Select Your Language

Notifications

webdunia
webdunia
webdunia
webdunia

ರಣಬೀರ್‌ ವೇಕ್‌ ಅಪ್ ಸಿದ್‌ನಲ್ಲಿ ಉಂಡಾಡಿ ಗುಂಡ!

ರಣಬೀರ್‌ ವೇಕ್‌ ಅಪ್ ಸಿದ್‌ನಲ್ಲಿ ಉಂಡಾಡಿ ಗುಂಡ!
IFM
ರಣಬೀರ್ ಕಪೂರ್- ರಣಬೀರ್ ಕಪೂರ್‍‌ಗೆ ಇದರಲ್ಲಿ ಸಿದ್ದಾರ್ಥ್ ಮೆಹ್ರಾ ಪಾತ್ರ. ಸಿದ್ದಾರ್ಥ್‌ನನ್ನು ಎಲ್ಲರೂ ಕರೆಯೋದು ಸಿದ್ ಅಂತ. ಸಾಮಾನ್ಯ ಹುಡುಗ. ಕಾಲೇಜು ಮುಗಿಸಿ ಗಟ್ಟಿಯಾಗಿ ಮನೆಯ್ಲಲ ಕಾಲ ಕಳೆಯುವ ಹುಡುಗ. ಮುಂದೆ ಜೀವನದಲ್ಲಿ ಹೇಗೆ ಮುಂದೆ ಬರಬೇಕೆಂಬ ಬಗ್ಗೆ ಯಾವುದೇ ಗುರಿಗಳೇ ಇಲ್ಲದ ಯುವಕ ಈತ. ಆದರೆ ಸಿದ್ ಹೇಳೋದೇ ಬೇರೆ. ಎಲ್ಲರೂ ನನ್ನನ್ನು ಯಾವುದೇ ಗುರಿಗಳೇ ಇಲ್ಲದ ಹುಡುಗ ಎನ್ನು ಟೀಕಿಸುತ್ತಾರೆ. ಆದರೆ ನಾನು ಗುರಿ ರೂಪಿಸಿಲ್ಲ ಅಷ್ಟೆ ಎಂದು ಹೇಳುತ್ತಾನೆ. ಪ್ರತಿಯೊಂದನ್ನೂ ತುಂಬ ಸುಲಭವಾಗಿ ತೆಗೆದುಕೊಳ್ಳುವ ಕೇರ್‌ಲೆಸ್ ಯುವಕ ಸಿದ್. ಗೆಳೆಯರ ಜತೆಗೆ ಮಜಾ ಮಾಡೋದು, ಟಿವಿ ನೋಡೋದು, ಚೆನ್ನಾಗಿ ತಿನ್ನೋದು, ಮಲಗೋದು, ಕನಸು ಕಾಣೋದು ಇಷ್ಟ ಬಿಟ್ಟರೆ ಮತ್ತೊಂದು ಕೆಲಸವಿಲ್ಲ, ಗುರಿಯಿಲ್ಲ ಸಿದ್‌ಗೆ.

webdunia
IFM
ಕೊಂಕಣಾ ಸೇನ್ ಶರ್ಮಾ- ಕೊಂಕಣಾ ಸೇನ್‌ಗೆ ಇಲ್ಲಿ ಆಯಿಶಾ ಬ್ಯಾನರ್ಜಿ ಪಾತ್ರ. ಮುಂಬೈಗೆ ಹೊಸತಾಗಿ ಬರುವ ಕೊಂಕಣಾಗೆ ಮುಂಬೈ ನಗರ ಮೋಡಿ ಮಾಡುತ್ತದೆ. ಮುಂಬೈ ಬೀಟ್ ಎಂಬ ಮ್ಯಾಗಝಿನ್‌ನಲ್ಲಿ ಕೆಲಸ ಮಾಡುವ ಆಸೆಯಿಂದ ಕೋಲ್ಕತ್ತಾದಿಂದ ತನ್ನೆಲ್ಲ ಗೆಳೆಯರನ್ನು, ಮನೆಯನ್ನು ಬಿಟ್ಟು ಮುಂಬೈ ನಗರಿಗೆ ಬಂದಿರುತ್ತಾಳೆ ಕೊಂಕಣಾ. ತುಂಬ ಕ್ರಿಯೇಟಿವ್, ಮಹತ್ವಾಕಾಂಕ್ಷಿ, ಧೈರ್ಯಶಾಲಿ ಹುಡುಗಿ ಈಕೆ.

ಅನುಪಮ್ ಖೇರ್- ಅನುಪಮ್‌ಗೆ ಇದರಲ್ಲಿ ರಾಮ್ ಮೆಹ್ರಾ ಪಾತ್ರ. ಬಾತ್‌ರೂಂ ಫಿಟಿಂಗ್‌ಗಳ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿಯ ಮುಖ್ಯಸ್ಥ. ಸಿದ್‌ನ ತಂದೆ. ಸಿದ್ ಏನಾದರೊಂದು ಸಾಧಿಸಲಿ, ತನ್ನ ಕಂಪನಿಯನ್ನಾದರೂ ಸೇರಿ ಕೆಲಸ ಮಾಡಲಿ ಎಂಬುದು ಅಪ್ಪನ ಆಸೆ.

ಸುಪ್ರಿಯಾ ಪಾಥಕ್- ಇತರಲ್ಲಿ ಸುಪ್ರಿಯಾಗೆ ಸರಿತಾ ಪಾತ್ರ. ಸರಿತಾ ಸಿದ್‌ನ ತಾಯಿ. ಪ್ರತಿದಿನವೂ ಟಿವಿ ದಾರಾವಾಹಿಗಳನ್ನು ನೋಡುತ್ತಾ, ಇಂಗ್ಲೀಷ್ ಕಲಿಯಲು ಕಷ್ಟಪಡುತ್ತಾ ಇರುವ ತಾಯಿ. ಸಿದ್‌ನನ್ನು ತುಂಬ ಪ್ರೀತಿಸುವ ಈಕೆ ಗಂಡನನ್ನು ಎದುರು ಹಾಕಿಕೊಂಡಾದರೂ ಮಗನಿಗೆ ಧಾರಾಳವಾಗಿ ದುಡ್ಡು ಕೊಡುತ್ತಾಳೆ.
webdunia
IFM


ನಮಿತ್ ದಾಸ್- ನಮಿತ್‌ಗೆ ಇದರಲ್ಲಿ ರಿಶಿ ಪಾತ್ರ. ರಿಶಿ ಹಾಗೂ ಸಿದ್ ಕೆಜಿ ಕ್ಲಾಸಿನಿಂದಲೂ ಬೆಸ್ಟ್ ಫ್ರೆಂಡ್ಸ್. ಯಾರಾದರೊಬ್ಬ ಹುಡುಗಿಯನ್ನು ಪ್ರೀತಿಸುವುದು ಆಮೇಲೆ ಆಕೆ ತಿರಸ್ಕರಿಸುವುದು ರಿಶಿ ಜೀವನದಲ್ಲಿ ಕಾಮನ್. ಆದರೂ ಈತ ಒಂದಾದ ಮೇಲೊಂದು ಹುಡುಗಿಯರನ್ನು ಪ್ರೀತಿಸುವುದು ನಿಲ್ಲುವುದಿಲ್ಲ.

ಶಿಖಾ ತಾಲ್ಸಾನಿಯಾ- ಶಿಖಾಗೆ ಇದರಲ್ಲಿ ಲಕ್ಷ್ಮಿ ಪಾತ್ರ. ಲಕ್ಷ್ಮಿ ಸಿದ್‌ನ ಅತ್ಯುತ್ತಮ ಗೆಳತಿ. ತಿನ್ನುವುದು ಎಂದರೆ ಈಕೆಗೆ ಪಂಚಪ್ರಾಣ. ತಿನ್ನದೇ ಸುಮ್ಮನೆ ಇರುವ ಲಕ್ಷ್ಮಿಯ್ನು ಯಾರಿಂದಲೂ ನೋಡಲಾಗದು. ಪ್ರತಿ ಬಾರಿಯೂ ರಾತ್ರಿ ಏನು ತಿನ್ನುವುದು, ಬೆಳಗ್ಗೆ ಏನು ತಿನ್ನಲಿ ಎಂದು ಭಯಂಕರ ಪ್ಲಾನ್ ಮಾಡುವ ತಿನ್ನಲು ತಯಾರಾಗುತ್ತಲೇ ಇರುವ ಈಕೆ ತರಗತಿಯಲ್ಲಿ ಮೊದಲ ಸ್ಥಾನ ಪಡೆಯಲು ಓದಲು ಎಲ್ಲಿಂದ ಸಮಯ ಸಿಗುತ್ತದೆ ಎಂಬುದೇ ಸಿದ್ ತಲೆಬಿಸಿ.

webdunia
IFM
ಕಥೆ- ಈ ಚಿತ್ರ ಸಿದ್ದಾರ್ಥ್ ಮೆಹ್ರಾನ ಕಥೆ. ತುಂಬ ಉಡಾಫೆಯ, ಉದಾಸೀನದ ಪರಮಾವಧಿಯ, ಯಾವುದರಲ್ಲೂ ಆಸಕ್ತಿಯೇ ಇರದ ಮುಂಬೈಯ್ಲಲಿರುವ ಯುವಕ ಈತ. ಯಾವುದೇ ಜವಾಬ್ದಾರಿಗಳನ್ನೂ ಹೊತ್ತುಕೊಳ್ಳಲು ಸಿದ್ಧನಿಲ್ಲದ ಈ ಸಿದ್‌ನ ಸಂಗಾತಿಗಳೆಂದರೆ, ಆತನ ಕಾರು, ಕ್ಯಾಮರಾ, ಫ್ರೆಂಡ್ಸ್. ಅಪ್ಪ-ಅಮ್ಮನ ಬಳಿ ಮಾತುಕತೆ ಕಡಿಮೆಯೇ ಇರುವ ಸಿದ್‌ಗೆ ತನ್ನ ಗೆಳೆಯರಾದ ಲತಕ್ಷ್ಮಿ ಹಾಗೂ ರಿಶಿ ಜತೆ ಸುತ್ತಾಡುವುದೇ ಪರಮ ಉದ್ದೇಶ. ಹೀಗಿದ್ದರೂ ಸಿದ್ ತುಂಬ ಪ್ರಾಮಾಣಿಕ, ತಮಾಷೆಯ ಚೆಂದದ ಯುವಕ. ಹೀಗಿರುವಾಗ ಕೋಲ್ಕತ್ತಾದಿಂದ ತುಂಮಬ ಕನಸುಗಳ ಮೂಟೆಯನ್ನೇ ಹೊತ್ತುಕೊಂಡು ಬರುವ ಆಯಿಷಾ ಬ್ಯಾನರ್ಜಿಗೆ ಮುಂಬೈಯಲ್ಲಿ ಮೊದಲ ಬಾರಿಗೆ ಪರಿಚಯವಾಗುವುದು ಸಿದ್ ಜತೆ.

webdunia
IFM
ಮುಂಬೈಯಲ್ಲಿ ಮನೆ ಹುಡುಕಿಕೊಂಡು ತನ್ನದೇ ಕಾಲ ಮೇಲೆ ತಾನು ನಿಂತು ಬರಹಗಾರ್ತಿಯಾಗಬೇಕೆಂದು ಕನಸು ಕಾಣುವ ಆಯಿಷಾಗೆ ಮನೆ ಹುಡುಕಿಕೊಳ್ಳಲು ಸಹಕಾರ ನೀಡುವುದು ಸಿದ್ ಹಾಗೂ ಆತನ ಗೆಳೆಯರ ಗ್ಯಾಂಗ್. ಹೀಗೇ ಆಯಿಷಾ ಸಿದ್ ಫ್ರೆಂಡ್ ಆಗುತ್ತಾರೆ. ತುಂಬ ಧೈರ್ಯಶಾಲಿಯಾದ ಆಯಿಷಾ ತನ್ನ ಕೆಲಸದ ಜತೆಜತೆಗೆ ಸಿದ್ ಫ್ರೆಂಡ್‌ಶಿಪ್ ಮುಂದುವರಿಸುತ್ತಾನೆ. ಆದರೆ ಇತ್ತ ಸಿದ್ ಮಾತ್ರ ತನಗಿರುವ ಅಪಾರ ಆಸ್ತಿಯ ನೆಪದಲ್ಲಿ ಯಾವ ಜವಾಬ್ದಾರಿಯೂ ಇಲ್ಲದೆ ಉಂಡಾಡಿ ಗುಂಡನ ಹಾಗೆ ಸಮಯ ವೇಸ್ಟ್ ಮಾಡುತ್ತಿರುವುತ್ತಾನೆ. ಯಾರಿಂದಲೂ ಬದಲಾಯಿಸಲಾಗದ ಇಂತಿಪ್ಪ ಸಿದ್ ಕೊನೆಗೂ ಬದಲಾಗುತ್ತಾನಾ? ಜೀವನದಲ್ಲಿ ಜವಾಬ್ದಾರಿ ಹೊತ್ತುಕೊಳ್ಳುತ್ತಾನಾ? ಹೇಗೆ ಎಂಬುದೇ ವೇಕ್ ಅಪ್ ಸಿದ್ ಚಿತ್ರದ ಸಾರಾಂಶ.

ಕರಣ್ ಜೋಹರ್ ಹಾಗೂ ಹೀರೂ ಜೋಹರ್ ಈ ಚಿತ್ರದ ನಿರ್ಮಾಪಕರು. ಅಯನ್ ಮುಖರ್ಜಿ ನಿರ್ದೇಶನದ ವೇಕ್ ಅಪ್ ಸಿದ್ ಅಕ್ಟೋಬರ್ 2ರಂದು ತೆರೆಕಾಣಲಿದೆ.

Share this Story:

Follow Webdunia kannada