Webdunia - Bharat's app for daily news and videos

Install App

ಶೌರ್ಯದ ಕಥೆ 'ವೀರ್‌'ನಲ್ಲಿ ಸಲ್ಮಾನ್ ಖಾನ್ ಹೊಸ ಲುಕ್!

Webdunia
IFM
ಸಲ್ಮಾನ್ ಖಾನ್ ಈಗ ಹೊಸ ರೂಪದಲ್ಲಿ ಬರುತ್ತಿದ್ದಾರೆ. 'ವೀರ್' ಚಿತ್ರದ ಸ್ಟಿಲ್‌ಗಳು ಈಗಾಗಲೇ ಸಲ್ಮಾನ್ ಖಾನ್ ಅವರ ಹೊಸ ರೂಪವನ್ನು ದರ್ಶಿಸಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

' ವೀರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಪಿಂಡಾರಿ ಪರಾಕ್ರಮಿ ಸೈನಿಕ. ಶೌರ್ಯ, ಪ್ರತಾಪದಲ್ಲಿ ಆತನನ್ನು ಮೆಟ್ಟಿ ನಿಲ್ಲುವವರಾರೂ ಇಲ್ಲ. ಆದರೆ ಪ್ರೀತಿಯ ವಿಷಯದಲ್ಲಿ ಈತ ಹೂವಿನಂತೆ ಮೃದು ಹೃದಯಿ. ಬ್ರಿಟೀಷರ ಕಾಲದ ಒಡೆದು ಆಳುವ ನೀತಿಯನ್ನು ಈ ಚಿತ್ರದಲ್ಲಿ ತೋರಿಸಲಾಗಿದ್ದು, ಚಿತ್ರದಲ್ಲಿ ಪ್ರೀತಿಯ ಉತ್ಕಟತೆಯನ್ನೂ ಹದವಾಗಿ ಬೆರೆಸಲಾಗಿದೆ. ಪಿಂಡಾರಿ ವೀರನಾದ ವೀರ್ ತನ್ನ ವೈರಿಯ ಮಗಳಾದ ಯಶೋಧರಾಳನ್ನು ಗಾಢವಾಗಿ ಪ್ರೀತಿಸುವ ಕಥೆ ಚಿತ್ರದಲ್ಲಿದೆ.

ಪ್ರೀತಿ ಹಾಗೂ ಪರಾಕ್ರಮ ಇವುಗಳತ್ತ ಚಿತ್ರದ ಕಥೆ ಹೆಚ್ಚು ವಾಲುತ್ತದೆ. ಪರಾಕ್ರಮದಲ್ಲಿ ನಿಯತ್ತು, ನಿಷ್ಠೆ, ಜವಾಬ್ದಾರಿಗಳು ಮೇಳೈಸುತ್ತವೆ. ಇದು ಸಲ್ಮಾನ್ ಖಾನ್ ಅವರ 20 ವರ್ಷದ ಕನಸಿನ ಕೂಸು. ಇಂಥ ಸನ್ನಿವೇಶ ಹೊಂದಿದ ಚಿತ್ರವೊಂದರಲ್ಲಿ ನಟಿಸುವುದು ಸಲ್ಮಾನ್ ಕನಸು. ಈಗ ಸಲ್ಮಾನ್ ಕನಸು ನನಸಾಗಿದೆ. ಚಿತ್ರದಲ್ಲಿ ಖ್ಯಾತ ನಟರಾದ ಮಿಥುನ್ ಚಕ್ರವರ್ತಿ, ಜಾಕಿಶ್ರಾಫ್ ಇದ್ದಾರೆ. ಸಲ್ಮಾನ್ ತಮ್ಮ ಸೊಹೈಲ್ ಖಾನ್ ಕೂಡಾ ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ನಾಯಕಿಯರಾಗಿ ಝರೀನ್ ಖಾನ್, ಮಿಸ್ ಇಂಗ್ಲೆಂಡ್ ಖ್ಯಾತಿಯ ಲೀಸಾ ಲಝಾರಸ್ ಅಭಿನಯಿಸುತ್ತಿದ್ದಾರೆ.
IFM



ಮೂಲಗಳ ಪ್ರಕಾರ, ಸಲ್ಮಾನ್ ಖಾನ್ ಅವರ ಈ ಹಿಂದಿನ ಚಿತ್ರಗಳಿಗಿಂತ ಈ ಚಿತ್ರ ವಿಭಿನ್ನವಾಗಿದ್ದು, ತನ್ನ ವಿಶೇಷ ಲುಕ‌್‌ಗಾಗಿ ಸಲ್ಮಾನ್ ಖಾನ್ ಸಾಕಷ್ಟು ಶ್ರಮಿಸಿದ್ದಾರೆ. ಈವರೆಗೆ ಸಲ್ಮಾನ್ ಖಾನ್ ಕಂಡ ಲುಕ್‌ಗಳಿಗಿಂತ ಇದು ಡಿಫರೆಂಟ್ ಲುಕ್ ಆಗಿದ್ದು, ವಿಶೇಷವಾಗಿ ಕಂಗೊಳಿಸಿದ್ದಾರೆ.

ಚಿತ್ರದಲ್ಲಿ ಗುಲ್ಜಾರ್ ಸಾಹಿತ್ಯದಲ್ಲಿ ಸಾಜಿದ್ ವಾಜಿದ್ ಸಂಗೀತ ನೀಡಿದ್ದಾರೆ. ವಿಜಯ್ ಗಲಾನಿ ನಿರ್ಮಿಸಿದ್ದಾರೆ. ಅನಿಲ್ ಶರ್ಮಾ ನಿರ್ದೇಶನದ ಐತಿಹಾಸಿಕ ಕಥೆಯುಳ್ಳ ಈ 'ವೀರ್' ಚಿತ್ರ 2010ರ ಜನವರಿ 22ರಂದು ಥಿಯೇಟರ್‌ಗಳಿಗೆ ಅಪ್ಪಳಿಸಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments