Select Your Language

Notifications

webdunia
webdunia
webdunia
webdunia

ಮೋದಿ ಪರ ಪ್ರಚಾರ ಮಾಡಿದ ಮಾಧ್ಯಮದ ಮುಖ್ಯಸ್ಥರನ್ನು ಜೈಲಿಗೆ ಕಳಿಸ್ತೇನೆ: ಕೇಜ್ರಿವಾಲ್ ಗುಡುಗು

ಮೋದಿ ಪರ ಪ್ರಚಾರ ಮಾಡಿದ ಮಾಧ್ಯಮದ ಮುಖ್ಯಸ್ಥರನ್ನು ಜೈಲಿಗೆ ಕಳಿಸ್ತೇನೆ: ಕೇಜ್ರಿವಾಲ್ ಗುಡುಗು
, ಶುಕ್ರವಾರ, 14 ಮಾರ್ಚ್ 2014 (17:45 IST)
PR
ಮೋದಿಯನ್ನು ಉತ್ತುಂಗಕ್ಕೆ ಏರಿಸಿದ್ದೇ ಮೀಡಿಯಾ. ಇದಕ್ಕಾಗಿ ಮೀಡಿಯಾ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದು, ಮೋದಿ ಮೀಡಿಯಾವನ್ನು ಖರೀದಿಸಿದ್ದಾರೆ ಎಂದು ಆಮ್ ಆದ್ಮಿಯ ಕೇಜ್ರಿವಾಲ್ ಗುಡುಗಿದ್ದಾರೆ. ನಾಗ್ಪುರದಲ್ಲಿ ಡಿನ್ನರ್ ಪಾರ್ಟಿ ವೇಳೆ ಮಾಧ್ಯಮದ ವಿರುದ್ಧ ಕೇಜ್ರಿವಾಲ್ ಹರಿಹಾಯ್ದಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಮಾಧ್ಯಮದ ಕೆಲವು ಮುಖ್ಯಸ್ಥರನ್ನು ಜೈಲಿಗೆ ಕಳಿಸುತ್ತೇನೆ ಎಂದು ಹೇಳಿದ್ದಾರೆ. ಮೋದಿ ಪರ ಪ್ರಚಾರ ಮಾಡಿದ್ದಕ್ಕಾಗಿ ಮಾಧ್ಯಮ ಭಾರೀ ಬೆಲೆ ತೆರಬೇಕಾಗುತ್ತದೆ.

ಕೇಜ್ರಿವಾಲ್ ಮಾಧ್ಯಮದ ವಿರುದ್ಧ ಹೇಳಿಕೆ ನೀಡುತ್ತಿರುವುದು ಎರಡನೇ ಬಾರಿ. ಸುಖಾಸುಮ್ಮನೆ ಮೋದಿಯನ್ನು ಎತ್ತರಕ್ಕೆ ಏರಿಸಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ದೂರಿದರು.

Share this Story:

Follow Webdunia kannada