Select Your Language

Notifications

webdunia
webdunia
webdunia
webdunia

ಬರುತ್ತಲಿದೆ ಮೋದಿ ರಥ: ದೆಹಲಿಯಲ್ಲಿ ಬಿಜೆಪಿ ಪ್ರಚಾರಕ್ಕೆ 5000 ಆಟೋಗಳ ಬಳಕೆ

ಬರುತ್ತಲಿದೆ ಮೋದಿ ರಥ: ದೆಹಲಿಯಲ್ಲಿ ಬಿಜೆಪಿ ಪ್ರಚಾರಕ್ಕೆ 5000 ಆಟೋಗಳ ಬಳಕೆ
, ಶುಕ್ರವಾರ, 14 ಮಾರ್ಚ್ 2014 (17:36 IST)
PR
ನಗರದಲ್ಲಿ 'ಮೋದಿ ರಥ' ದ ಮಜಾ ತೆಗೆದುಕೊಳ್ಳಲು ದೆಹಲಿಯ ಜನತೆ ತಯಾರಾಗುತ್ತಿದ್ದಾರೆ. ತನ್ನ ಪ್ರಧಾನಿ ಪದವಿ ಅಭ್ಯರ್ಥಿ ನರೇಂದ್ರ ಮೋದಿಗೆ ಬೆಂಬಲ ಗಳಿಸಿಕೊಳ್ಳಲು ಈ ವಾರಾಂತ್ಯದಲ್ಲಿ ಬಿಜೆಪಿ ಆಟೋರಿಕ್ಷಾ ಪ್ರಚಾರವನ್ನು ಆರಂಭಿಸುತ್ತಿದೆ. ಇದಕ್ಕಾಗಿ ಅವರು 5,000 ಆಟೋರಿಕ್ಷಾ ಚಾಲಕರನ್ನು ಒಪ್ಪಿಸಿದ್ದಾರೆ.

ಪ್ರತಿ ಆಟೋದ ಮೇಲೆ ಮೋದಿಯ ಭಾವಚಿತ್ರ, ಪಕ್ಷದ ಚಿಹ್ನೆ ಮತ್ತು ಮತ ಮನವಿಯ ಜೊತೆಗೆ ಲೋಕಸಭಾ ಅಭ್ಯರ್ಥಿಗಳ ಪೋಸ್ಟರ್ ಹಚ್ಚಿ ಅಲಂಕರಿಸಲಾಗುತ್ತದೆ. "ಈ ಮೋದಿ ರಥಗಳು ನಮ್ಮ ಪಕ್ಷದ ಬಗ್ಗೆ ಪ್ರಚಾರ ಮಾಡುತ್ತ ನಗರದ ಸುತ್ತಲೂ ಸಂಚರಿಸಲಿವೆ. ಅಭ್ಯರ್ಥಿಗಳನ್ನು ಪ್ರಕಟಿಸಿದ ಕೂಡಲೇ ನಾವು ಪ್ರಚಾರ ಪ್ರಾರಂಭಿಸುತ್ತದೆ.ಇದಕ್ಕಾಗಿ ನಾವು ಚುನಾವಣಾ ಆಯೋಗದ ಅನುಮತಿಗೆ ಪ್ರಯತ್ನಿಸುತ್ತಿದ್ದೇವೆ. ನಮ್ಮ ವಾಹನಗಳಿಗೆ ಅಭ್ಯರ್ಥಿಯ ಫೋಟೋ ಕಡ್ಡಾಯ ಎಂದು ಹೇಳಲಾಗಿದೆ" ಎಂದು ಬಿಜೆಪಿ ಸಾರಿಗೆ ಸೆಲ್ ಮುಖ್ಯಸ್ಥ ಆನಂದ್ ತ್ರಿವೇದಿ ಹೇಳಿದ್ದಾರೆ.

ಈ ಆಟೋ ಚಾಲಕರಿಗೆ ಗ್ರಾಹಕರಿಂದ ದುಬಾರಿ ದರವನ್ನು ತೆಗೆದುಕೊಳ್ಳಬೇಡಿ ಎಂದು ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ. " ಇದು ಪ್ರಮುಖ ಪ್ರಚಾರ ತಂತ್ರಗಳಲ್ಲಿ ಒಂದಾಗಿದ್ದು, ಏಳು ಲೋಕಸಭಾ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಲಿದೆ " ಎಂದು ದೆಹಲಿ ಬಿಜೆಪಿಯ ಮಾಧ್ಯಮ ಸಂಚಾಲಕ ಹರೀಶ್ ಖುರಾನಾ ಅಭಿಪ್ರಾಯ ಪಟ್ಟಿದ್ದಾರೆ.

Share this Story:

Follow Webdunia kannada