Webdunia - Bharat's app for daily news and videos

Install App

ಭಾರತದ ಕಹಿ ಸತ್ಯ ತೆರೆಯ ಮೇಲೆ!!! ಇದು ಯೇ ಮೇರಾ ಇಂಡಿಯಾ!

Webdunia
IFM
80 ರ ದಶಕದಲ್ಲಿ ಅಂಕುಶ್, ಪಾರಿಘಾಟ್‌ಗಳಂತಹ ಉತ್ತಮ ಚಿತ್ರಗಳನ್ನು ನೀಡಿ ನಂತರ ತೇಜಾಬ್ ಚಿತ್ರದ ಮೂಲಕ ಪ್ರತಿ ಭಾರತೀಯನನ್ನು ಏಕ್ ದೋ ತೀನ್... ಎಂಬ ಹಾಡಿನ ಮೂಲಕ ಕುಣಿಸಿದ ನಿರ್ದೇಶಕ ಎನ್.ಚಂದ್ರ ಕೆಲಕಾಲದ ನಂತರ ಮತ್ತೆ ಬಂದಿದ್ದಾರೆ. ಯೇ ಮೇರಾ ಇಂಡಿಯಾ ಚಿತ್ರದ ಮೂಲಕ ಭಾರತದಲ್ಲಿರುವ ಜನಸಾಮಾನ್ಯನ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಯೇ ಮೇರಾ ಇಂಡಿಯಾ ಚಿತ್ರವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ ಇದೊಂದು ಹರಿತವಾದ ಮಸೆದ ಕತ್ತಿ. ಈ ಚಿತ್ರ ಟಿವಿಗಳಲ್ಲಿ, ಪೇಪರುಗಳಲ್ಲಿ ಹೆಡ್‌ಲೈನ್‌ಗಳಾದ ನಿಜವಾದ ಕಥೆಗಳನ್ನು ಹೊಂದಿರುವ ಚಿತ್ರ. ಜನಾಂಗೀಯ ಬೇಧ, ಜಾತಿಬೇಧ, ವರ್ಗಬೇಧ, ಲಿಂಗ ತಾರತಮ್ಯ, ಭಾಷಾ ತಾರತಮ್ಯ ಮತ್ತಿತರ ಸಮಾಜವನ್ನು ಕಾಡುತ್ತಿರುವ ವಿಚಾರಗಳಿಗೆ ಬೆಳಕು ಚೆಲ್ಲುವ ಪ್ರಯತ್ನವಾಗಿದೆ. ಇದು 12 ಮಂದಿಯ ಒಂದು ದಿನದ ಜೀವನದಲ್ಲಿ ನಡೆದ ಕಥೆಯನ್ನು ಹೊಂದಿದೆ.

ಎನ್.ಚಂದ್ರ ಬೇರಿಗೇ ಕೈ ಹಾಕಿ ಕಥೆಯ ಸಾರವನ್ನು ಚಿತ್ರಕ್ಕೆ ತಲುಪಿಸಿದ್ದಾರೆ. ಸಾಮಾನ್ಯ ಮನುಷ್ಯನೂ ತನಗಾದ ಅನುಭವವನ್ನು ನೆನಪಿಸಬಲ್ಲ ಕಥೆಯಿದು. ಇದರಿಂದ ಮನಸ್ಸಿಗೆ ನೋವಾಗುತ್ತದೆ. ಕ್ಷಣಕಾಲ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಸಮಾಜದಲ್ಲಿ ಸಾಮಾನ್ಯ ಮನುಷ್ಯನ ಬೇಗುದಿಯನ್ನು ಸ್ವತಃ ಅನುಭವಿಸಿದ ಹಾಗಾಗುತ್ತದೆ. ಹಾಗಾಗಿ ಇಲ್ಲಿ ಚಿತ್ರಕಥೆಯನ್ನು ನಿರೂಪಿಸುವಲ್ಲಿ, ಪ್ರೇಕ್ಷಕನ ಮನಸ್ಸಿಗೆ ಅದನ್ನು ಮುಟ್ಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು. ಆದರೆ ಚಿತ್ರದ ಕಥೆ ಕ್ಲೈಮ್ಯಾಕ್ಸ್‌ನಲ್ಲಿ ಎಡವುತ್ತದೆ ಅಂತನಿಸುತ್ತದೆ. ನಿಜಜೀವನದ ಕಥೆಯನ್ನು ತೆರೆಗೆ ತರುವಾಗ ಆಗುವ ಸಂದಿಗ್ಧತೆಯೇ ಅದು. ನಿಜಜೀವನದಲ್ಲಿ ದುರಂತ ಅಂತ್ಯ ಕಾಣುವ ಸಮಸ್ಯೆಗಳೇ ಚಿತ್ರದಲ್ಲಿದ್ದರೂ, ಚಿತ್ರದಲ್ಲಿ ಅದು ಸುಖಾಂತ್ಯ ಕಾಣುತ್ತದೆ. ಜತೆಗೆ ಕೊನೆಯಲ್ಲಿ ಎಲಾಸ್ಟಿಕ್ಕಿನಂತೆ ಕಥೆ ಎಳೆದಂತೆ ಭಾಸವಾಗುತ್ತದೆ.

IFM
ಚಂದ್ರ ತನ್ನ ಹಿಂದಿನ ಚಿತ್ರ ತೇಝಾಬ್‌ನಂತೆಯೇ ಯೇ ಮೇರಾ ಇಂಡಿಯಾದ ಮೂಲಕವೂ ಮುಂದೆ ಖಂಡಿತವಾಗಿ ನೆನಪಿನಲ್ಲಿ ಉಳಿಯಬಲ್ಲ ನಿರ್ದೇಶಕರು. ಚಿತ್ರದಲ್ಲಿ ನಟನೆಯ ಬಗ್ಗೆಯೂ ಧಾರಾಳವಾಗಿ ಹೊಗಳಬಹುದು. ನಿಜಜೀವನದ ಕಥೆಯಲ್ಲಿ ನಿಜಜೀವನದ ಪಾತ್ರಧಾರಿಗಳಾಗಿಯೇ ಹೊರಹೊಮ್ಮಿದ್ದಾರೆ ಕಥಾ ನಾಯಕರು. ಅನುಪಮ್ ಖೇರ್, ಪರ್ವೀನ್ ದಬಾಸ್, ವಿಜಯ್ ರಾಝ್, ಅತುಲ್ ಕುಲಕರ್ಣಿ, ಸೀಮಾ ಬಿಸ್ವಾಸ್, ರಾಜ್‌ಪಾಲ್ ಯಾದವ್, ಸ್ಮೈಲಿ ಸೂರಿ ಈ ಎಲ್ಲ ನಟ ನಟಿಯರೂ ಅತ್ಯುತ್ತಮ ಅಭಿನಯ ನೀಡಿದ್ದಾರೆ.

ಒಟ್ಟಾರೆ ಹೇಳುವುದಾದರೆ ಯೇ ಮೇರಾ ಇಂಡಿಯಾ ಚಿತ್ರ ಖಂಡಿತ ಕಾಡುವ ಸಿನಿಮಾ. ಪ್ರೇಕ್ಷಕರನ್ನು ಗಾಢವಾಗಿ ಸೆಳೆಯುವ ಈ ಚಿತ್ರ ಸಾಮಾನ್ಯ ಮನುಷ್ಯನ ತುಮುಲವನ್ನು ಬೆಳಕಿಗೆ ಕಟ್ಟಿಕೊಡುವ ಚಿತ್ರ. ಸತ್ಯವನ್ನು ಹೇಳಲೂ ಕೂಡಾ ಎದೆ ಗಟ್ಟಿ ಬೇಕು. ಇಲ್ಲಿ ನಿರ್ದೇಶಕರು ಸತ್ಯ ಹೇಳಿದ್ದಕ್ಕೆ ಹ್ಯಾಟ್ಸ್ ಆಫ್ ಹೇಳಲೇ ಬೇಕು. ಧಾರಾಳವಾಗಿ ಯೇ ಮೇರಾ ಇಂಡಿಯಾ ನೋಡಿ ಬಿಡಿ. ಚಿಂತನೆಗೆ ಹಚ್ಚದಿದ್ದರೆ ಕೇಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?