ಸೆಂಟ್ರಲ್ ನಲ್ಲಿ ಸುಮಲತಾ ಪರ ಕೂಗಿದ ಕೈ ಕಾರ್ಯಕರ್ತ

Webdunia
ಸೋಮವಾರ, 8 ಏಪ್ರಿಲ್ 2019 (18:25 IST)
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಮಾಜಿ ಸಿಎಂ‌ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಿರುವಾಗ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕಾರ್ಯಕರ್ತನೊಬ್ಬ ಕೂಗಿದ ಘಟನೆ ನಡೆದಿದೆ.

ರಾಜಾಜಿನಗರದ ಮೋದಿ ಹಾಸ್ಪಿಟಲ್ ಬಳಿ ಸಿದ್ದರಾಮಯ್ಯ ಪ್ರಚಾರ ನಡೆಸಿದ್ರು. ಸಚಿವ ಕೆಜೆ ಜಾರ್ಜ್, ಝಮಿರ್ ಅಹ್ಮದ್ ಖಾನ್, ರಿಜ್ವಾನ್ ಅರ್ಷದ್ ಪ್ರಚಾರದಲ್ಲಿ ಭಾಗಿಯಾಗಿದ್ದರು. ರಾಜಾಜಿನಗರ ಮೋದಿ ಹಾಸ್ಪಿಟಲ್ ಬಳಿ ಸಿದ್ದರಾಮಯ್ಯ ಬಹಿರಂಗ ರ್ಯಾಲಿ ನಡೆಸಿದ್ರು. ರಿಜ್ವಾನ್ ಗೆ ಮತ ನೀಡುವಂತೆ ಸಿದ್ದರಾಮಯ್ಯ ಪ್ರಚಾರ ಶುರುಮಾಡಿದ್ರು.

ರೋಡ್ ಶೋ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಸಂಸತ್ ನಲ್ಲಿ ಒಂದಿನ ಮಾತಾಡಿಲ್ಲ. ಹತ್ತು ವರ್ಷದಲ್ಲಿ ಒಂದೇ ಒಂದು ಬಾರಿ ಮಾತನಾಡಿಲ್ಲ. ಮೋದಿ ಮುಖಃ ನೋಡಿ ನನಗೆ ಮತ ಹಾಕಿ ಅನ್ತಾರೆ ಎಂದು ಟೀಕೆ ಮಾಡಿದ್ರು.

ಬೆಂಗಳೂರಿನ ಪ್ರಚಾರದಲ್ಲೂ ಸುಮಲತಾ ಅಂಬರೀಶ್ ಪರ ಕೂಗು ಕೇಳಿಬಂದಿತು. ಸುಮಲತಾ ಗೆಲ್ಲಿಸುವಂತೆ ಧ್ವನಿ ಎತ್ತಿದ ಕಾಂಗ್ರೆಸ್ ಕಾರ್ಯಕರ್ತನೊಬ್ಬ, ಇಲ್ಲಿ ರಿಜ್ವಾನ್ ಅರ್ಷದ್ ಗೆಲ್ಲಿಸುತ್ತೇವೆ. ಮಂಡ್ಯದಲ್ಲಿ ಸುಮಲತಾ ಗೆಲ್ಲಿಸಿಕೊಡಿ ಅಣ್ಣ ಎಂದ ಕಾರ್ಯಕರ್ತ ಮನವಿ ಮಾಡಿದ.

ಆದರೆ ಈ ವೇಳೆ ಆ ಕಾರ್ಯಕರ್ತನ ಕೂಗಿಗೆ ಕಿವಿ ಕೊಡದೆ ತನ್ನ ಭಾಷಣ ಮುಂದು ವರೆಸಿದ ಸಿದ್ದರಾಮಯ್ಯ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಋತುಚಕ್ರ ಮುಂದೂಡಲು ಮಾತ್ರೆ ತೆಗೆದುಕೊಳ್ಳಬಹುದೇ, ಡಾ ಪದ್ಮಿನಿ ಪ್ರಸಾದ್ ಹೇಳಿದ್ದೇನು

ಸಂಬಳ ಕೊಡಕ್ಕೆ ದುಡ್ಡಿಲ್ಲ, ಗುಂಡಿ ಮುಚ್ಚಲು ಹಣವಿಲ್ಲ, ಟ್ಯಾಕ್ಸ್ ದುಡ್ಡು ಏನ್ಮಾಡ್ತೀರಿ ಸ್ವಾಮಿ: ಆರ್ ಅಶೋಕ್

ಪ್ರಿಯಾಂಕ್ ಖರ್ಗೆ ಓದಿದ್ದು ಎಸ್ಎಸ್ಎಲ್ ಸಿನಾ, ಪಿಯುಸಿನಾ: ಈ ಕನ್ ಫ್ಯೂಷನ್ ಸರಿ ಮಾಡಿ ಸಾರ್ ನೆಟ್ಟಿಗರಿಂದ ಟ್ರೋಲ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments