Select Your Language

Notifications

webdunia
webdunia
webdunia
webdunia

"ಸರಕಾರ್ ರಾಜ್" ಶುದ್ಧ ರಾಜಕೀಯ ಚಿತ್ರ

IFM
ಬ್ಯಾನರ್: ಕೆ. ಸೆರಾಬೆರಾ ಆಡ್ ಲ್ಯಾಬ್ಸ್ ಲಿಮಿಟೆಡ್
ಬಿಡುಗಡೆ : ಜೂನ್, 6
ನಿರ್ಮಾಪಕ: ರಾಮ್ ಗೋಪಾಲ್ ವರ್ಮಾ, ನವೀನ್ ನಿಶ್ಚಲ್
ನಿರ್ದೇಶಕ: ರಾಮ್ ಗೋಪಾಲ್ ವರ್ಮಾ
ತಾರಾಗಣ: ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಗೋವಿಂದ್ ನಾಮದೇವ್, ಸುಪ್ರಿಯಾ ಪಾಠಕ್, ತನಿಷಾ ಮುಖರ್ಜಿ, ದಿಲೀಪ್ ಪ್ರಭಾವಳ್ಕರ್ ಮುಂತಾದವರು.
ಸಿಮಿಮಾಟೊಗ್ರಾಫಿ: ಅಮಿತ್ ರಾಯ್.

ಸರ್ಕಾರ್ ನಂತರ ಬೆಳ್ಳಿತೆರೆಗೆ ಬರುತ್ತಿರುವ ಸರ್ಕಾರ್ ರಾಜ್ ಪರಿಪೂರ್ಣ ರಾಜಕೀಯದ ಒಳಸುಳಿಗಳನ್ನು ಹೊಂದಿರುವ ಚಿತ್ರ ಬಹುಶ ಸ್ವಲ್ಪ ಹೆಚ್ಚು ಕಡಿಮೆ ಮಹಾರಾಷ್ಟ್ರದ ದಾಬೊಲ್‌ನಲ್ಲಿ ಅಸ್ತಿತ್ವಕ್ಕೆ ಬಂದು ದಿವಾಳಿಯಾದ ಎನ್ರಾನ್ ಪವರ್ ಕಂಪನಿಯ ಕಥೆಗೆ ಹತ್ತಿರವಾದಂತೆ ಇರುವ ಸರಕಾರ ರಾಜ್‌ದಲ್ಲಿನ ಕಥೆಯಲ್ಲಿ ಗಂಭೀರ ರಾಜಕೀಯ ಸುಳಿ ಒಳಸುಳಿ ಮತ್ತು ತಂತ್ರಗಳಿಂದಲೇ ತುಂಬಿ ಹೋಗಿದೆ.

ಇತ್ತೀಚೆಗೆ ರಾಜಕೀಯದಲ್ಲಿ ಕಂಡು ಬರುತ್ತಿರುವ ' ಅಭಿವೃದ್ದಿ ರಾಜಕೀಯ' ಮತ್ತು ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ನಡುವೆ ನಡೆಯುವ ತಿಕ್ಕಾಟವೇ ಚಿತ್ರದ ಕಥಾವಸ್ತು.
webdunia
IFM

ಶೇಫರ್ಡ್ ಪವರ್ ಪ್ಲಾಂಟ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ರಾಜನ್ (ಐಶ್ವರ್ಯ ರೈ ಬಚ್ಚನ್) ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನಾ ಕಂಪನಿಯೊಂದನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಶಂಕರ್ (ಅಭಿಷೇಕ ಬಚ್ಚನ್) ಮುಂದೆ ಇಡುತ್ತಾಳೆ. ಜನರಿಗೆ ವಿದ್ಯುತ್ ಉತ್ಪಾದನಾ ಕಂಪನಿಯ ಸ್ಥಾಪನೆಯಿಂದ ಆಗುವ ಒಳಿತುಗಳನ್ನು ಪರಿಗಣಿಸಿ ಸರಕಾರ್ (ಅಮಿತಾಭ್ ಬಚ್ಚನ್) ಅವರಿಗೆ ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತಾನೆ.
ಹಲವಾರು ಕಾರಣಗಳಿಂದ ಸರಕಾರ್ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುತ್ತಾನೆ. ಸರಕಾರ್ ಒಪ್ಪಿಗೆಯ ನಂತರ ಅನಿತಾಳೊಂದಿಗೆ ಜನ ಬೆಂಬಲ ಪಡೆಯಲು ಇಡೀ ಮಹಾರಾಷ್ಟ್ರದಾದ್ಯಂತ ಶಂಕರ್ ಪ್ರವಾಸ ಕೈಗೊಳ್ಳುತ್ತಾನೆ.
webdunia
IFM


ನಿಧಾನವಾಗಿ ಶಂಕರ್‌ನ ಮಹಾತ್ವಾಂಕಾಕ್ಷೆಯ ಯೋಜನೆಯು ರಾಜಕೀಯದ ಒಳಸುಳಿಗೆ ಸಿಲುಕುತ್ತದೆ. ದುಷ್ಟ ಶಕ್ತಿಗಳು ಮತ್ತಷ್ಟು ಪ್ರಬಲವಾಗಿದ್ದು ಸರಕಾರ್ ರಾಜ್ಯವನ್ನು ಉರುಳಿಸುವುದರ ಜೊತೆಗೆ ರಾಜಕೀಯ ಕ್ಷೇತ್ರದಿಂದ ಶಂಕರ್ ಹೆಸರನ್ನು ನಿರ್ನಾಮಗೊಳಿಸಲು ಪ್ರಯತ್ನಿಸುತ್ತವೆ.

Share this Story:

Follow Webdunia kannada