Select Your Language

Notifications

webdunia
webdunia
webdunia
webdunia

ಆಂಗ್ಲ ಚಿತ್ರದಲ್ಲಿ ಮುಜಿಬುರ್ ರಹಮಾನ್ ಆಗಿ ಬಿಗ್ ಬಿ

ಆಂಗ್ಲ ಚಿತ್ರದಲ್ಲಿ ಮುಜಿಬುರ್ ರಹಮಾನ್ ಆಗಿ ಬಿಗ್ ಬಿ
PTI
ಬಾಂಗ್ಲಾದೇಶ ಸಂಸ್ಥಾಪಕ ಹಾಗೂ ಪಿತಾಮಹ ಶೇಕ್ ಮುಜಿಬುರ್ ರೆಹಮಾನ್ ಅವರ ಜೀವನ ಆಧಾರಿತ ಚಿತ್ರದಲ್ಲಿ ಬಾಲಿವುಡ್‌ನ ಸುಪರ್ ಸ್ಟಾರ್ ಅಮಿತಾಭ್ ಬಚ್ಚನ್ ರೆಹಮಾನ್‌ರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ಅವರ ಕುಟುಂಬಿಕರೇ ತಾರಾಗಣದಲ್ಲಿದ್ದಾರೆ.

ಪ್ರಖ್ಯಾತ ನಿರ್ದೇಶಕ ಶಾಮ್ ಬೆನಗಲ್ ಅವರು ಈ ಆಂಗ್ಲ ಭಾಷಾ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 1970ರಲ್ಲಿ ಟೈಮ್ ಮ್ಯಾಗಜಿನ್ ಮುಜಿಬುರ್ ಅವರಿಗೆ ನೀಡಿದ `ದಿ ಪೊಯೆಟ್ ಅಫ್ ಪಾಲಿಟಿಕ್ಸ್' ಎಂಬ ಬಿರುದನ್ನೇ ಈ ಚಿತ್ರಕ್ಕೆ ಹೆಸರಿಡಲಾಗಿದೆ.

65 ವರ್ಷ ವಯಸ್ಸಿನ ಬಚ್ಚನ್ ಬಾಂಗ್ಲಾದೇಶಿ ಚಿತ್ರದಲ್ಲಿ ಅಭಿನಯಿಸಲು ನಿರ್ಮಾಪಕ, ಬಾಂಗ್ಲಾದೇಶಿ ಪತ್ರಕರ್ತ ಅಬ್ದುಲ್ ಗಫರ್ ಚೌಧುರಿ ಅವರಿಗೆ ಒಪ್ಪಿಗೆ ನೀಡಿದ್ದಾರೆ. ಚೌಧುರಿ ದೀರ್ಘಕಾಲದಿಂದ ಮೆಗಾಸ್ಟಾರ್ ಅಮಿತಾಭ್ ಅವರನ್ನೊಳಗೊಂಡ ಚಿತ್ರವೊಂದನ್ನು ನಿರ್ಮಿಸಬೇಕೆಂಬ ಕನಸು ಕಂಡಿದ್ದರು. ಚಿತ್ರವು 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ನ್ಯೂಯಾರ್ಕ್ ಮೂಲದ ಈಸ್ಟರ್ನ್ ನ್ಯೂಸ್ ಏಜೆನ್ಸಿ(ಇಎಲ್ಎ) ವರದಿ ಮಾಡಿದೆ.

ಈ ಚಿತ್ರದಲ್ಲಿ ಬಿಗ್ ಬಿ ಅವರ ಮಗ ಅಭಿಷೇಕ್ ಬಚ್ಚನ್ ಯುವ ಮುಜೀಬ್ ಪಾತ್ರದಲ್ಲಿ ಅಭಿನಯಿಸಲಿದ್ದು, ಅಭಿಷೇಕ್ ಪತ್ನಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮತ್ತು ಹೆಸರಾಂತ ಚಿತ್ರನಟಿ ಶಬಾನಾ ಆಜ್ಮಿ ಅವರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರವನ್ನು ಮೊದಲು ಆಂಗ್ಲ ಭಾಷೆಯಲ್ಲಿ ನಿರ್ಮಿಸಲಾಗುವುದು. ನಂತರ ಬೆಂಗಾಲಿ, ಹಿಂದಿ ಮತ್ತು ಇತರೇ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.

ಶೇಕ್ ಮುಜೀಬ್ ಅವರನ್ನು ಪ್ರೀತಿಯಿಂದ `ಬಂಗಬಂಧು' ಅಥವಾ ಬಂಗಾಳದ ಆಪ್ತ ಮಿತ್ರ ಎಂದು ಕರೆಯುತ್ತಿದ್ದರು. 1960ರಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವೆ ಸುಮಾರು ಒಂಬತ್ತು ತಿಂಗಳ ಕಾಲ ನಡೆದ ಸ್ವಾತಂತ್ರ್ಯ ಯುದ್ಧಕ್ಕೆ ಭಾರತವು ಬಾಂಗ್ಲಾದೇಶವನ್ನು ಬೆಂಬಲಿಸಿದ್ದರಿಂದ ಆ ದೇಶಕ್ಕೆ ಸ್ವಾತಂತ್ರ್ಯ ದೊರೆತಿತ್ತು. ಈ ಉಪಕಾರದ ಸ್ಮರಣಾರ್ಥ ಈ ಚಿತ್ರ ನಿರ್ಮಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

Share this Story:

Follow Webdunia kannada