Select Your Language

Notifications

webdunia
webdunia
webdunia
webdunia

ಸಕತ್ ಕುಯ್ತಾನೆ ಸಾರ್ 'ಮಿಸ್ಟರ್ ಗರಗಸ'

ಸಕತ್ ಕುಯ್ತಾನೆ ಸಾರ್ 'ಮಿಸ್ಟರ್ ಗರಗಸ'
MOKSHA
ಸಕತ್ ಕುಯ್ಯಾನೆ ಸಾರ್ ಮತ್ತು ಮಿಸ್ಟರ್ ಗರಗಸ ಅಂದಾಗಲೇ ನಿಮಗೆ ಅರ್ಥವಾಗಿರಬಹುದು. ಇಲ್ಲಿರುವುದು ಕೋಮಲ್!

ಕೋಮಲ್ ಎಂದ ತಕ್ಷಣ ನೆನಪಿಗೆ ಬರುವುದು ಅವರು ಹಾಸ್ಯ ಮಾಡುವ ಶೈಲಿ. ಈವರೆಗೆ ಕೋಮಲ್ ಮುಖ್ಯ ಪಾತ್ರದಲ್ಲಿ ನಟಿಸಿರಲಿಲ್ಲ. ಆದರೆ ದಿನೇಶ್ ಬಾಬು ನಿರ್ದೇಶನದ ಈ ವಾರ ತೆರೆಕಾಣಲಿರುವ 'ಮಿಸ್ಟರ್ ಗರಗಸ' ಚಿತ್ರದಲ್ಲಿ ಕೋಮಲ್ ಮೊದಲ ಬಾರಿಗೆ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರ ಇತರ ಚಿತ್ರಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಕೇವಲ 8 ದಿನಗಳಲ್ಲಿ ಶೂಟಿಂಗ್ ಮುಗಿಸಿದ ಚಿತ್ರ ಎಂಬ ಕೀರ್ತಿ ಒಂದಾದರೆ, ಮಾತೇ ಬಂಡವಾಳವಾಗಿರುವುದು ಇದರ ಮತ್ತೊಂದು ವೈಶಿಷ್ಠ್ಯ. ಇಡೀ ಚಿತ್ರ ಮಾತಿನ ಮೇಲೆ ನಿಲ್ಲುತ್ತದೆ. ಎಲ್ಲೂ ಹಾಡುಗಳಾಗಲಿ, ಹೊಡೆದಾಟಗಳಾಗಲಿ ಇಲ್ಲ. ಹಾಗಾಂತ ಇಲ್ಲಿ ಮನರಂಜನೆಗೇನೂ ಕೊರತೆ ಇಲ್ಲ. ಮಾತೇ ಚಿತ್ರದ ಮನರಂಜನಾ ವಸ್ತುವಾಗಲಿದೆ. ಸಣ್ಣ ಪಾತ್ರವೊಂದರಲ್ಲಿ ಟಿ.ಎಸ್.ನಾಗಾಭರಣ್ ನಟಿಸಿದ್ದಾರೆ.

ಮಿಸ್ಟರ್ ಗರಗಸ ಚಿತ್ರದ ಮೂಲ 'ಭೇಜಾ ಫ್ರೈ' ಎಂಬ ಹಿಂದಿ ಚಿತ್ರದಲ್ಲಿದೆ ಎಂದು ಸುದ್ದಿಯಾಗಿತ್ತು. 'ಭೇಜಾ ಫ್ರೈ' ಮೂಲ 'ಡಿನ್ನರ್ ಗೇಮ್' ಎಂಬ ಫ್ರೆಂಚ್ ಚಿತ್ರದಲ್ಲಿದೆ. ಮಿಸ್ಟರ್ ಗರಗಸ ಚಿತ್ರಕ್ಕೂ 'ಭೇಜಾ ಫ್ರೈ' ಗೂ ಯಾವ ಸಂಬಂಧವೂ ಇಲ್ಲ. ನಮ್ಮ ಚಿತ್ರ 'ಡಿನ್ನರ್ ಗೇಮ್' ನಿಂದ ಪ್ರೇರಣೆ ಪಡೆದಿದೆ ಎನ್ನುತ್ತಾರೆ ಕೋಮಲ್. ಫ್ರೆಂಚ್ ನಾಟಕವೊಂದನ್ನು ಆಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ ಎಂದು ಈ ಹಿಂದೆ ನಿರ್ದೇಶಕ ದಿನೇಶ್‌ಬಾಬು ಹೇಳಿದ್ದು ನೆನಪು.

ಚಿತ್ರ 'ಸಕತ್ ಕುಯ್ತಾನೆ ಸಾರ್' ಎಂಬ ಉಪಶೀರ್ಷಿಕೆಯನ್ನು ಒಳಗೊಂಡಿದೆ. ಕೋಮಲ್ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಒಂದು ಮನೆಯಲ್ಲಿ ಅತಿಥಿಯಾಗಿದ್ದ ಸಂದರ್ಭದಲ್ಲಿ ನಡೆಯುವ ಪ್ರಸಂಗವನ್ನು ಚಿತ್ರ ಒಳಗೊಂಡಿದೆ. ಚಿತ್ರವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಿಲ್ಲ. ದೊಡ್ಡ ಮಟ್ಟದ ಪ್ರಚಾರವನ್ನು ಕೂಡಾ ನೀಡಿಲ್ಲ. ಆದರೂ ಉದ್ಯಮದ ಮಂದಿಗೆ ಈ ಚಿತ್ರದ ಬಗ್ಗೆ ಸಹಜವಾಗಿಯೇ ನೀರೀಕ್ಷೆ ಇದೆ. ಈ ಚಿತ್ರ ಗೆದ್ದರೆ ಕೋಮಲ್‌ಗೆ ಒಂದು ಬ್ರೇಕ್ ಸಿಗಬಹುದೆಂಬ ನೀರೀಕ್ಷೆ ಇದೆ. ಹಾಗೇನಾದರೂ ಆದಲ್ಲಿ ನಾಯಕ ಪಾತ್ರದಲ್ಲಿ ನಟಿಸಬೇಕೆಂಬ ಅವರ ಕನಸು ನನಸಾದಂತಾಗುತ್ತದೆ.

Share this Story:

Follow Webdunia kannada