Select Your Language

Notifications

webdunia
webdunia
webdunia
webdunia

ಥೋಡಾ ಪ್ಯಾರ್ ಧೋಡಾ ಮ್ಯಾಜಿಕ್

ಥೋಡಾ ಪ್ಯಾರ್ ಧೋಡಾ ಮ್ಯಾಜಿಕ್
ರಣಬೀರ್ ತಲ್ವಾರ್ (ಸೈಫ್ ಅಲಿಖಾನ್) ದೇಶದ ಪ್ರತಿಷ್ಠಿತ ಉದ್ಯಮಿ. ಆದರೂ ಸಾಲಗಾರ. ಉದ್ಯಮದಲ್ಲಿ ಎಲ್ಲವನ್ನು ಕಳೆದುಕೊಂಡು ಎಲ್ಲರ ಪ್ರೀತಿಯಿಂದ ವಂಚಿತನಾದವನು.ಜೀವನ ಚಕ್ರ 360 ಡಿಗ್ರಿಗಳಿಗೆ ತಿರುಗಿದಾಗ ನ್ಯಾಯಾಲಯದ ಎಲ್ಲ ಪ್ರಕರಣಗಳಲ್ಲಿ ಸೋಲು ಎದುರಿಸಬೇಕಾಗುತ್ತದೆ.ನಾಲ್ಕು ತಬ್ಬಲಿ ಮಕ್ಕಳ ಪೋಷಣೆಯನ್ನು ಮಾಡುತ್ತಿರುತ್ತಾನೆ.

ತಬ್ಬಲಿಯಾದ ನಾಲ್ಕು ಮಕ್ಕಳು ಕೆಲ ಕಾರಣಗಳಿಂದಾಗಿ ರಣಬೀರ್‌ನನ್ನು ದ್ವೇಷಿಸಿ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ.ರಣಬೀರ್ ಮಕ್ಕಳನ್ನು ನೋಡಲು
ಕೆಲ ಕಾರಣಗಳಿಂದಾಗಿ ಸಾಧ್ಯವಾಗುವುದಿಲ್ಲ. ತಾವು ದ್ವೇಷಿಸುತ್ತಿರುವ ವ್ಯಕ್ತಿಯೊಂದಿಗೆ ಇರಲು ಸಿದ್ದವಾಗದ ಮಕ್ಕಳು ಸ್ವತಂತ್ರ ಬದುಕನ್ನು ಹುಡಕಲು ಪ್ರಯತ್ನಿಸುತ್ತಿರುತ್ತಾರೆ. ರಣಬೀರ್‌ನೊಂದಿಗಿನ ಬದುಕು ಅಸಂತುಷ್ಟ ವಾತಾವರಣ ಸೃಷ್ಠಿಯಾಗುತ್ತದೆ. ಒಂದು ದಿನ ತಬ್ಬಲಿ ಮಕ್ಕಳು ಸಹಾಯಕ್ಕಾಗಿ ದೇವರನ್ನು ಪ್ರಾರ್ಥಿಸುತ್ತಾರೆ. ಮಕ್ಕಳ ಮನವಿಗೆ ಸ್ಪಂದಿಸಿದ ದೇವರು ತುಂಟತನ, ಪ್ರೀತಿಗೆ ಪಾತ್ರಳಾದವಳನ್ನು ರಣಬೀರ್ ಹಾಗೂ ಮಕ್ಕಳನ್ನು ಒಂದುಗೂಡಿಸುವ ಕಾರ್ಯಕ್ಕೆ ಕಳುಹಿಸುತ್ತಾನೆ.

ಗೀತಾ (ರಾಣಿ ಮುಖರ್ಜಿ)ದೇವತೆಯಾಗಿ ಆಕಾಶದ ಕಾಮನಬಿಲ್ಲಿನಿಂದ ಇಳಿದು ನೇರವಾಗಿ ರಣಬೀರ್‌ ಮನೆಗೆ ಬಂದು ಸ್ವಂಯ ಘೋಷಿತ ಆಯಾ ಎಂದು ಹೇಳುತ್ತಾಳೆ. ನಂತರ ಮನೆಯಲ್ಲಿ ರಣಬೀರ್ ಹಾಗೂ ಗೀತಾ ಮತ್ತು ಮಕ್ಕಳ ನಡುವೆ ಮನೋರಂಜನೆ, ಭಾವನಾತ್ಮಕತೆ, ತುಂಟಾಟ, ತಂತ್ರ ಹಾಗೂ ಪ್ರೀತಿಯ ಮಹಾಪೂರ ಹರಿದು ಬರುತ್ತದೆ.

ದೇವತೆ ಗೀತಾಳಿಗೆ ಪ್ರೀಯಿಯಂದರೇನು ಎಂದು ಗೊತ್ತಿರುವುದಿಲ್ಲ. ರಣಬೀರ್‌ ಎಲ್ಲ ಪ್ರೀತಿಯನ್ನು ಕಳೆದುಕೊಂಡವನು.ನಾಲ್ಕು ಮಕ್ಕಳಿಗೆ ಪ್ರೀತಿಯ ಅಗತ್ಯವಿರುತ್ತದೆ.ಮನೋರಂಜನೆ, ಭಾವನಾತ್ಮಕತೆ, ತುಂಟಾಟ, ತಂತ್ರ ಹಾಗೂ ಪ್ರೀತಿಯ ಮಹಾಪೂರ ಚಿತ್ರದಲ್ಲಿ ಕಾಣಬಹುದಾಗಿದೆ.

Share this Story:

Follow Webdunia kannada