ನವದೆಹಲಿ : ಕಾಶ್ಮೀರವನ್ನು ಪ್ರತ್ಯೇಕಗೊಳಿಸಿ, ಅಲ್ಲಿಗೆ ಬೇರೊಬ್ಬ ಪ್ರಧಾನ ಮಂತ್ರಿಯನ್ನು ನೇಮಕ ಮಾಡುವ ಪ್ರಸ್ತಾವನೆ ಮಾಡಿದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಮೋದಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್ಡಿ ದೇವೇಗೌಡರ ಹೆಸರನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ನಿಮ್ಮ ಮಹಾಘಟಬಂಧನದ ಮಿತ್ರ ಪಕ್ಷದ ನಾಯಕರೊಬ್ಬರು ಭಾರತಕ್ಕೆ ಇಬ್ಬಿಬ್ಬರು ಪ್ರಧಾನಿಗಳು ಬೇಕು ಎಂದಿದ್ದಾರೆ. ಕಾಶ್ಮೀರವನ್ನು ಪ್ರತ್ಯೇಕಗೊಳಿಸಿ, ಅಲ್ಲಿಗೆ ಬೇರೊಬ್ಬ ಪ್ರಧಾನ ಮಂತ್ರಿಯನ್ನು ನೇಮಕ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಏನಂತೀರಾ ಎಂದು ಪ್ರಶ್ನಿಸುವುದರ ಮೂಲಕ ಕಿಡಿಕಾರಿದ್ದಾರೆ.
ಅಲ್ಲದೇ ಕಾಂಗ್ರೆಸ್ ಮಿತ್ರ ಪಕ್ಷವಾದ ನ್ಯಾಶನಲ್ ಕಾನ್ಫರೆನ್ಸ್ ನಾಯಕರೊಬ್ಬರು ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ರು. ಆಗಲೂ ಕಾಂಗ್ರೆಸ್ ತುಟಿ ಬಿಚ್ಚಲಿಲ್ಲ. ಈಗ ಅದೇ ಪಕ್ಷದ ಮುಖಂಡ, ಮಾಜಿ ಸಿಎಂ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಮಂತ್ರಿ ನೇಮಿಸ್ತೀವಿ ಅಂತಾ ಘೋಷಿಸಿದ್ದಾರೆ. ಕಾಂಗ್ರೆಸ್ನವರೇ ಈಗಲಾದರೂ ಬಾಯಿ ಬಿಡ್ತೀರಾ? ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.