Select Your Language

Notifications

webdunia
webdunia
webdunia
webdunia

ತೃತೀಯ ರಂಗ ಕಾಂಗ್ರೆಸ್ ಬಚಾವೋ ಯೋಜನೆ: ಮೋದಿ ಟೀಕೆ

ತೃತೀಯ ರಂಗ ಕಾಂಗ್ರೆಸ್ ಬಚಾವೋ ಯೋಜನೆ: ಮೋದಿ ಟೀಕೆ
, ಶುಕ್ರವಾರ, 14 ಮಾರ್ಚ್ 2014 (15:30 IST)
PR
ಮೂರನೇ ರಂಗವನ್ನು ಸೇರಿಸುವ ಪ್ರಯತ್ನ ಕಾಂಗ್ರೆಸ್ ಪಕ್ಷವನ್ನು ಬಚಾವ್ ಮಾಡುವ ಪ್ರಯತ್ನ ಎಂದು ನರೇಂದ್ರ ಮೋದಿ ಟೀಕಿಸಿದ್ದಾರೆ. ಕಾಂಗ್ರೆಸ್ ಚುನಾವಣೆಯಲ್ಲಿ ಧೂಳೀಪಟವಾಗುವ ಸಾಧ್ಯತೆಯಿದ್ದು, ಕಾಂಗ್ರೆಸ್‌ಅನ್ನು ಉಳಿಸುವ ಪ್ರಯತ್ನ ಎಂದು ಮೋದಿ ವಿಶ್ಲೇಷಣೆ ಮಾಡಿದರು.ಭುವನೇಶ್ವರದಲ್ಲಿ ಚುನಾವಣೆ ರ‌್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು, ಈ ಪ್ರಯತ್ನದಲ್ಲಿ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಿದರು. ಅನೇಕ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ಸೇತರ, ಬಿಜೆಪಿಯೇತರ ಶಕ್ತಿಗಳನ್ನು ಒಗ್ಗೂಡಿಸಿ ರಾಜಕೀಯ ಪರ್ಯಾಯವಾದ ತೃತೀಯ ರಂಗವನ್ನು ತರುವ ಉದ್ದೇಶ ಹೊಂದಿವೆ ಎಂದು ಮೋದಿ ಹೇಳಿದರು.

11 ಪಕ್ಷಗಳ ಪೈಕಿ 9 ಪಕ್ಷಗಳು ಕಾಂಗ್ರೆಸ್‌ಗೆ ಬೆನ್ನೆಲುಬಾಗಿದ್ದು, ಚುನಾವಣೆ ಹತ್ತಿರಬರುತ್ತಿದ್ದಂತೆ ಮೂರನೇ ರಂಗದ ಮುಖವಾಡ ಧರಿಸಿವೆ. ತೃತೀಯ ರಂಗ ಸದಾ ಕಾಂಗ್ರೆಸ್ ಬಚಾವೋ ಯೋಜನೆ ಹೊಂದಿವೆ ಎಂದು ಮೋದಿ ಟೀಕಿಸಿದರು.ಮುಲಾಯಂ ಸಿಂಗ್ ಮುಂತಾದ ಸಮಾಜವಾದಿ ಪಕ್ಷದ ಮುಖಂಡರು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿದ್ದು, ತೃತೀಯ ರಂಗ ಸರ್ಕಾರದ ಭಾಗವಾಗಿದ್ದಾರೆ.

ಈ ಗುಂಪಿನಲ್ಲಿ ಮೋದಿಯ ಕಡುವೈರಿ ನಿತೀಶ್ ಕುಮಾರ್ ಕೂಡ ಭಾಗಿಯಾಗಿದ್ದಾರೆ. ಬಿಜೆಪಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಮಾಡುವುದು ಖಚಿತಪಟ್ಟ ಕೂಡಲೇ ನಿತೀಶ್ ಕುಮಾರ್ ಬಿಜೆಪಿ ಜತೆ ಮೈತ್ರಿಯನ್ನು ಕಡಿದುಕೊಂಡರು.ಪಾಟ್ನಾಯಕ್ ಕೂಡ ಒಡಿಶಾದಲ್ಲಿ ಬಿಜೆಪಿಯನ್ನು ಕೈಬಿಟ್ಟಿದ್ದರು. ರಾಜ್ಯದಲ್ಲಿ ಒಡಿಶಾದ ಕಳಪೆ ಅಭಿವೃದ್ಧಿಯ ಬಗ್ಗೆ ಮೋದಿ ಟೀಕಿಸಿದರು. ನಾನು ಗುಜರಾತನ್ನು ಎಷ್ಟು ಚೆನ್ನಾಗಿ ಅಭಿವೃದ್ಧಿ ಮಾಡಿದ್ದೇನೆಂದರೆ ಒಡಿಶಾದ ಜನರು ಕೆಲಸ ಹುಡುಕಿಕೊಂಡು ಗುಜರಾತಿಗೆ ಬರ್ತಿದ್ದಾರೆ ಎಂದು ಮೋದಿ ಹೇಳಿದರು.

Share this Story:

Follow Webdunia kannada