Select Your Language

Notifications

webdunia
webdunia
webdunia
webdunia

ವಿಕ್ಟರಿ

ವಿಕ್ಟರಿ
IFM
ನಿರ್ಮಾಣ: ಮನೋಹನ್ ಶೆಟ್ಟಿ. ಅಜಿತ್ ಪಾಲ್ ಮಂಗತ್
ನಿರ್ದೇಶಕ: ಅಜಿತ್ ಪಾಲ್ ಮಂಗತ್
ಸಂಗೀತ: ಅನು ಮಲ್ಲಿಕ್
ಕಲಾವಿದರು: ಹರ್‌ಮಾನ್ ಬೆವಜಾ, ಅಮೃತಾ ರಾವ್, ಅನುಪಮ್ ಖೇರ್, ಗುಲ್ಶನ್ ಗ್ರೋವರ್, ದಿಲೀಪ್ ತಹೀಲ್

ಕ್ರಿಕೆಟ್ ಭಾರತದಲ್ಲಿನ ಅತ್ಯಂತ ಜನಪ್ರೀಯ ಕ್ರೀಡೆ. ಕ್ರಿಕೆಟ್ ಮೇಲೆ ಅಧರಿತವಾದ ಹಲಾರು ಚಿತ್ರಗಳು ಇತ್ತೀಚಿನ ಕೆಲ ವರ್ಷಗಳಲ್ಲಿ ಬಿಡುಗಡೆಯಾಗಿವೆ. ಲಗಾನ್ ಚಿತ್ರ ಕ್ರಿಕೆಟ್ ಅನ್ನು ಆಧರಿತ ಚಿತ್ರ ತಯಾರಿಸಲು ಹಲವರಿಗೆ ಪ್ರೇರಣೆಯಾಯಿತು.

ನಿರ್ದೇಶಕ ಅಜಿತ್‌ಪಾಲ್ ಮಂಗತ್ ಹರ್‌ಮಾನ್ ಬೆವಾಜಾರೊಂದಿಗೆ ವಿಕ್ಟರಿ ಚಿತ್ರ ತಯಾರಿಸಿದ್ದಾರೆ. ನಮ್ಮ ದೇಶದಲ್ಲಿನ ಎಷ್ಟೊ ಜನರು ಕ್ರಿಕೆಟಿಗರಾಗುವ ಕನಸು ಕಾಣುತ್ತಾರೆ. ಆದರೆ, ಕೋಟಿಯಲ್ಲಿ ಒಬ್ಬರ ಆಸೆ ಪೂರ್ಣವಾಗುತ್ತದೆ. ಈ ವಿಷಯದ ಮೇಲೆ ಚಿತ್ರವನ್ನು ನಿರ್ಮಿಸಲಾಗಿದೆ.

ವಿಕ್ಟರಿ ಚಿತ್ರದಲ್ಲಿ ರಾಮ್ ಎಂಬವರು ತಮ್ಮ ಮಗ ಕ್ರಿಕೆಟಿಗನಾಗಿ ಭಾರತವನ್ನು ಪ್ರತಿನಿಧಿಸಬೇಕು ಎಂದು ಬಯಸುತ್ತಾರೆ. ವಿಜಯ್ ತನ್ನ ತಂದೆಯ ಕನಸನ್ನು ನನಸಾಗಿಸುತ್ತಾನೆ. ವಿಜಯ್ ಈ ಸಾಧನೆಯನ್ನು ಹೇಗೆ ಮಾಡುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ರೋಚಕವಾಗಿ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ವಿಶ್ವದ ಬೇರೆ ಬೇರೆ ತಂಡಗಳ ಹಲವಾರು ವಿಶ್ವ ಪ್ರಸಿದ್ಧ ಆಟಗಾರರು ಕಾಣಿಸಿಕೊಳ್ಳುತ್ತಾರೆ.

ಹರ್‌ಮಾನ್ ಪಾಲಿಗೆ ಪ್ರಮುಖವಾಗಿರುವ ವಿಕ್ಟರಿ
ಹರ್‌ಮಾನ್‌ರ ಮೊದಲ ಚಿತ್ರ ಲವ್ ಸ್ಟೋರಿ 2050 ಅಸಫಲವೆನಿಸಿತ್ತು. ಆದ್ದರಿಂದ ಈ ಚಿತ್ರ ಹರ್‌ಮಾನ್ ಕೆರಿಯರ್ ದೃಷ್ಟಿಯಿಂದ ಮಹತ್ವಪೂರ್ಣವೆನಿಸಿದೆ. ಅವರ ಈ ಚಿತ್ರ ಟಿಕೆಟ್ ಕಿಂಡಿಯಲ್ಲಿ ವಿಕ್ಟರಿ ಸಾಧಿಸುವುದು ಅತ್ಯಂತ ಅಗತ್ಯವಾಗಿದೆ.
webdunia
IFM


ಕ್ರಿಕೆಟ್ ಪ್ರೇಮಿ ಅಜಿತ್‌ಪಾಲ್
ಚಿತ್ರ ನಿರ್ದೇಶಕ ಅಜಿತ್‌ಪಾಲ್ ಮಂಗತ್ ಬಾಲ್ಯದಿಂದಲೂ ಕ್ರಿಕೆಟ್ ಪ್ರೇಮಿ. ಹಲವಾರು ಜಾಹೀರಾತುಗಳನ್ನು ತಯಾರಿಸಿರುವ ಅಜಿತ್‌ಪಾಲ್‌ರ ಪ್ರಕಾರ ಸಿನಿಮಾ ಮತ್ತು ಕ್ರಿಕೆಟ್ ಪ್ರತಿಯೊಬ್ಬ ಭಾರತೀಯನಿಗೂ ಪ್ರಿಯವಾದುದು, ಆದ್ದರಿಂದ ಅವರು ಈ ಎರಡನ್ನು ಒಂದುಗೂಡಿಸಿದ್ದಾರೆ. ಅಜಿತ್‌ಪಾಲ್ ಪ್ರಸಿದ್ಧವಾಗಿಲ್ಲದ ಮುಖವನ್ನು ತಮ್ಮ ಚಿತ್ರದಲ್ಲಿ ನಾಯಕನನ್ನಾಗಿಸಲು ಬಯಸಿದ್ದರು. ಆದ್ದರಿಂದ ಅವರು ಹರ್‌ಮಾನ್‌ರನ್ನು ಆರಿಸಿದರು. ಅಜಿತ್‌ಪಾಲ್ ಹೇಳುವಂತೆ, ಆಸ್ಟ್ರೇಲಿಯಾ ವೇಗಿ ಬ್ರೆಟ್ ಲಿ ಅವರಲ್ಲಿ ಚಿತ್ರಕತೆ ಹೇಳಿದಾಗ ಅವರು ಕೂಡಲೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು ಮತ್ತು ಕ್ರಿಕೆಟ್ ಮೇಲೆ ಅಧರಿಸಿದ ಇಂತಹ ಸ್ಕ್ರಿಪ್ಟ್ ಅನ್ನು ಅವರು ಮೊದಲೆಂದೂ ಕೇಳಿಲ್ಲ ಎಂದು ತಿಳಿಸಿದರು. ಈ ಚಿತ್ರ ವೀಕ್ಷಕರಿಗೆ ಮೆಚ್ಚುಗೆಯಾಗುತ್ತಂಬ ಪೂರ್ಣ ನಂಬಿಕೆ ಅಜಿತ್‌ಪಾಲ್‌ರಿಗಿದೆ.

Share this Story:

Follow Webdunia kannada