಂದು ಬಯಸುತ್ತಾನೆ. ನಂತರದ ಘಟನಾವಳಿಗಳಿಂದಾಗಿ ತಾನಿ ತನ್ನ ಪತಿ ಸುರಿಂದರ್‌ನನ್ನೇ ಇಷ್ಟಪಡತೊಡಗುತ್ತಾಳೆ.

ಸಾಮಾನ್ಯವಾಗಿ ಪ್ರೀತಿಯಲ್ಲಿ ಆರಂಭವಾಗುವ ಕಥೆಗಳು ಮದುವೆಯಾಗುವುದರೊಂದಿಗೆ ಮುಕ್ತಾಯವಾಗುತ್ತವೆ ಆದರೆ ಈ ಕಥೆಯಲ್ಲಿ ಮೊದಲೇ ಮದುವೆಯಾಗುತ್ತದೆ ನಂತರ ಪ್ರೀತಿ ಶುರುವಾಗುತ್ತದೆ. ಈ ಕಥೆಯ ದೃಢತೆ ಇರುವುದು ಸುರಿಂದರ್ ತಾನು ಇರುವಂತೆಯೇ ತಾನಿ ತನ್ನನ್ನು ಪ್ರೀತಿಸಬೇಕೆಂದು ಬಯಸುವುದರಲ್ಲಿ. ಈ ಕಥೆಯಲ್ಲಿ ಹುಳುಕು ಇರುವುದು ವಿವಾಹಿತೆಯಾಗಿಯೂ ತಾನಿ ರಾಜ್‌ನ ಕಡೆ ಆಕರ್ಷಿತಳಾಗುವುದರಲ್ಲಿ ಇದು ಕೆಲವು ಜನರಿಗೆ ಹಿಡಿಸಿಲ್ಲ. ತಾನಿಯ ಹೃದಯಪರಿವರ್ತನೆಗೆ ಏನಾದರೂ ಬಲವಾದ ಕಾರಣವಿರಬೇಕಾಗಿತ್ತು ಆದರೆ ಅದಾವುದನ್ನೂ ಚಿತ್ರದಲ್ಲಿ ಪ್ರಸ್ತುತ ಪಡಿಸಲಾಗಿಲ್ಲ.

ಈ ಚಿತ್ರ ಕೇವಲ ಮೂರು ಕಲಾವಿದರ ಸುತ್ತಾ ಸುತ್ತುತ್ತದೆ- ಶಾರುಖ್, ಅನೌಷ್ಕ, ಮತ್ತು ವಿನಯ್ ಪಾಠಕ್. ಇದರ ಹೊರತಾಗಿಯೂ ಚಿತ್ರ ನೀರಸವೆನಿಸುವುದಿಲ್ಲ. ಚಿತ್ರದಲ್ಲಿ ರೊಮಾನ್ಸ್, ಹಾಸ್ಯ, ಸಂತೋಷ, ದುಖಃ ಇವೆಲ್ಲದರ ಉತ್ತಮ ಸಮಪಾಕವಿರುವುದರಿಂದ ಚಿತ್ರ ಮನೊರಂಜನಕಾರಿಯಾಗಿದೆ. ಸುರಿಂದರ್ ಮತ್ತು ರಾಜ್ ಒಬ್ಬರೇ ಎಂಬುದನ್ನು ತಾನಿ ಗುರುತಿಸಲು ಅಸಮರ್ಥಳಾಗುವುದು ಆಶ್ಚರ್ಯವೆನಿಸುತ್ತದೆ ಆದರೆ ಇದನ್ನು ಸ್ವೀಕರಿಸದೇ ನಾವು ಚಿತ್ರವನ್ನು ಆನಂದಿಸುವುದು ಸಾಧ್ಯವಿಲ್ಲ. ಚಿತ್ರದ ಕ್ಲೈಮಾಕ್ಸ್ ಅದ್ಭುತವಾಗಿ ಮೂಡಿಬಂದಿದೆ, ಇದರಲ್ಲಿ ಸ್ಟೇಜ್‌ ಮೇಲೆ ಡಾನ್ಸ್ ಮಾಡುತ್ತಿರುವ ಸಂದರ್ಭ ತಾನಿಗೆ ರಾಜ್ ಮತ್ತು ಸುರಿಂದರ್ ಒಬ್ಪನೇ ವ್ಯಕ್ತಿ ಎಂಬುದು ಅರಿವಾಗುತ್ತದೆ.
IFM


ಶಾರುಖ್ ಚಿತ್ರದಲ್ಲಿ ಎರಡು ವಿಶಿಷ್ಟ ಲುಕ್‌ಗಳಿರುವ ಪಾತ್ರದಲ್ಲಿ ನಟಿಸಿದರು. ಸಾಮಾನ್ಯ ವ್ಯಕ್ತಿಯಾಗಿ ಸುರಿಂದರ್ ಕಾಣಿಸಿಕೊಂಡರೆ ರಾಜ್‌ನಲ್ಲಿ ಪ್ರೇಕ್ಷಕರನ್ನು ನಗಿಸುವ ತುಂಟ ಶಾರುಖ್ ಕಾಣಿಸಿಕೊಂಡರು. ಶಾರುಖ್ ಮುಖದಲ್ಲಿ ವಯಸ್ಸಿನ ಗೆರೆಗಳು ಕಂಡುಬಂದರು ಅಭಿನಯದಲ್ಲಿನ ತಾಜಾತನ ಮಾಸಿಲ್ಲ.

ಅನೌಷ್ಕ ತಮ್ಮ ಪ್ರಥಮ ಚಿತ್ರದಲ್ಲೇ ಶಾರುಖ್‌ನಂತಹ ದಿಗ್ಗಜ ನಟನೆದುರು ಸಡ್ಡು ಹೊಡೆಯುವಂತಹ ನಟನೆ ಪ್ರಸ್ತುತ ಪಡಿಸಿದ್ದಾರೆ. ಅನೌಷ್ಕ ಈ ಚಿತ್ರದ ಪಾತ್ರಕ್ಕೆಂದೆ ಆರ್ಡರ್ ನೀಡಿ ತಯಾರಿಸಿದ ಐಟಂನಂತೆ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಶಾರುಖ್ ಮಿತ್ರನ ಪಾತ್ರ ನಿರ್ವಹಿಸದ ವಿನಯ್ ಪಾಠಕ್ ಉತ್ತಮ ಅಭಿನಯ ನೀಡಿದ್ದಾರೆ.

ಸಲೀಮ್-ಸುಲೇಮಾನ್‌ರ ಸಂಗೀತ ಉತ್ತಮವಾಗಿದೆ. 'ಹೊಲೆ ಹೊಲೆ' ಹಾಡು ಮೊದಲೇ ಜನಪ್ರಿಯವಾಗಿತ್ತು, 'ಡಾನ್ಸ್ ಪೆ ಚಾನ್ಸ್' ಗೀತೆ ಎಷ್ಟು ಉತ್ತಮವಾಗಿದೆಯೊ ಅಷ್ಟೇ ಉತ್ತಮವಾಗಿ ಚಿತ್ರೀಕರಿಸಲಾಗಿದೆ. 'ಹಮ್ ಹೆ ರಾಹಿ ಪ್ಯಾರ್ ಕೆ' ಗೀತೆಯಲ್ಲಿ ಸ್ವಲ್ಪ ಸಮಯದ ಕಾಲ ಕಾಜೋಲ್, ಬಿಪಾಶ, ಲಾರ, ಪ್ರೀತಿ ಮತ್ತು ರಾಣಿ ಮುಖರ್ಜಿ ಕಾಣಿಸಿಕೊಳ್ಳುತ್ತಾರೆ. ಹಿನ್ನಲೆ ಸಂಗೀತದಲ್ಲಿ ಹಾರ್ಮೊನಿಯಂ ಅನ್ನು ಉತ್ತಮ ಉಪಯೋಗಿಸಿಕೊಳ್ಳಲಾಗಿದೆ. ತಾಂತ್ರಿಕವಾಗಿ ಚಿತ್ರ ಸಶಕ್ತವಾಗಿದೆ. ಚಿತ್ರದ ಸಮಯ ಕೆಲವರಿಗೆ ಸ್ವಲ್ಪ ಹೆಚ್ಚಾಯಿತೆನ್ನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ರಬ್ನೆ ಬನಾ ದಿ ಜೋಡಿ ಉತ್ತಮ ಮನೊರಂಜಕ ಚಿತ್ರ, ಎಲ್ಲಾ ವಯಸ್ಸಿನ ಜನರಿಗೂ ಇದು ಇಷ್ಟವಾಗಬಲ್ಲುದು.

IFM

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments