ನಾಯಿ ಕಚ್ಚಿದ್ದಕ್ಕೆ ಯುವತಿ ಬಲಿ ..!!!

Webdunia
ಶುಕ್ರವಾರ, 1 ಜುಲೈ 2022 (16:04 IST)
ಹುಚ್ಚು ನಾಯಿ ಕಡಿದು ತಿಂಗಳ ಬಳಿಕ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ದೇವರ ನಾಡು ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ. ಕಳೆದ ತಿಂಗಳು ನೆರೆ ಮನೆಯವರ ನಾಯಿಯೊಂದು 19 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಕಡಿದಿತ್ತು . ಇದಾದ ಬಳಿಕ ವಿದ್ಯಾರ್ಥಿನಿ ಇದಕ್ಕೆ ಲಸಿಕೆ ತೆಗೆದುಕೊಂಡಿದ್ದಳು.
ಆಕೆಗೆ ರೇಬಿಸ್‌ ಶುರುವಾಗಿದ್ದು, ತ್ರಿಶೂರ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (MCH) ರೇಬಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ನಿನ್ನೆ(ಜೂ.30) ಗುರುವಾರ ಸಾವನ್ನಪ್ಪಿದ್ದಾಳೆ.
 
ಪಾಲಕ್ಕಾಡ್‌ನ (Palakkad) ಮಂಕರದಲ್ಲಿರುವ (Mankara) ಪಡಿಂಜಕರ (Padinjakara) ಮನೆಯ ಶ್ರೀಲಕ್ಷ್ಮಿ (Sreelakshmi) ಸಾವಿಗೀಡಾದ ತರುಣಿ, ಮೇ 30 ರಂದು ಈಕೆ ಕೊಯಮತ್ತೂರಿನ ಕಾಲೇಜಿಗೆ ತೆರಳುತ್ತಿದ್ದಾಗ ಈಕೆಗೆ ನೆರೆಮನೆಯವರ ನಾಯಿ ಕಡಿದಿತ್ತು. ಘಟನೆಯ ನಂತರ ವೈದ್ಯರು ಸೂಚಿಸಿದ ಆಯಂಟಿ ರೇಬಿಸ್ ಲಸಿಕೆಗಳನ್ನು ಆಕೆ ತೆಗೆದುಕೊಂಡಿದ್ದಾಳೆ ಎಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ. ಆದರೆ, ಎರಡು ದಿನಗಳ ಹಿಂದೆ ರೇಬಿಸ್‌ನ ಲಕ್ಷಣಗಳಲ್ಲಿ ಒಂದಾದ ತೀವ್ರ ಜ್ವರದಿಂದ ಬಳಲುತ್ತಿದ್ದ ಆಕೆಯನ್ನು ತ್ರಿಶೂರ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಕೆ ಸಾವನ್ನಪ್ಪಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಆಡಳಿತದಲ್ಲಿ ನಕ್ಸಲಸಿಂ ಕೊನೆಯುಸಿರೆಳೆಯುತ್ತಿದೆ: ಅಮಿತ್ ಶಾ

ನನ್ನ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿದೆ: ಸಿಎಂ ಸಿದ್ದರಾಮಯ್ಯ ಹೀಗ್ಯಾಕೆ ಅಂದಿದ್ದು

ದೋಣಿಯೊಳಗೆ ಹಾರಿ ಬಂದು ದೊಡ್ಡ ಮೀನು ಚುಚ್ಚಿ ಮೀನುಗಾರಿಕೆಗೆ ತೆರಳಿದ್ದ ಯುವಕ ಸಾವು

ಒನ್ ಸೈಡ್ ಲವ್‌ಗೆ ನೋ ಎಂದ ವಿದ್ಯಾರ್ಥಿನಿಯನ್ನೇ ಮುಗಿಸಿದ ಪ್ರಿಯಕರ

ಆರ್‌ಎಸ್‌ಎಸ್‌ ದೊಡ್ಡ ವೃಕ್ಷವಾಗಿದ್ದು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ: ಶೋಭ ಕರಂದ್ಲಾಜೆ

ಮುಂದಿನ ಸುದ್ದಿ
Show comments