Webdunia - Bharat's app for daily news and videos

Install App

ಇದು ಇಶಾ ಕೊಪ್ಪಿಕರ್ ಜೀವನದ ಅಂತಿಮ ಹಸಿಬಿಸಿ ದೃಶ್ಯವಂತೆ!

Webdunia
IFM
ಕನ್ನಡದ ಓ ನನ್ನ ನಲ್ಲೆ, ಹೂಂ ಅಂತೀಯಾ ಊಹೂಂ ಅಂತೀಯಾ, ಸೂರ್ಯವಂಶಿ ಮತ್ತಿತರ ಚಿತ್ರಗಳಲ್ಲಿ ನಟಿಸಿದ ಹಾಟ್ ಬೆಡಗಿ ಇಷಾ ಕೊಪ್ಪಿಕರ್ ಇನ್ನು ಮುಂದೆ ಸಿನಿಮಾದಲ್ಲಿ ಹಾಟ್ ದೃಶ್ಯಾವಳಿಗಳಲ್ಲಿ ನಟಿಸೋದಿಲ್ಲವಂತೆ. ಈವರೆಗೆ ನಟನೆಗೂ ಸೈ ಬಿಚ್ಚುವುದಕ್ಕೂ ಜೈ ಎನ್ನುತ್ತಿದ್ದ ಇಶಾ ಕೊಪ್ಪಿಕರ್ ಇದೀಗ ತಾನು ಮದುವೆಯಾಗಿರುವ ಸಂಪ್ರದಾಯಸ್ಥ ಹೆಣ್ಣು. ಹಾಗಾಗಿ ಇನ್ನು ಮುಂದೆ ಹಾಟ್ ದೃಶ್ಯಕ್ಕೆ ನೋ ಚಾನ್ಸ್ ಎಂದಿದ್ದಾಳೆ.

2009 ರಲ್ಲಿ ತನ್ನ ಪ್ರಿಯಕರ ಟಿಮ್ಮಿ ನಾರಂಗ್ ಅವರನ್ನು ಮದುವೆಯಾದ ಇಶಾ ಮದುವೆಯ ನಂತರವೂ ನಟನೆಗೆ ಗುಡ್ ಬೈ ಹೇಳಿಲ್ಲ. ಹಾಟ್ ದೃಶ್ಯಾವಳಿಗೆ ಮಾತ್ರ ಅವಕಾಶವಿಲ್ಲ ಎಂದಿದ್ದಾಳೆ. ಆದರೂ ಪಾಲಿಗೆ ಬಂದದ್ದೇ ಪಂಚಾಮೃತ ಎಂಬತೆ ಹಾಗೆ ಹೇಳುವ ಮೊದಲು ಈವರೆಗೆ ಯಾರೂ ನಟಿಸದೆ ಇರುವಂಥ ಮೈನವಿರೇಳಿಸುವ ಹಾಟ್ ದೃಶ್ಯದಲ್ಲಿ ನಟಿಸಿದ್ದಾಳೆ. ಸನ್ನಿ ಡಿಯಾಲ್ ತಾರಾಗಣದ ರೈಟ್ ಯಾ ರಾಂಗ್ ಚಿತ್ರದಲ್ಲಿ ಮದುವೆಯ ನಂತರವೂ ಮೈ ಚಳಿ ಬಿಟ್ಟು ಹಸಿಬಿಸಿಯಾಗಿದ್ದಾಳೆ ಎಂಬ ಸುದ್ದಿಯಿದೆ.

ಇನ್ನು ಮುಂದೆ ಬಿಸಿ ಬಿಸಿ ದೃಶ್ಯಕ್ಕೆ ಗುಡ್ ಬೈ ಹೇಳಲಿದ್ದೇನೆ ಎಂದು ಹೇಳಿದರೂ ಹೇಳುವ ಮುನ್ನ ಭರ್ಜರಿ ಬಿಸಿ ಬಿಸಿ ದೃಶ್ಯದ್ಲಲಿ ನಟಿಸಿದ್ದಾಳೆ, ಮುಂದೆ ನಟಿಸದಿದ್ದರೂ ಈಗ ನಟಿಸಿದ ಸೂಪರ್ ಹಾಟ್ ದೃಶ್ಯಾವಳಿಯೇ ಬಹುಕಾಲ ಬಾಳಲಿದೆ ಎಂದು ಬಾಲಿವುಡ್ಡಿನ ಕೆಲವರು ಗುಸುಗುಸು ಪಿಸುಪಿಸು ಮಾತಾಡುತ್ತಿದ್ದಾರಂತೆ.
IFM


ಅದೇನೇ ಇರಲಿ, ರೈಟ್ ಯಾ ರಾಂಗ್ ಚಿತ್ರದಲ್ಲಿ ಸನ್ನಿ ಡಿಯಾಲ್ ಪತ್ನಿಯಾಗಿ ಇಶಾ ಕೊಪ್ಪಿಕರ್ ನಟಿಸಿದ್ದಾರಂತೆ. ಚಿತ್ರದಲ್ಲಿ ಸುದೀರ್ಘ ಅವಧಿಯ ಹಸಿಬಿಸಿ ದೃಶ್ಯಗಳಿವೆಯಂತೆ. ಈ ಚಿತ್ರ ಸಂಪೂರ್ಣ ಪತ್ತೇದಾರಿ ಕಾದಂಬರಿಯಂತಿದ್ದು, ಥ್ರಿಲ್ಲರ್ ಕಥಾನಕವಂತೆ. ಚಿತ್ರದಲ್ಲಿ ಸನ್ನಿ ಡಿಯಾಲ್, ಇಶಾ ಕೊಪ್ಪಿಕರ್, ಕೊಂಕಣಾ ಸೇನ್ ಶರ್ಮಾ ತಾರಾಗಣವಿದ್ದು, ಇದೇ ಮಾರ್ಚ್ 12ಕ್ಕೆ ಇದು ಬಿಡುಗಡೆ ಕಾಣಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಶಾ ಕೊಪ್ಪಿಕರ್, 'ನಾನು ಈಗ ಮದುವೆಯಾದ ಹೆಣ್ಣು. ಮನೆಯಲ್ಲಿ ಎಲ್ಲರಿಂದಲೂ ನನಗೆ ಉತ್ತಮ ಸಪೋರ್ಟ್ ಇದೆ. ಚಿತ್ರರಂಗದಲ್ಲಿ ಮುಂದುವರಿಯುತ್ತೇನಾದರೂ, ಹಾಟ್ ದೃಶ್ಯಗಳಲ್ಲಿ ಭಾಗವಹಿಸುವುದಿಲ್ಲ. ಈ ಚಿತ್ರದ ನಂತರ ಇಂಥ ದೃಶ್ಯಗಳಿಗೆ ಗುಡ್ ಬೈ ಹೇಳುತ್ತಿದ್ದೇನೆ. ನನ್ನ ವೃತ್ತಿ ಜೀವನಕ್ಕೆ ನನ್ನ ಗಂಡನ ಸಂಪೂರ್ಣ ಸಹಕಾರವಿದ ೆ' ಎಂದಿದ್ದಾರೆ,

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments