Webdunia - Bharat's app for daily news and videos

Install App

ವನ್ಯಜೀವಿಗಳ ನಾಗರಹೊಳೆ ಉದ್ಯಾನವನ

Webdunia
ಶನಿವಾರ, 22 ನವೆಂಬರ್ 2014 (14:18 IST)
ನಾಗರಹೊಳೆ ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನ. ಇದು ಕೊಡಗಿನ ವಿರಾಜಪೇಟೆಯಿಂದ 64ಕಿ.ಮೀ.ದೂರದಲ್ಲಿದೆ. ಸುಮಾರು 643ಕಿ.ಮೀ. ವಿಸ್ತೀರ್ಣವುಳ್ಳ ಈ ಅರಣ್ಯಪ್ರದೇಶ ಹುಣಸೂರು ಅರಣ್ಯ ವಿಭಾಗಕ್ಕೆ ಸೇರಿದೆ. ನಾಗರಹೊಳೆ ಎಂಬ ಸಣ್ಣ ನದಿಯಿಂದಾಗಿ ಈ ಪ್ರದೇಶಕ್ಕೆ ನಾಗರಹೊಳೆ ಎಂಬ ಹೆಸರು ಬಂದಿದೆ. 
 
ನಾಗರಹೊಳೆ ಅರಣ್ಯ ತುಂಬಾ ದಟ್ಟವಾಗಿದ್ದು, ಸದಾ ಹಸಿರಿನಿಂದ ಕೂಡಿರುತ್ತದೆ. ಇಲ್ಲಿ ವರ್ಷಪೂರ್ತಿ ನೀರಿರುವ ಅನೇಕ ಜಲಪಾತಗಳಿವೆ. ಈ ಅಭಯಾರಣ್ಯದಲ್ಲಿ ಆನೆ, ಕಡವೆ, ಕಾಡುಕೋಣ, ಚಿರತೆ, ಕಾಡುಬೆಕ್ಕು, ಬೊಗಳುವ ಜಿಂಕೆ, ಚುಕ್ಕೆ ಜಿಂಕೆ, ಹುಲಿ, ಕರಡಿ, ಕೆನ್ನಾಯಿ, ನರಿ ಮುಂತಾದ ಪ್ರಾಣಿಗಳು ಇಲ್ಲಿ ನಿರಾತಂಕವಾಗಿ ತಿರುಗಾಡುವುದನ್ನು ಕಾಣಬಹುದು.
 
ಪ್ರಾಣಿಗಳ ವೀಕ್ಷಣೆಗೆಂದೇ ನಾಗರಹೊಳೆಗೆ ದೇಶ-ವಿದೇಶಗಳಿಂದ ನೂರಾರು ಜನರು ಭೇಟಿ ನೀಡುತ್ತಾರೆ. ಅರಣ್ಯ ಇಲಾಖೆ ಪ್ರವಾಸಿಗರನ್ನು ಕಾಡಿನೊಳಗೆ ಕರೆದೊಯ್ದು ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಲು ಅನುಕೂಲ ಕಲ್ಪಿಸಿದೆ. ವಾಹನಗಳಲ್ಲಿ ಅಥವಾ ಆನೆಗಳ ಮೇಲೆ ಕುಳಿತು ಕಾಡಿನಲ್ಲಿ ಸಂಚರಿಸುತ್ತಾ ಅಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಹಿಂಡು-ಹಿಂಡಾಗಿ ತಿರುಗಾಡುವ ಕಾಡು ಪ್ರಾಣಿಗಳನ್ನು ಅವುಗಳ ಮೂಲ ನೆಲೆಯಲ್ಲೇ ನೋಡಿ ಆನಂದಿಸಬಹುದು. ಪ್ರಾಣಿಗಳನ್ನು ಹತ್ತಿರದಿಂದ ನೋಡಲು ಕಾಡಿನಲ್ಲಿ ವೀಕ್ಷಣಾಗೋಪುರಗಳನ್ನು ನಿರ್ಮಿಸಲಾಗಿದೆ.
 
ಬೆಳಿಗ್ಗೆ 6ರಿಂದ 10ಗಂಟೆ ಹಾಗೂ ಸಂಜೆ 5ರಿಂದ 6.30ಗಂಟೆ ಅವಧಿಯಲ್ಲಿ ಮಾತ್ರ ಪ್ರವಾಸಿಗರನ್ನು ಪ್ರಾಣಿ ವೀಕ್ಷಣೆಗೆ ವಿಶೇಷ ವಾಹನಗಳಲ್ಲಿ ಅರಣ್ಯದೊಳಗೆ ಕರೆದುಕೊಂಡು ಹೋಗಲಾಗುತ್ತದೆ. ಏಕೆಂದರೆ ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಡಲು ಸಿಗುವುದು ಈ ವೇಳೆಯಲ್ಲಿ ಮಾತ್ರ.
 
ನಾಗರಹೊಳೆ ಉದ್ಯಾನವನದೊಳಗೆ  ಬೆಳಿಗ್ಗೆ 6ರಿಂದ ಸಂಜೆ 6ಗಂಟೆಯವರೆಗೆ ಮಾತ್ರ ಪ್ರವಾಸಿ ವಾಹನಗಳಿಗೆ ಪ್ರವೇಶ. 
ಮಾರ್ಗ: ನಾಗರಹೊಳೆ ಮಡಿಕೇರಿಯಿಂದ 100ಕಿ.ಮೀ. ವಿರಾಜಪೇಟೆಯಿಂದ 64ಕಿ.ಮೀ. ಮತ್ತು ಮೈಸೂರಿನಿಂದ 94ಕಿ.ಮೀ.ದೂರದಲ್ಲಿದೆ. ಮಳೆಗಾಲ ಬಿಟ್ಟು ಬೇರೆಲ್ಲಾ ಕಾಲದಲ್ಲೂ ಇಲ್ಲಿಗೆ ಭೇಟಿ ನೀಡಬಹುದಾಗಿದೆ.
 
ಇಲ್ಲಿನ ಪ್ರವಾಸಿ ಮಂದಿರಗಳಲ್ಲಿ ಉಳಿದುಕೊಳ್ಳಲು ಬಯಸುವವರು ಅರಣ್ಯ ಇಲಾಖೆಯ ಕೋಣೆಗಳನ್ನು ಮುಂಚಿತವಾಗಿ ಕಾಯ್ದಿರಿಸುವುದು ಉತ್ತಮ.
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Pahalgam Attack, ದುಃಖದ ಸಮಯದಲ್ಲಿ ದೇಶ ಮೆಚ್ಚುವ ನಿರ್ಧಾರ ಕೈಗೊಂಡ ನಟ ಸಲ್ಮಾನ್ ಖಾನ್‌

Shruti Haasan, ಚೆನ್ನೈಗೆ ಸೋಲಾಗುತ್ತಿದ್ದ ಹಾಗೇ ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಟಿ, Video Viral

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

Show comments