Webdunia - Bharat's app for daily news and videos

Install App

ಮೃತರ ಆತ್ಮಕ್ಕೆ ವಿಭಿನ್ನವಾಗಿ ಶಾಂತಿಕೋರಿದ ಯುವಕರು

Webdunia
ಮಂಗಳವಾರ, 14 ಆಗಸ್ಟ್ 2018 (16:43 IST)
ಮೃತ ನಾಯಕರೊಬ್ಬರ ಸ್ಮರಣಾರ್ಥ ಅಲ್ಲಿನ  ಯುವಕರು ಬರೋಬ್ಬರಿ 1000 ಯುನಿಟ್ ರಕ್ತ ದಾನ ಮಾಡುವ ಮೂಲಕ ಮೃತರ ಆತ್ಮಕ್ಕೆ ವಿನೂತನವಾಗಿ ಶಾಂತಿ ಕೋರಿದ್ದಾರೆ.

ಪುರಸಭಾ  ಮಾಜಿ ಅಧ್ಯಕ್ಷರ ಅಕಾಲಿಕ ಮರಣದ ಹಿನ್ನೆಲೆ ಅವರ ಆತ್ಮಕ್ಕೆ ಶಾಂತಿಕೋರುವ ಸಲುವಾಗಿ ವಿವಿಧ ಸಂಘಟನೆಗಳು ಸೇರಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಿದ್ದವು. ಸುಮಾರು 1000 ಯೂನಿಟ್ ರಕ್ತ ಸಂಗ್ರಹಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಆನೇಕಲ್ ಪಟ್ಟಣದ ಪುರಸಭಾ ಮಾಜಿ ಸದಸ್ಯ ಅಶ್ವಥ್ ನಾರಾಯಣ್ ಕೆಲವು ದಿನಗಳ ಹಿಂದೆ ಅಕಾಲಿಕ ಮರಣಕ್ಕೀಡಾಗಿದ್ದರು.

ಆನೇಕಲ್ ಪಟ್ಟಣಕ್ಕೆ ಕಾವೇರಿ ನೀರು ತರುವಲ್ಲಿ ಅಪಾರ ಶ್ರಮವಹಿಸಿದ್ದರು. ಅವರ ನೆನಪಿಗಾಗಿ ಆನೇಕಲ್ ತಾಲೂಕಿನಲ್ಲಿರುವ ಸಂಘಟನೆಗಳ ಸದಸ್ಯರು ಬೃಹತ್ ರಕ್ತದಾನ ಶಿಬಿರ ಏರ್ಪಡಿಸಿದ್ದರು. ಈ ಶಿಬಿರದಲ್ಲಿ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ಆನೇಕಲ್ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಅನೇಕ ಅಭಿಮಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು.

ದಾಖಲೆಯ 1000 ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಗಿದ್ದು, ಈ ರಕ್ತವನ್ನು ಅಶಕ್ತ ಬಡ ರೋಗಿಗಳಿಗೆ ನೀಡಲು ಅಶ್ವಥ್ ನಾರಾಯಣ ಅಭಿಮಾನಿಗಳು ನಿರ್ಧರಿಸಿದ್ದಾರೆ.



 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments