Webdunia - Bharat's app for daily news and videos

Install App

ತಲೆ ಇಲ್ಲದ ಕಥೆ "ಮನೋರಮಾ"

Webdunia
ಸಸ್ಪೇನ್ಸ್ ಚಿತ್ರದ ಮೂಲ ರುಚಿ ಅಡಗಿರುವುದೇ ನಿಗೂಡವಾಗಿ ಕಥಾ ಹಂದರವನ್ನು ಪ್ರೇಕ್ಷಕನ ಎದುರು ಬಿಚ್ಚಿಡುತ್ತ ಹೋಗುವುದು. ಪ್ರೇಕ್ಷಕ ಮಾಡಿದ ಪ್ರತಿಯೊಂದು ಊಹೆ ತಪ್ಪಾಗುವುವಂತೆ ಆದರೆ, ಅಚ್ಚುಕಟ್ಟಾಗಿ ಕಥೆಯ ಎಳೆ ಬಿಟ್ಟು ಹೋಗದಂತೆ ಹೇಳುತ್ತ ಹೇಳುತ್ತ ಸಡನ್ನಾಗಿ ರಹಸ್ಯವನ್ನು ಬಿಚ್ಚಿಟ್ಟರೆ, ಪ್ರೇಕ್ಷಕ ಮಹಾಶಯನ ಕೂದಲು ನಿಮೀರಿ ನಿಲ್ಲಬೇಕು ಇದು ರಹಸ್ಯ ಕಥೆಯ ಒಟ್ಟು ಸಮೀಕರಣ.
IFM

ಆದರೆ "ಮನೋರಮಾ ಸಿಕ್ಸ್ ಫೀಟ್ ಅಂಡರ್" ಅದ್ಯಾವ ರೀತಿಯ ಪರಿಣಾಮವನ್ನು ನೋಡುಗನ ಮೇಲೆ ಬೀರುವುದಿಲ್ಲ. ಅಚ್ಚರಿಯ ವಿಷಯವನ್ನು ತೀರ ಸಪ್ಪೆಯಾಗಿ ಹೇಳಿದರೆ ಎನಾಗಬೇಕು ಅದು "ಮನೋರಮಾ ಸಿಕ್ಸ್ ಫೀಟ್ ಅಂಡರ್" ನೋಡಿದಾಗ ಆಗುವ ಅನುಭವ.

" ಮನೋರಮಾ ಸಿಕ್ಸ್ ಫೀಟ್ ಅಂಡರ್" ಚಿತ್ರದ ಪ್ರಾರಂಭ ಅದ್ಬುತವಾಗಿದೆ ಸೌಂಡ್ ಟ್ರ್ಯಾಕ್, ವಿಡಿಯೋಗ್ರಾಫಿ ಎಲ್ಲ ಚೆಂದವಾಗಿದೆ. ಕಥೆ ಮುಂದೆ ಸಾಗಿದಂತೆ ಬೀರುಗಾಳಿಗೆ ಸಿಕ್ಕ ತರಗೆಲೆಯಂತೆ ಎಲ್ಲೆಲ್ಲೊ ಹೋಗಿಬಿಡುತ್ತದೆ. ದುರಾದೃಷ್ಟ ಅಂದರೆ ಕೊನೆಯವರೆಗೆ ಕಥೆ ಎನ್ನುವ ತರಗೆಲೆ ಪುನಃ ಸ್ವಸ್ಥಾನಕ್ಕೆ ಮರಳುವುದಿಲ್ಲ. ಹೀಗಾಗಿ ನೋಡುವವನ ತಲೆ ಕೂಡ ಬೀರುಗಾಳಿಗೆ ಸಿಕ್ಕ ತರಗೆಲೆಯಂತಾಗುತ್ತದೆ.

ಮೊದಲ ಬಾರಿಗೆ ಚಿತ್ರ ನಿರ್ದೇಶನಕ್ಕೆ ಕೈಹಾಕಿರುವ ನವದೀಪ್ ಸಿಂಗ್ ತಮ್ಮ ಲೆಕ್ಕಕ್ಕೆ ಸಿಕ್ಕ ರೀತಿಯಲ್ಲಿ ಕಥೆಗೊಂದು ಗತಿ ಕಾಣಿಸುತ್ತಾರೆ.

ಎಸ್ ( ಅಭಯ ಡಿಯೊಲ್) ಸರಕಾರಿ ಇಂಜಿನಿಯರ್ ಅವನ ನಿಜವಾದ ಗುರಿ ಪತ್ತೆದಾರಿ ಕಾದಂಬರಿಗಳನ್ನು ಬರೆಯಬೇಕು ಎನ್ನುವುದು. ದುರಾದೃಷ್ಟದಿಂದ ಅವನ ಮನೊರಮಾ ಎನ್ನುವ ಮೊದಲ ಕಥೆ ಎಲ್ಲಿಯೊ ಕಳೆದು ಹೊಗುತ್ತದೆ. ಕೆಲದಿನಗಳು ಕಳೆದ ನಂತರ ಮ್ಯಾಗಜೀನ್ ಲೇಖಕನಾಗುತ್ತಾನೆ.

ಒಂದು ದಿನ ಅವನಿಗೆ ಸ್ಥಳಿಯ ರಾಜಕಾರಣಿಯೊಬ್ಬನ (ಕುಲಭೂಷನ ಕರ್ಬಾಲಾ) ಹೆಂಡತಿ (ಸಾರಿಕಾ) ನಿರಾಕರಿಸಲಾರದಂತಹ ಆಹ್ವಾನ ನೀಡುತ್ತಾಳೆ. ಅವಳು ತನ್ನ ಗಂಡನ ವಿರುದ್ಧ ಪತ್ತೆದಾರಿಕೆಗೆ ಎಸ್‌ವಿಯನ್ನು ನೇಮಿಸುತ್ತಾಳೆ. ಒಂದು ದಿನ ಅವಳೂ ನಿಗೂಡವಾಗಿ ಸಾಯುತ್ತಾಳೆ (ಯಾಕೆ ಸತ್ತಳು ಅಂತ ನಿರ್ಧೇಶಕನಿಗೆ ಮಾತ್ರ ಗೊತ್ತು.) ಅವಳ ಸಾವಿನ ತನಿಖೆಯ ಹಿಂದೆ ಎಸ್ ವಿ ಬೀಳುತ್ತಾನೆ. ಎನು ಪತ್ತೆ ಮಾಡಿದ. ನಡುವೆ ಯಾವುದೋ ಒಂದು ಫೋಟೊ ಕಥೆ ಬರುತ್ತದೆ ಅದರಿಂದ ಯಾರಿಗೆ ಪ್ರಯೋಜನ ಎನ್ನುವುದು ಪ್ರೇಕ್ಷಕನಿಗೆ ಕೊನೆಯವರೆಗೆ ಮಾತ್ರ ತಿಳಿಯುವುದಿಲ್ಲ.

ನವದೀಪ್ ಸಿಂಗ್ ತಾಂತ್ರಿಕತೆಯನ್ನು ಬಳಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ. ಅದ್ಬುತ ಚಿತ್ರೀಕರಣ, ಹಿನ್ನಲೆ ಸಂಗೀತ ಎಲ್ಲ ಸರಿಯಾಗಿದೆ ಆದರೆ ಕಥೆ ಮಾತ್ರ ಇಲ್ಲ ಅದು ಇಲ್ಲದಿದ್ದರೆ ಚಿತ್ರ ಎಂದು ಹೇಗೆ ಹೇಳುವುದು ?

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments