Select Your Language

Notifications

webdunia
webdunia
webdunia
webdunia

ಇದು ಇಶಾ ಕೊಪ್ಪಿಕರ್ ಜೀವನದ ಅಂತಿಮ ಹಸಿಬಿಸಿ ದೃಶ್ಯವಂತೆ!

ಇದು ಇಶಾ ಕೊಪ್ಪಿಕರ್ ಜೀವನದ ಅಂತಿಮ ಹಸಿಬಿಸಿ ದೃಶ್ಯವಂತೆ!
IFM
ಕನ್ನಡದ ಓ ನನ್ನ ನಲ್ಲೆ, ಹೂಂ ಅಂತೀಯಾ ಊಹೂಂ ಅಂತೀಯಾ, ಸೂರ್ಯವಂಶಿ ಮತ್ತಿತರ ಚಿತ್ರಗಳಲ್ಲಿ ನಟಿಸಿದ ಹಾಟ್ ಬೆಡಗಿ ಇಷಾ ಕೊಪ್ಪಿಕರ್ ಇನ್ನು ಮುಂದೆ ಸಿನಿಮಾದಲ್ಲಿ ಹಾಟ್ ದೃಶ್ಯಾವಳಿಗಳಲ್ಲಿ ನಟಿಸೋದಿಲ್ಲವಂತೆ. ಈವರೆಗೆ ನಟನೆಗೂ ಸೈ ಬಿಚ್ಚುವುದಕ್ಕೂ ಜೈ ಎನ್ನುತ್ತಿದ್ದ ಇಶಾ ಕೊಪ್ಪಿಕರ್ ಇದೀಗ ತಾನು ಮದುವೆಯಾಗಿರುವ ಸಂಪ್ರದಾಯಸ್ಥ ಹೆಣ್ಣು. ಹಾಗಾಗಿ ಇನ್ನು ಮುಂದೆ ಹಾಟ್ ದೃಶ್ಯಕ್ಕೆ ನೋ ಚಾನ್ಸ್ ಎಂದಿದ್ದಾಳೆ.

2009ರಲ್ಲಿ ತನ್ನ ಪ್ರಿಯಕರ ಟಿಮ್ಮಿ ನಾರಂಗ್ ಅವರನ್ನು ಮದುವೆಯಾದ ಇಶಾ ಮದುವೆಯ ನಂತರವೂ ನಟನೆಗೆ ಗುಡ್ ಬೈ ಹೇಳಿಲ್ಲ. ಹಾಟ್ ದೃಶ್ಯಾವಳಿಗೆ ಮಾತ್ರ ಅವಕಾಶವಿಲ್ಲ ಎಂದಿದ್ದಾಳೆ. ಆದರೂ ಪಾಲಿಗೆ ಬಂದದ್ದೇ ಪಂಚಾಮೃತ ಎಂಬತೆ ಹಾಗೆ ಹೇಳುವ ಮೊದಲು ಈವರೆಗೆ ಯಾರೂ ನಟಿಸದೆ ಇರುವಂಥ ಮೈನವಿರೇಳಿಸುವ ಹಾಟ್ ದೃಶ್ಯದಲ್ಲಿ ನಟಿಸಿದ್ದಾಳೆ. ಸನ್ನಿ ಡಿಯಾಲ್ ತಾರಾಗಣದ ರೈಟ್ ಯಾ ರಾಂಗ್ ಚಿತ್ರದಲ್ಲಿ ಮದುವೆಯ ನಂತರವೂ ಮೈ ಚಳಿ ಬಿಟ್ಟು ಹಸಿಬಿಸಿಯಾಗಿದ್ದಾಳೆ ಎಂಬ ಸುದ್ದಿಯಿದೆ.

ಇನ್ನು ಮುಂದೆ ಬಿಸಿ ಬಿಸಿ ದೃಶ್ಯಕ್ಕೆ ಗುಡ್ ಬೈ ಹೇಳಲಿದ್ದೇನೆ ಎಂದು ಹೇಳಿದರೂ ಹೇಳುವ ಮುನ್ನ ಭರ್ಜರಿ ಬಿಸಿ ಬಿಸಿ ದೃಶ್ಯದ್ಲಲಿ ನಟಿಸಿದ್ದಾಳೆ, ಮುಂದೆ ನಟಿಸದಿದ್ದರೂ ಈಗ ನಟಿಸಿದ ಸೂಪರ್ ಹಾಟ್ ದೃಶ್ಯಾವಳಿಯೇ ಬಹುಕಾಲ ಬಾಳಲಿದೆ ಎಂದು ಬಾಲಿವುಡ್ಡಿನ ಕೆಲವರು ಗುಸುಗುಸು ಪಿಸುಪಿಸು ಮಾತಾಡುತ್ತಿದ್ದಾರಂತೆ.
webdunia
IFM


ಅದೇನೇ ಇರಲಿ, ರೈಟ್ ಯಾ ರಾಂಗ್ ಚಿತ್ರದಲ್ಲಿ ಸನ್ನಿ ಡಿಯಾಲ್ ಪತ್ನಿಯಾಗಿ ಇಶಾ ಕೊಪ್ಪಿಕರ್ ನಟಿಸಿದ್ದಾರಂತೆ. ಚಿತ್ರದಲ್ಲಿ ಸುದೀರ್ಘ ಅವಧಿಯ ಹಸಿಬಿಸಿ ದೃಶ್ಯಗಳಿವೆಯಂತೆ. ಈ ಚಿತ್ರ ಸಂಪೂರ್ಣ ಪತ್ತೇದಾರಿ ಕಾದಂಬರಿಯಂತಿದ್ದು, ಥ್ರಿಲ್ಲರ್ ಕಥಾನಕವಂತೆ. ಚಿತ್ರದಲ್ಲಿ ಸನ್ನಿ ಡಿಯಾಲ್, ಇಶಾ ಕೊಪ್ಪಿಕರ್, ಕೊಂಕಣಾ ಸೇನ್ ಶರ್ಮಾ ತಾರಾಗಣವಿದ್ದು, ಇದೇ ಮಾರ್ಚ್ 12ಕ್ಕೆ ಇದು ಬಿಡುಗಡೆ ಕಾಣಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಶಾ ಕೊಪ್ಪಿಕರ್, 'ನಾನು ಈಗ ಮದುವೆಯಾದ ಹೆಣ್ಣು. ಮನೆಯಲ್ಲಿ ಎಲ್ಲರಿಂದಲೂ ನನಗೆ ಉತ್ತಮ ಸಪೋರ್ಟ್ ಇದೆ. ಚಿತ್ರರಂಗದಲ್ಲಿ ಮುಂದುವರಿಯುತ್ತೇನಾದರೂ, ಹಾಟ್ ದೃಶ್ಯಗಳಲ್ಲಿ ಭಾಗವಹಿಸುವುದಿಲ್ಲ. ಈ ಚಿತ್ರದ ನಂತರ ಇಂಥ ದೃಶ್ಯಗಳಿಗೆ ಗುಡ್ ಬೈ ಹೇಳುತ್ತಿದ್ದೇನೆ. ನನ್ನ ವೃತ್ತಿ ಜೀವನಕ್ಕೆ ನನ್ನ ಗಂಡನ ಸಂಪೂರ್ಣ ಸಹಕಾರವಿದೆ' ಎಂದಿದ್ದಾರೆ,

Share this Story:

Follow Webdunia kannada