Webdunia - Bharat's app for daily news and videos

Install App

ಪುನರ್ಜನ್ಮದ ಕಥೆಯುಳ್ಳ 'ಕರ್ಮ' ಎಂಬ ಥ್ರಿಲ್ಲರ್

Webdunia
IFM
' ಕರ್ಮ- ಕ್ರೈಂ, ಪ್ಯಾಷನ್, ರೀಇನ್‌ಕಾರ್ನೇಶನ್'. ಈ ಚಿತ್ರ ನೋಡಿದರೆ ಒಮ್ಮೆಲೆ ನೆನಪಾಗುವುದು ಹೇಮಮಾಲಿನಿ, ರಾಜ್ ಕುಮಾರ್, ರಾಜೇಶ್ ಖನ್ನಾ ಹಾಗೂ ವಿನೋದ್ ಖನ್ನಾ ನಟಿಸಿದ 1981ರ ಕುದ್ರತ್ ಚಿತ್ರ. 'ಹಮೇ ತುಮ್‌ಸೆ ಪ್ಯಾರ್ ಕಿತ್‌ನಾ, ಯೇ ಹಮ್ ನಹೀ ಜಾನ್ತೇ..' ಅನ್ನುವ ಮಾಧುರ್ಯ ಭರಿತ ಭಾವುಕ ಹಾಡು ನೀಡಿದ ಕುದ್ರತ್‌ ಚಿತ್ರದಿಂದ ಈಗಷ್ಟೆ ಹೊರಬಂದಿರುವ ಕರ್ಮ- ಕ್ರೈಂ, ಪ್ಯಾಷನ್, ರೀಇನ್‌ಕಾರ್ನೇಶನ್ ಚಿತ್ರ ಸ್ವಲ್ಪ ಪ್ರೇರಿತಗೊಂಡಂತಿದೆ.

ಆದರೂ, ಯಾಕೋ ಕುದ್ರತ್‌ಗೆ ಹೋಲಿಸಿದರೆ, ಕರ್ಮ ಹಳಿತಪ್ಪಿದಂತೆ ಅನಿಸುತ್ತದೆ. ಒಂದು ಭಾರೀ ಇಂಟರೆಸ್ಟಿಂಗ್ ಆರಂಭದ ನಂತರ ಚಿತ್ರ ಮಧ್ಯಂತರದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತದೆ. ಅರ್ಥಾತ್ ಪ್ರೇಕ್ಷಕನನ್ನು ಹಿಡಿದಿಡುವಲ್ಲಿ ಸೋಲುತ್ತದೆ. ಆದರೆ ಕೆಲವೆಡೆ ಅತ್ಯುತ್ತಮವಾಗಿಯೂ ಕಾಣುತ್ತದೆ.

ವಿಕ್ರಮ್ (ಕಾರ್ಲಸಿ ವೇಯಾಂತ್) ತನ್ನ ತಂದೆ ರಣ್‌ವೀರ್ (ವಿಜಯೇಂದ್ರ ಘಾಟೆ) ಜತೆಗಿನ ವೈಮನಸ್ಸಿನಿಂದ ಕಳೆದ 30 ವರ್ಷಗಳಿಂದ ಬೇರೆಯೇ ಇರುತ್ತಾನೆ. ಆದರೆ 30 ವರ್ಷದ ನಂತರ ಎರಡು ಮೂರು ದಿನಗಳಿಗಾಗಿ ನ್ಯೂಯಾರ್ಕ್‌ನಿಂದ ತನ್ನ ಈಗಷ್ಟೇ ಮದುವೆಯಾದ ಹೆಂಡತಿ ಅನ್ನಾ (ಅಲ್ಮಾ ಸರಾಸಿ) ಜತೆಗೆ ತಂದೆಯಿರುವ ಊಟಿಗೆ ಬರುತ್ತಾನೆ.

IFM
ನ್ಯೂಯಾರ್ಕ್‌ನಂತಹ ದೊಡ್ಡ ನಗರದಿಂದ ಊಟಿಯಂತಹ ಪುಟ್ಟ ಪಟ್ಟಣದಲ್ಲಿ ರೈಲಿನಿಂದ ಇಳಿದ ಕೂಡಲೇ ಅನ್ನಾ 30 ವರ್ಷಗಳ ಹಿಂದೆ ನಡೆದ ಕೊಲೆಯೊಂದರ ಮಾಧ್ಯಮವಾಗುತ್ತಾಳೆ. ಆಕೆ ಈವರೆಗೆ ಊಟಿಗೇ ಬರದಿದ್ದರೂ, ಆಕೆಗೆ ಊಟಿ ತುಂಬಾ ಹೃದಯಕ್ಕೆ ಹತ್ತಿರವೆನಿಸುವ ಪಟ್ಟಣದಂತೆ ಕಾಣಿಸುತ್ತದೆ. ಆಕೆಯ ವಿಚಿತ್ರ ನಡತೆಯನ್ನು ನೋಡಿ ವಿಕ್ರಮ್ ಮಾತ್ರ ಆಕೆಗೆ ಮಾನಸಿಕ ಸಮಸ್ಯೆ ಎಂದುಕೊಳ್ಳುತ್ತಾನೆ. ಆದರೆ ವಿಕ್ರಮ್‌ಗೂ ಕೆಲವು ವಿಚಿತ್ರ ಅನುಭವಗಳಾದ ಮೇಲೆ ಆತ ಅನ್ನಾಳನ್ನು ನಂಬುತ್ತಾನೆ. ಆಕೆಗಿರುವುದು ಮಾನಸಿಕ ಸಮಸ್ಯೆ ಅಲ್ಲ ಅನ್ನುವುದನ್ನು ಅರಿಯುತ್ತಾನೆ. ಜತೆಗೆ 30 ವರ್ಷಗಳ ಹಿಂದೆ ನಡೆದ ಕೊಲೆಯ ಬೆನ್ನತ್ತಿ ಇವರಿಬ್ಬರೂ ಸಾಗುತ್ತಾರೆ.

ಕೊಲೆಯ ಬೆನ್ನತ್ತಿ ಸಾಗಿದಾಗಲೇ ಅವರಿಗೆ ಲಿಂದಾ (ಕ್ಲಾಡಿಯಾ) ಎಂಬಾಕೆಯ ಅತ್ಯಾಚಾರ ಹಾಗೂ ಕೊಲೆ ನಡೆದ ಮೇಲೆ ಆಕೆಯ ಆತ್ಮವೇ ಪುನರ್ಜನ್ಮದಲ್ಲಿ ಅನ್ನಾ ರೂಪದಲ್ಲಿ ಬಂದಿದೆ ಎಂಬುದು ತಿಳಿಯುತ್ತದೆ.

ನಿರ್ದೇಶಕ ಎಂ.ಆರ್.ಶಹಜಹಾನ್ ಚಿತ್ರದ ಹಲವು ಭಾಗಗಳನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. ಆದರೆ ಚಿತ್ರದ ಕಥೆಯ ಪರಾಕಾಷ್ಠೆ ಮಾತ್ರ ಸತ್ವಹೀನವಾದಂತೆ ಅನಿಸುತ್ತದೆ. ಥ್ರಿಲ್ಲರ್ ಹೇಗಿರಬೇಕೆಂದರೆ, ಕೊನೆಯವರೆಗೂ ವೀಕ್ಷಕನಿಗೆ ಇಂಥದ್ದೇ ಈ ಕಥೆಯ ಕೊನೆ ಎಂದು ಅಂದಾಜು ಮಾಡದಂತಿರಬೇಕು. ಜತೆಗೆ ಯಾವುದೇ ಪ್ರಶ್ನೆಗಳನ್ನೂ ಅದು ಉಳಿಸಬಾರದು. ಆದರೆ ಕರ್ಮ ಚಿತ್ರದ ಕೊನೆಯಾಗುವ ಮೊದಲೇ ಅಂತ್ಯ ಏನೆಂದು ಊಹಿಸಬಹುದಾದಷ್ಟು ಸುಲಭವಾಗಿರುತ್ತದೆ. ಆರೋಪಿಯನ್ನು ಪ್ರೇಕ್ಷಕನೇ ಮೊದಲು ಊಹಿಸುವ ಸಾಧ್ಯತೆ ಇಲ್ಲಿದೆ. ಜತೆಗೆ ಇಲ್ಲಿ ಫ್ಲ್ಯಾಷ್‌ಬ್ಯಾಕ್ ಕಥೆ ಅಷ್ಟೊಂದು ಸರಿಯಾಗಿ ಹೆಣೆದಂತೆ ಅನಿಸುವುದಿಲ್ಲ.

ಚಿತ್ರದಲ್ಲಿ ಅಲ್ಮಾ ಸರಾಸಿ ಹಾಗೂ ಕಾರ್ಲಸಿ ವೇಯಾಂತ್ ಇಬ್ಬರೂ ಪ್ರಮುಖ ಪಾತ್ರಗಳು. ಇಬ್ಬರೂ ಅತ್ಯುತ್ತಮವಾಗಿ ಪಾತ್ರವನ್ನು ನಿಭಾಯಿಸಿದ್ದಾರೆ. ಅದರಲ್ಲೂ ಅಲ್ಮಾ ಅಭಿನಯ ತುಂಬ ಚೆನ್ನಾಗಿ ಮೂಡಿ ಬಂದಿದೆ. ಸಲ್ಮಾನ್‌ನ ಹೊಸ ಗೆಳತಿಯಾಗಿ ಬಾಲಿವುಡ್ಡಿಗೆ ವಲಸೆ ಬಂದ ಜರ್ಮನ್ ಮಾಡೆಲ್ ಕ್ಲಾಡಿಯಾ ಸೀಸ್ಲಾಗೆ ಅಂಥ ಸ್ಕೋಪ್ ಈ ಚಿತ್ರದಲ್ಲಿಲ್ಲ.

ಒಟ್ಟಾರೆಯಾಗಿ ಕರ್ಮದ ಇಡೀ ಜೀವಾಳ ಅಷ್ಟಾಗಿ ಹಿತವಿಲ್ಲದಿದ್ದರೂ, ಬಿಡಿಬಿಡಿಯಾಗಿ ಕೆಲವು ಭಾಗಗಳು ಮನಸೆಳೆಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

Darshan: ಫಾರ್ಮ್‌ಹೌಸ್‌ನಲ್ಲಿ ಗಂಡನ ಜತೆ ವಿಜಯಲಕ್ಷ್ಮಿ ಜಾಲಿರೈಡ್‌

Mysore Sandal Soap: ತಮನ್ನಾ ಭಾಟಿಯಾ ಆಯ್ಕೆ ಬಗ್ಗೆ ಸ್ಯಾಂಡಲ್‌ವುಡ್ ಕ್ವೀನ್ ಹೀಗೇ ಹೇಳೋದಾ

Madenur Manu: ಸಂತ್ರಸ್ತ ನಟಿಯ ಮನೆಗೇ ಮಡೆನೂರು ಮನುವನ್ನು ಕರೆದುಕೊಂಡು ಬಂದ ಪೊಲೀಸರು

Actor Mukul Dev: ನಟನ ಸಾವಿಗೆ ಇದೇ ಕಾರಣ ಎಂದ ಆಪ್ತ ಸ್ನೇಹಿತ

Abhishek Ramdas: ಸದ್ಯಕ್ಕೆ ಸೀರಿಯಲ್ ಬೇಡ ಎಂದಿದ್ದ ನಟ ಅಭಿಷೇಕ್ ನಂದಗೋಕುಲ ಒಪ್ಪಿಕೊಂಡಿದ್ದಕ್ಕೆ ಕಾರಣವೇನು

Show comments