ಆಡಿಯೋ ತಿರುಚಿ ಶೇರ್​ ಮಾಡಲಾಗಿದೆ- H.D.ರೇವಣ್ಣ

Webdunia
ಶುಕ್ರವಾರ, 17 ಮಾರ್ಚ್ 2023 (21:04 IST)
ನನ್ನ ಆಡು ಭಾಷೆ, ನನ್ನ ಸಂಸ್ಕೃತಿ, ನನ್ನ ಹೋರಾಟ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ಅಂತಿಮವಾದ ತೀರ್ಮಾನವನ್ನು ಜನತೆ ಕೊಡ್ತಾರೆ ಎಂದು ಅರಸೀಕೆರೆ ಶಾಸಕ K.M. ಶಿವಲಿಂಗೇಗೌಡ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, H.D.ರೇವಣ್ಣ ಹಾಗೂ ತಮ್ಮ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ವಿಚಾರ ಸಂಬಂಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಮತ್ತು ರೇವಣ್ಣ ಅವರ ನಡುವಿನ ಸಂಭಾಷಣೆ ವೈರಲ್ ಆಗಿದೆ. ನಾನು ರೇವಣ್ಣ ಅವರು ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದೇವೆ. ಆದರೆ ಅದನ್ನು ಎಡಿಟಿಂಗ್ ಮಾಡಿ ತಮಗೆ ಉಪಯುಕ್ತವಾಗುವ ರೀತಿಯಲ್ಲಿ ತುಂಡು ತುಂಡು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ. ನನ್ನ ಕ್ಷೇತ್ರದ ಜನರನ್ನ ದಿಕ್ಕುತಪ್ಪಿಸುವ ಕೆಲಸವನ್ನು ತಾವು ಮಾಡ್ತಾ ಇದ್ದೀರಿ. ಇದರಿಂದ ನೀವು ಯಶಸ್ಸು ಕಾಣುವುದಿಲ್ಲ. ಕ್ಷೇತ್ರದ ಜನತೆಗೆ ನಾನು ಯಾರು ಏನು ಅಂತಾ ಗೊತ್ತಿದೆ ಎಂದರು. ಮಾಜಿ ಸಚಿವರಾಗಿ, ಜಿಲ್ಲೆಯ ನಾಯಕರಾಗಿ ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಬಿಡುವಂತಹ ಕೆಲಸವನ್ನು ನೀವು ಏನ್ ಮಾಡ್ತಿದ್ದೀರಿ ನಿಮಗೆ ಶೋಭೆ ತರುವಂತಹದ್ದಲ್ಲ. ನಾನು ಕೀ ಪ್ಯಾಡ್ ಫೋನ್ ಇಟ್ಟುಕೊಂಡಿದ್ದೀನಿ. ನನಗೆ ಸಾಮಾಜಿಕ ಜಾಲತಾಣದ ಬಗ್ಗೆ ಅಷ್ಟು ಅರಿವಿಲ್ಲ.. ಆದರೆ ಯಾರೋ ಮಧ್ಯದಲ್ಲಿ ರಾಜಕೀಯ ಕುತಂತ್ರವನ್ನು ಮಾಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಾ ಸಿನ್ ಮಂಜುನಾಥ್ ಯಾವಾಗಲೂ ಹೇಳುವ ಆರು ಔಷಧಿಗಳು ಇವು

ಡಿಕೆ ಶಿವಕುಮಾರ್ ಗೆ ಠಕ್ಕರ್ ಕೊಡಲು ಸಿದ್ದರಾಮಯ್ಯ ಬಣದ ಭರ್ಜರಿ ಪ್ಲ್ಯಾನ್

ಸಿದ್ದರಾಮಯ್ಯಗೆ ಹೀಗ್ಯಾಕೆ ಮಾಡಿದ್ರು ಡಿಕೆ ಶಿವಕುಮಾರ್

ಆಪರೇಷನ್ ಸಿಂಧೂರ್ ಮೊದಲ ದಿನವೇ ಭಾರತವನ್ನು ಪಾಕಿಸ್ತಾನ ಸೋಲಿಸಿತ್ತು: ಕಾಂಗ್ರೆಸ್ ನಾಯಕ ಪೃಥ್ವಿರಾಜ್ ವಿವಾದ

Karnataka Weather: ವಿಪರೀತ ಚಳಿ ನಡುವೆ ಇಂದು ಈ ಜಿಲ್ಲೆಗಳಲ್ಲಿ ತುಂತುರು ಮಳೆ ಸಂಭವ

ಮುಂದಿನ ಸುದ್ದಿ
Show comments