Select Your Language

Notifications

webdunia
webdunia
webdunia
webdunia

ಕರೀನಾ- ಸೈಫ್ ಬಿಸಿಯಪ್ಪುಗೆಯಲ್ಲಿ ಮೀಯಲಿರುವ 'ಕುರ್ಬಾನ್'

ಕರೀನಾ- ಸೈಫ್ ಬಿಸಿಯಪ್ಪುಗೆಯಲ್ಲಿ ಮೀಯಲಿರುವ 'ಕುರ್ಬಾನ್'
, ಶುಕ್ರವಾರ, 30 ಅಕ್ಟೋಬರ್ 2009 (17:26 IST)
IFM
ಚಿತ್ರ- ಕುರ್ಬಾನ್.
ನಿರ್ದೇಶನ- ರೆನ್ಸಿಲ್ ಡಿಸಿಲ್ವಾ.
ತಾರಾಗಣ- ಕರೀನಾ ಕಪೂರ್, ಸೈಫ್ ಅಲಿ ಖಾನ್, ದಿಯಾ ಮಿರ್ಜಾ, ವಿವೇಕ್ ಒಬೆರಾಯ್.

ಹೇಳಿ ಕೇಳಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಜೋಡಿ ತೆರೆಯ ಮೇಲೆ ಸುದ್ದಿಯಾದುದಕ್ಕಿಂತ ಹೆಚ್ಚು ತೆರೆಯ ಹಿಂದೆ ತಮ್ಮ ರೊಮ್ಯಾಂಟಿಕ್ ಸಂಬಂಧದಿಂದಾಗಿ ಸುದ್ದಿಯಾದುದೇ ಹೆಚ್ಚು. ಶಾಹಿದ್ ಕಪೂರ್ ಎಂಬ ಸುಂದರಾಂಗನಿಗೆ ಕೈಕೊಟ್ಟು ಸೈಫ್ ಎಂಬ ಬಹು ವಿಚ್ಚೇದಿತನ ಜೊತೆಗೆ ಕರೀನಾ ರಾಜಾರೋಷವಾಗಿ ಸುತ್ತುತ್ತಿರುವುದು ಗೊತ್ತೇ ಇದೆ. ಈಗ ನಿರ್ದೇಶಕ ರೆನ್ಸಿಲ್ ಡಿಸಿಲ್ವಾ ಆ ಇಬ್ಬರು ಜೋಡಿಯನ್ನು ತೆರೆಯ ಮೇಲೆ ರೊಮ್ಯಾಂಟಿಕ್ ಆಗಿ ಬಳಸಿ ಸುದ್ದಿ ಮಾಡಿದ್ದಾರೆ. ಆ ಚಿತ್ರವೇ ಕುರ್ಬಾನ್.

ಸೈಫ್- ಕರೀನಾ ತುಟಿಗೆ ತುಟಿಯಿಟ್ಟು ದೀರ್ಘಕಾಲ ಮುತ್ತಿಕ್ಕುವುದು ಈ ಚಿತ್ರದಲ್ಲಿದ್ದು ಈಗಾಗಲೇ ಸಾಕಷ್ಟು ಜನರ ನಿದ್ದೆಗೆಡಿಸಿದೆ. ಸೈಫ್- ಕರೀನಾ ಇಬ್ಬರೂ ಹಾಸಿಗೆಯಲ್ಲಿ ಹಸಿಬಿಸಿಯಾಗಿದ್ದು ಕೂಡಾ ದೀರ್ಘವಾಗಿ ಚಿತ್ರೀಕರಿಸಲಾಗಿದೆ ಎಂಬ ಸುದ್ದಿಯೂ ಇದೆ. ಈ ಇಬ್ಬರು ರೊಮ್ಯಾಂಟಿಕ್ ಜೋಡಿಗಳು ತುಂಬ ತನ್ಮಯರಾಗಿ ಕ್ಯಾಮರಾ ಎದುರು ಒಬ್ಬರಿಗೊಬ್ಬರು ಮೈಯೊಡ್ಡಿಕೊಂಡರಂತೆ. ಎಲ್ಲೂ ಎಡವಲಿಲ್ಲ, ನಿರ್ದೇಶಕನೂ 'ಕಟ್' ಎನ್ನುವ ಗೋಜಿಗೆ ಹೋಗಲಿಲ್ಲ ಎಂಬೆಲ್ಲ ರೋಚಕ, ರಸವತ್ತಾದ ಕಥೆಗಳು ಈಗ ಜನಜನಿತ. ಈಗಾಗಲೇ ಈ ಚಿತ್ರದ ನಗ್ನ ಬೆನ್ನಿನಲ್ಲಿ ಸೈಫ್‌ಗೆ ಮುಖ ಮಾಡಿ ನಿಂತಿರುವ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.
webdunia
IFM


ಅದೇನೇ ಇರಲಿ, ಈ ಚಿತ್ರ ಥ್ರಿಲ್ಲರ್ ಕಥಾನಕ. ಅವಂತಿಕಾ (ಕರೀನಾ ಕಪೂರ್) ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕಿ. ಆಕೆ ನ್ಯೂಯಾರ್ಕ್‌ನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರೂ, ಆಕೆಯ ತಂದೆಗೆ ಹೃದಯಾಘಾತವಾಗಿದ್ದರಿಂದಾಗಿ, ತಂದೆಯೊಂದಿಗಿರಲು ಭಾರತಕ್ಕೆ ಮರಳಿ ಬಂದಿದ್ದಳು. ಈ ಸಂದರ್ಭ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಆಕೆಗೆ ಇಶಾನ್ ಖಾನ್ (ಸೈಫ್ ಅಲಿ ಖಾನ್) ಎಂಬ ತಾತ್ಕಾಲಿಕ ಪ್ರೊಫೆಸರ್ ಒಬ್ಬರ ಪರಿಚಯವಾಗುತ್ತದೆ. ಇಬ್ಬರಿಗೂ ಪರಿಚಯ ಪ್ರೀತಿಯಾಗಿ ಮೊಳಕೆಯೊಡೆಯುತ್ತದೆ. ಸ್ವಲ್ಪ ತಿಂಗಳು ಕಳೆದ ಮೇಲೆ ಅವಂತಿಕಾಗೆ ನ್ಯೂಯಾರ್ಕಿನ ತ್ನ ಹಳೆಯ ವಿಶ್ವವಿದ್ಯಾನಿಲಯದಿಂದ ಮರಳಿ ಬರಲು ಕರೆ ಬರುತ್ತದೆ. ಅವಂತಿಕಾ ಇಶಾನ್ ಬಳಿ ಈ ವಿಷಯ ಅರುಹುತ್ತಾಳೆ. ಆತ ಆಕೆಯೊಂದಿಗೆ ನ್ಯೂಯಾರ್ಕಿಗೆ ಬರಲು ತನ್ನದೇನೂ ಅಭ್ಯಂತರವಿಲ್ಲ ಎನ್ನುತ್ತಾನೆ. ಆದರೆ, ಅದಕ್ಕೂ ಮೊದಲು ಅವರು ಮದುವೆಯಾಗಬೇಕಾಗಿರುತ್ತದೆ.

webdunia
IFM
ಮದುವೆಯಾದ ತಕ್ಷಣ ನ್ಯೂಯಾರ್ಕಿನಲ್ಲಿ ಇಬ್ಬರೂ ಸುಖ ಸಂಸಾರ ಆರಂಭಿಸುತ್ತಾರೆ. ಭಾರತೀಯರೇ ಇರುವಂತಹ ಪ್ರದೇಶದಲ್ಲಿ ಅವರೊಂದು ಮನೆ ಕೊಳ್ಳುತ್ತಾರೆ. ಹಾಗೆ ಒಂದು ದಿನ ಅವರಿಬ್ಬರನ್ನೂ ಪಕ್ಕದ ಮನೆಯ ಪಕ್ಕಾ ಮುಸ್ಲಿಂ ಧರ್ಮದಲ್ಲಿ ನಂಬಿಕೆಯಿಟ್ಟುವ ಭಾರತೀಯ ಮೂಲದ ದಂಪತಿಗಳಿಬ್ಬರು ರಾತ್ರಿಯೂಟಕ್ಕೆ ತಮ್ಮ ಮನೆಗೆ ಕರೆಯುತ್ತಾರೆ. ಮಾರನೇ ದಿನ ಅವಂತಿಕಾಗೆ ಸ್ವೀಟ್ ಕೊಡಲೆಂದು ಸಲ್ಮಾ ಬರುತ್ತಾಳೆ. ಸಲ್ಮಾ ಅವಂತಿಕಾಗೆ ರಾತ್ರಿಯೂಟಕ್ಕೆ ಹೋಗುವ ಮೊದಲು ಪರಿಚಯವಾಗಿರುತ್ತದೆ. ಸಲ್ಮಾ ಸ್ವೀಟ್ ಕೊಡಲೆಂದು ಮನೆಗೆ ಬಂದ ತಕ್ಷಣ ತನಗೆ ಮುಂದೊಂದು ದಿನ ದುರಂತ ಕಾದಿದೆ. ದಯವಿಟ್ಟು ನನಗೆ ಸಹಾಯ ಮಾಡು ಎಂದು ಅವಂತಿಕಾ ಬಳಿ ಗೋಗರೆಯುತ್ತಾಳೆ. ಅವಂತಿಕಾ ಸಲ್ಮಾಗೆ ಸಹಾಯ ಮಾಡಲೆಂದು ಹೋದರೆ, ತನ್ನನ್ನು ಒಂದು ಗೇಮ್‌ನಲ್ಲಿ ಸಿಕ್ಕಿಹಾಕಿಸಲಾಗಿದೆ ಎಂದು ಅವಂತಿಕಾಗೆ ತಿಳಿಯುತ್ತದೆ. ಭಾರೀ ದುರಂತದಲ್ಲಿ ಸಿಕ್ಕಿಹಾಕುವ ಅವಂತಿಕಾ ಹೇಗೆ ಪಾರಾಗುತ್ತಾಳೆ ಎಂಬುದೇ ಕಥೆಯ ತಿರುಳು.

ನವೆಂಬರ್ 20ರಂದು ಬಿಡುಗಡೆಯಾಗಲಿರುವ ಈ ಚಿತ್ರದ ನಿರ್ದೇಶಕರು ರೆನ್ಸಿಲ್ ಡಿಸಿಲ್ವಾ. ಥ್ರಿಲ್ಲರ್ ಕಥಾನಕವನ್ನು ಹೊಂದಿರುವ ಕುರ್ಬಾನ್ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಥ್ರಿಲ್ಲರ್ ಜೊತೆಗೆ ರೊಮ್ಯಾನ್ಸ್ ಮಸಾಲೆಯ್ನೂ ಹದವಾಗಿ ಬೆರೆಸಿ ಪಾಕ ಮಾಡಿ ಉಣಬಡಿಸುತ್ತಿದ್ದಾರೆ ರೆನ್ಸಿಲ್. ಕರೀನಾ- ಸೈಫ್ ಜೋಡಿ ತೆರೆಯಲ್ಲಿ ಏನು ಮೋಡಿ ಮಾಡಲಿದೆಯೋ ಕಾಯಬೇಕು.

Share this Story:

Follow Webdunia kannada