Webdunia - Bharat's app for daily news and videos

Install App

ರೊಮ್ಯಾನ್ಸು ಕೂಡಾ ರಾಶಿಯನ್ನೇ ಅವಲಂಬಿಸಿರುತ್ತಾ?

ಇದು ವಿಶಿಷ್ಟ ಕಥೆಯ ವಾಟ್ಸ್ ಯುವರ್ ರಾಶಿ? ಚಿತ್ರ!

Webdunia
IFM
ರೊಮ್ಯಾನ್ಸ್! ಇದೂ ಕೂಡಾ ರಾಶಿಯನ್ನು ಅವಲಂಬಿಸಿರುತ್ತದೆ! ಚಂದ್ರ ಹಾಗೂ ಸೂರ್ಯನನ್ನು ಹೊಂದಿಕೊಂಡು ವ್ಯಕ್ತಿಯ ಲವ್ ಲೈಫ್ ಕೂಡಾ ಇರುತ್ತದೆ ಎಂಬ ವಿಶಿಷ್ಟ ಕಥೆಯ ಮೂಲಕ ಬಾಲಿವುಡ್ ಅಂಗಳದಲ್ಲಿ ಇದೀಗ ಸದ್ಯದಲ್ಲೇ ವಾಟ್ಸ್ ಯುವರ್ ರಾಶಿ? ಚಿತ್ರ ಬಿಡುಗಡೆಗೊಳ್ಳಲಿದೆ.

ವಾಟ್ಸ್ ಯುವರ್ ರಾಶಿ ಚಿತ್ರದ ಕಥಾ ಹಂದರ ಇಷ್ಟೇ. ಆತ ಯೋಗೇಶ್ ಪಟೇಲ್ ಎಂಬ ಒಬ್ಬ ಯುವಕ. ಲವ್ ಮ್ಯಾರೇಜ್ ಮೂಲಕವೇ ತಾನು ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ತತ್ವದ ಮೇಲೆ ಬಲವಾದ ನಂಬಿಕೆಯಿಟ್ಟವನು ಆತ. ಆದರೆ ಒಮ್ಮೆ ಆತನಿಗೆ ಕೇವಲ ಹತ್ತೇ ದಿನಗಳೊಳಗೆ ಸಂಗಾತಿಯನ್ನು ಆಯ್ಕೆ ಮಾಡದಿದ್ದರೆ ನಿನ್ನ ಕುಟುಂಬ ದೊಡ್ಡದೊಂದು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಎಂಬ ಭವಿಷ್ಯ ಹೇಳುತ್ತಾರೆ. ಇದರಿಂದ ಗೊಂದಲಕ್ಕೊಳಗಾಗಿ ಹತ್ತು ದಿನದಲ್ಲಿ ಸಂಗಾತಿ ಹುಡುಕುವ ಕಾರ್ಯಕ್ಕೆ ಹೊರಡುತ್ತಾನೆ ಆತ.

IFM
10 ದಿನದಲ್ಲಿ ಜೀವನಪೂರ್ತಿ ಜತೆಗಿರಬಲ್ಲ ಹುಡುಗಿಯೊಬ್ಬಳನ್ನು ಆಯ್ಕೆ ಮಾಡೋದು ಅಂದರೆ ಸುಲಭದ ಮಾತಾ? ಖಂಡಿತಾ ಅಲ್ಲ. ಹಾಗೆಯೇ ಆತನಿಗೂ ಇದೊಂದು ಸಂದಿಗ್ಧ ಪರಿಸ್ಥಿತಿಯಂತೆ ಭಾಸವಾಗುತ್ತದೆ. ಅದಕ್ಕಾಗಿ ಆತ ಪ್ರತಿ ರಾಶಿಯಿಂದ ಒಬ್ಬರಂತೆ 12 ಮಂದಿ ಹುಡುಗಿಯರನ್ನು ಆಯ್ಕೆ ಮಾಡುತ್ತಾನೆ. ಹೀಗಾಗಿ ಆತನಿಗೆ ಲವ್ವಿನಲ್ಲಿ ಬೀಳಲು 12 ಆಯ್ಕೆಗಳಿರುತ್ತವೆ!

ಪ್ರತಿ ದಿನಕ್ಕೆ ಇಬ್ಬರು ಹುಡುಗಿಯರಂತೆ ಆರು ದಿನಗಳಲ್ಲಿ 12 ಹುಡುಗಿಯರ ಆಯ್ಕೆಯನ್ನು ಆತ ನಡೆಸುತ್ತಾನೆ. ನಂತರದ ಮೂರು ದಿನಗಳಲ್ಲಿ ಈ 12 ಹುಡುಗಿಯರಲ್ಲಿ ಯಾರನ್ನು ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಲಿ ಎಂದು ಚಿಂತಿಸಲು ಇಟ್ಟುಕೊಳ್ಳುತ್ತಾನೆ. ಉಳಿದ ಕೊನೆಯ ಒಂದೇ ದಿನವನ್ನು ಅರ್ಥಾತ್ 10ನೇ ದಿನವನ್ನು ಒಬ್ಬಳ ಕುತ್ತಿಗೆಗೆ ತಾಳಿ ಬಿಗಿಯಲು ಎಂದು ಇಟ್ಟಿರುತ್ತಾನೆ. ನಂತರ ಏನಾಗುತ್ತದೆ? ಆತನ ಯಾರನ್ನು ಮದುವೆಯಾಗುತ್ತಾನೆ. ಇದಕ್ಕೆಲ್ಲ ಚಿತ್ರವನ್ನೇ ನೋಡಿ ಆನಂದಿಸಬೇಕು.

IFM
ವಾಟ್ಸ್ ಯುವರ್ ರಾಶಿ? ಚಿತ್ರ ಮಧು ರೇ ಅವರು ಬರೆದ ಗುಜರಾತಿ ಕಾದಂಬರಿ ಕಿಂಬಾಲ್ ರೇವನ್ಸ್‌ವುಡ್ ಕಥೆಯನ್ನು ಆಧರಿಸಿದೆ. ಅಶುತೋಷ್ ಗೌರೀಕರ್ ಅರ ಮೊದಲ ರೊಮ್ಯಾಟಿಂಕ್ ಕಾಮಿಡಿ ಚಿತ್ರ ಇದು. ಚಿತ್ರದಲ್ಲಿ ಪ್ರಿಯಾಂಕಾ ಛೋಪ್ರಾ 12 ಪಾತ್ರಗಳಲ್ಲಿ ನಟಿಸಿರುವುದು ಚಿತ್ರದ ವಿಶೇಷತೆ. ನಾಯಕನಾಗಿ ಹರ್ಮಾನ್ ಭವೇಜಾ ಭೂಮಿಕೆಯಲ್ಲಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸೆಪ್ಟೆಂಬರ್ 25ರಂದು ತೆರೆಕಾಣಲಿದೆ.

ಪ್ರಿಯಾಂಕಾ ಛೋಪ್ರಾರೇ ಹೇಳಿದಂತೆ, ಈ ಚಿತ್ರ ನನಗೆ ಸವಾಲು. ಇದರಲ್ಲಿ 12 ಬೇರೆ ಬೇರೆ ಪಾತ್ರಗಳಲ್ಲಿ ನಟಿಸುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದೇನೆ. ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿಟ್ಟಿದ್ದೇನೆ ಎಂದಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments