Select Your Language

Notifications

webdunia
webdunia
webdunia
webdunia

ರೊಮ್ಯಾಂಟಿಕ್ ಶಾಹಿದ್ ಹೊಸ ಅವತಾರದ 'ಕಮೀನೇ'

ರೊಮ್ಯಾಂಟಿಕ್ ಶಾಹಿದ್ ಹೊಸ ಅವತಾರದ 'ಕಮೀನೇ'
IFM
ಕಿಸ್ಮತ್ ಕನೆಕ್ಷನ್ ನಂತರ ಕರೀನಾಳ ಮಾಜಿ ಪ್ರಿಯಕರ ಶಾಹಿದ್ ಕಪೂರ್ ಎಂಬ ರೊಮ್ಯಾಂಟಿಕ್ ಚಾಕೋಲೇಟ್ ಸುಂದರಾಂಗ ಇದೀಗ 'ಕಮೀನೇ' ಮೂಲಕ ಹೊಸ ಅವತಾರದಲ್ಲಿ ಬರುತ್ತಿದ್ದಾರೆ. ವಿಶಾಲ್ ಭಾರದ್ವಾಜ್ ನಿರ್ದೇಶನದ ಈ ಚಿತ್ರದಲ್ಲಿ ಶಾಹಿದ್‌ದ್ದು ಡಬಲ್ ಆಕ್ಟಿಂಗ್.

ಚಿತ್ರದ ಕಥೆ ಹೀಗೆ ಸಾಗುತ್ತದೆ.ಗುಡ್ಡು, ಹಾಗೂ ಚಾರ್ಲಿ (ಶಾಹಿದ್) ಅವಳಿ ಸಹೋದರರು. ಮುಂಬೈಯಲ್ಲಿರುವ ವಿಶ್ವದ ಅತಿ ದೊಡ್ಡ ಸ್ಲಂ ಖ್ಯಾತಿಯ ಧಾರಾವಿಯಲ್ಲೇ ಹುಟ್ಟಿ ಬೆಳೆದವರು. ಸ್ಲಂನಲ್ಲಿದ್ದರೂ ಜೀವನದಲ್ಲಿ ಮೇಲೆ ಬಂದು ಗೌರವಯುತ ಜೀವನ ನಡೆಸಬೇಕೆಂಬ ಕನಸು ಇಬ್ಬರೂ ಕಾಣುತ್ತಾರೆ.

ಗುಡ್ಡು ಸಣ್ಣ ಎನ್‌ಜಿಒ ಒಂದರಲ್ಲಿ ಟ್ರೈನೀಯಾಗಿ ಕೆಲಸ ಮಾಡುತ್ತಿರುತ್ತಾನೆ. ಕಾರ್ಪೋರೇಟ್ ಪ್ರಪಂಚದ ಏಣಿಯಲ್ಲಿ ಮೇಲೇರಬೇಕೆಂಬುದು ಇವನ ಬಯಕೆ. ತುಂಬ ಜಾಗರೂಕ ಹಾಗೂ ಕ್ರಿಯಾಶೀಲ ಗುಡ್ಡು ಕಷ್ಟಪಟ್ಟು ಕೆಲಸ ಮಾಡುತ್ತಿರುತ್ತಾನೆ. ಆದರೆ ಚಾರ್ಲಿ ಹಾಗಲ್ಲ. ರೇಸ್ ಕೋರ್ಸ್‌ಗೆ ಹೋಗಿ ಪ್ರತಿದಿನ ರೇಸ್‌ನಲ್ಲಿ ಯಾರು ಗೆಲ್ಲುತ್ತಾರೆ ಎಂದು ಬೆಟ್ ಮಾಡಿ ಸುಲಭದಲ್ಲಿ ಹಣ ಮಾಡುತ್ತಿರುತ್ತಾನೆ. ದೊಡ್ಡ ಬುಕ್ಕಿಯಾಗಬೇಕೆಂಬ ಬಯಕೆ ಅವನದ್ದು. ಚಾರ್ಲಿ ತುಂಬ ಧೈರ್ಯಶಾಲಿ, ಅಷ್ಟೇ ಕಪಟಿ.

ವಿಚಿತ್ರವೆಂದರೆ ಈ ಅವಳಿಗಳಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬನಿಗಾಗದು. ನೋಡಲು ಒಂದೇ ತರಹವಿದ್ದಾರೆ ಹಾಗೂ ಮಾತನಾಡುವಾಗ ಬಿಕ್ಕಳಿಕೆ ತೊಂದರೆಯಿದೆ ಎಂಬುದು ಬಿಟ್ಟರೆ ಬೇರೆ ಯಾವ ಗುಣದಲ್ಲೂ ಒಬ್ಬರಿಗೊಬ್ಬರು ಸಾಮ್ಯರಿಲ್ಲ ಎಂಬುದು ಅವರಿಬ್ಬರಿಗೂ ಗೊತ್ತು. ಚಾರ್ಲಿಗೆ ಬಿಕ್ಕಳಿಕೆ ಸ್ವಲ್ಪ ಜಾಸ್ತಿ. ಆದರೆ ಗುಡ್ಡು ತುಂಬ ನರ್ವಸ್ ಆದಾಗ, ಉದ್ವೇಗಕ್ಕೊಳಗಾದಾಗ ಮಾತ್ರ ಬಿಕ್ಕಳಿಕೆ ತೊಂದರೆ ಇರುತ್ತದೆ. ಇಬ್ಬರೂ ತಮ್ಮ ಜೀವನ ಬೇರೆಬೇರೆಯಾಗಿಯೇ ನಡೆಸುತ್ತಿರುತ್ತಾರೆ.

webdunia
IFM
ಹೀಗಿರುವಾಗ ಒಂದು ಕೆಟ್ಟ ದಿನ ಎದುರಾಗುತ್ತದೆ. ಚಾರ್ಲಿಗೆ ಆಫೀಸಿನಲ್ಲಿ ಅದು ಕೆಟ್ಟ ದಿನ. ತಲೆಕೆಟ್ಟು ಯಾರದೋ ಕಾರು ಎಗರಿಸಿಕೊಂಡು ಹೋಗುತ್ತಾರೆ. ಅದು ಡ್ರಗ್ ಮಾಫಿಯಾಕ್ಕೆ ಸೇರಿದ ಕಾರಾಗಿರುತ್ತದೆ. ಚಾರ್ಲಿ ಹೀಗೆ ಡ್ರಗ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ.

ಇತ್ತ ಗುಡ್ಡು ಬೀದಿನಾಟಕಗಳನ್ನು ಆಡುತ್ತಿರುತ್ತಾನೆ. ಈತನ ಜತೆಗೆ ನಾಟಕದಲ್ಲಿ ಈತನ ಹೊಸ ಗೆಳತಿ ಸ್ವೀಟಿಯೂ (ಪ್ರಿಯಾಂಕಾ ಚೋಪ್ರಾ) ಅಭಿನಯಿಸುತ್ತಿರುತ್ತಾಳೆ. ಒಂದು ದಿನ ನಾಟಕದಲ್ಲಿ ಅಭಿನಯಿಸುತ್ತಿರುವಾಗಲೇ ತಾನು ಗರ್ಭಿಣಿ ಎನ್ನುತ್ತಾಳೆ. ಗುಡ್ಡು ನಿಜವಾಗಿಯೂ ಗಾಬರಿಗೊಳಗಾಗುತ್ತಾನೆ. ಆಮೇಲೆ ಆಕೆ ಹೇಳಿದ್ದು ಸುಳ್ಳು ಎಂದು ಗೊತ್ತಾಗುತ್ತದೆ. ಇಬ್ಬರೂ ಮದುವೆಯಾಗಬೇಕೆಂದು ತೀರ್ಮಾನಿಸುತ್ತಾರೆ. ಆದರೆ ಅಣ್ಣ ರಾಜಕೀಯದಲ್ಲಿರುವುದರಿಂದ ಅವರಿಗೆ ದೊಡ್ಡ ಗ್ಯಾಂಗ್ ಇರುತ್ತದೆ. ಹೀಗಾಗಿ ನಮ್ಮ ಮದುವೆ ಸಾಧ್ಯವಿಲ್ಲ ಎನ್ನುತ್ತಾಳೆ ಸ್ವೀಟಿ.

ಹೀಗೆ ಅವಳಿ ಸಹೋದರರ ಎರಡು ಕಥೆ ಸಮಾನಾಂತರವಾಗಿ ಸಾಗುತ್ತಿರುತ್ತದೆ. ಹೀಗೆ ಸಾಗಿದಂತೆ ಕಥೆಗೊಂದು ಟ್ವಿಸ್ಟ್ ಬರುತ್ತದೆ. ಕೊನೆಗೆ ಅವಳಿಗಳ ಮಿಲನ ಇದ್ದೇ ಇದೆ. ಈ ಮಿಲನದಿಂದ ಅವರಿಬ್ಬರ ಕನಸಿನ ಬೇಟೆ ಹೇಗೆ ನಿಜವಾಗುತ್ತದೆ ಎಂಬುದು ಕಥೆ. ಅದಕ್ಕೆ ಚಿತ್ರವನ್ನೇ ನೋಡಬೇಕು.

webdunia
IFM
'ಕಮೀನೇ' ತುಂಬ ಇಂಟರೆಸ್ಟಿಂಗ್ ಕಥೆ ಎಂದು ಹೇಳಲಾಗುತ್ತಿದೆ. ಓಂಕಾರಾದಂತಹ ಅತ್ಯುತ್ತಮ ಚಿತ್ರ ಕೊಟ್ಟ ವಿಶಾಲ್ ಭಾರದ್ವಾಜ್ ಈ ಚಿತ್ರ ನಿರ್ದೇಶಿಸುತ್ತಿರುವುದರಿಂದ ಈ ಬಗ್ಗೆ ಬಾಲಿವುಡ್‌ನಲ್ಲಿ ಕುತೂಹಲವೂ ಹೆಚ್ಚಿದೆ. ಜೂ.5ರಂದು ಚಿತ್ರ ಬಿಡುಗಡೆ ಎಂದು ಹೇಳಲಾಗುತ್ತಿದ್ದು, ಈಗಲೇ ಶಾಹಿದ್ ಹೊಸ ರೂಪ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರವೆಂದರೆ ಇದರಲ್ಲಿ ಶಾಹಿದ್ ನಟಿಸಿದ್ದು ನೆಗೆಟಿವ್ ರೋಲ್‌ನಲ್ಲಿ. ಶಾಹಿದ್ ಹಾಗೂ ಪ್ರಿಯಾಂಕಾರ ಲಿಪ್-ಲಾಕ್ ಸೀನ್ ಕೂಡಾ ಸಿನಿಮಾದ ಮೊದಲೇ ಪ್ರಸಿದ್ಧಿ ಗಳಿಸಿತ್ತು.

ಹರ್ಮಾನ್ ಬೇವಾಜಾ ಎಂಬ ತನ್ನ ಆತ್ಮೀಯ ಗೆಳೆಯನೊಂದಿಗೇ ಲವ್ ಸ್ಟೋರಿ-2050 ಸಿನಿಮಾದಲ್ಲಿ ತುಟಿಗೆ ತುಟಿ ಸೇರಿಸಿ ಕಿಸ್ ಮಾಡಲು ಹಿಂದೇಟು ಹಾಕಿದ್ದ ಪ್ರಿಯಾಂಕಾ ಈಗ ಕಮೀನೇಯಲ್ಲಿ ಶಾಹಿದ್ ಜತೆ ಮಾಡಿದ್ದಾಳಂತೆ ಎಂಬುದೇ ಬಾಲಿವುಡ್‌ನಲ್ಲಿ ಹೆಚ್ಚು ಕುತೂಹಲಕ್ಕೆ ಕಾರಣವಾಗಿತ್ತು. ಲವ್ ಸ್ಟೋರಿ-2050 ಸಿನಿಮಾದಲ್ಲಿ ಕಿಸ್ ಮಾಡುವ ಅಗತ್ಯ ಚಿತ್ರಕಥೆಗಿಲ್ಲ ಎಂದು ಪ್ರಿಯಾಂಕಾ ಸಾರಾಸಗಟಾಗಿ ಹೇಳಿಬಿಟ್ಟಿದ್ದಳು.

ಪ್ರಿಯಾಂಕ ತುಂಬ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲು ಸ್ವಲ್ಪ ಹಿಂದೆಯೇ ಎಂಬ ಕಳಂಕ (?)ವೂ ಆಕೆಗಿತ್ತು. ಫ್ಯಾಷನ್ ಚಿತ್ರದಲ್ಲಿ ನಿರ್ದೇಶಕ ಮಧುರ್ ಭಂಡಾರ್ಕರ್ ಆಕೆಯನ್ನು ಇದಕ್ಕಾಗಿ ಸಾಕಷ್ಟು ತಿದ್ದಿ ತೀಡಿದ್ದರಂತೆ. ಆದರೆ ಕಮೀನೇಯಲ್ಲಿ ಈ ನಿಟ್ಟಿನಲ್ಲಿ ಸಕಷ್ಟು ಪ್ರಿಯಾಂಕಾ ಸುಧಾರಿಸಿದ್ದಾಳೆ. ಶಾಹಿದ್ ಜತೆಗಿನ ಹಲವು ಹಾಟ್ ಸೀನ್‌ಗಳಲ್ಲೂ ನಟಿಸಿದ್ದಾಳೆ ಎಂಬ ಗುಲ್ಲೂ ಈಗ ಹಬ್ಬಿದೆ.

ಅಂದಹಾಗೆ, ಹುಡುಗಿಯರ ಆರಾಧ್ಯ ದೈವ ಶಾಹಿದ್ ಕಪೂರ್ ಕಿಸ್ಮತ್ ಕನೆಕ್ಷನ್‌ನಲ್ಲೇ ತುಂಬ ಚೆನ್ನಾಗಿ ಕಾಣಿಸಿದ್ದ. ಈಗ ಕಮೀನೆಯಲ್ಲಿ ಇನ್ನೂ ತೆಳ್ಳಗಾಗಿ ವಿಶೇಷ ಲುಕ್‌ನೊಂದಿಗೆ ಕಾಣಿಸಿದ್ದಾನಂತೆ. ಒಟ್ಟಿನಲ್ಲಿ ಹಲವು ಕುತೂಹಲಗಳ ಸರಣಿಯಲ್ಲೇ ಸುದ್ದಿ ಮಾಡಿರುವ ಕಮೀನೇ ನೋಡಲು ಜೂನ್ವರೆಗೂ ಕಾಯಬೇಕು.
webdunia
IFM

Share this Story:

Follow Webdunia kannada