Select Your Language

Notifications

webdunia
webdunia
webdunia
webdunia

ಜನರ ಜೀವದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ: ವೈದ್ಯರಿಗೆ ಹೈಕೋರ್ಟ್ ತರಾಟೆ

ಜನರ ಜೀವದ ಜೊತೆ  ಚೆಲ್ಲಾಟವಾಡುವುದು ಸರಿಯಲ್ಲ: ವೈದ್ಯರಿಗೆ ಹೈಕೋರ್ಟ್ ತರಾಟೆ
ಬೆಂಗಳೂರು , ಗುರುವಾರ, 30 ಅಕ್ಟೋಬರ್ 2014 (15:22 IST)
ಮುಷ್ಕರ ಹೂಡಿದ ಸರ್ಕಾರಿ ವೈದ್ಯರನ್ನು ಹೈಕೋರ್ಟ್  ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದಿದೆ. ನಿಮಗೆ ಮುಷ್ಕರ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಹೈಕೋರ್ಟ್ ವೈದ್ಯರನ್ನು  ಪ್ರಶ್ನಿಸಿದೆ.  1200 ವೈದ್ಯರು ಮುಷ್ಕರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಅವರಿಗೆ ರಜೆ ಕೊಟ್ಟವರು ಯಾರು ಎಂದು ರಾಜ್ಯಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅವರಿಗೆ ಏನೇ ತೊಂದರೆಯಿದ್ದರೂ ಕೋರ್ಟ್‌ ಮೊರೆ ಹೋಗಬೇಕಿತ್ತು. ಅದನ್ನು ಬಿಟ್ಟು ಮುಷ್ಕರ ಹೂಡಬಾರದು, ಜನರ ಜೀವದ ಜೊತೆ ವೈದ್ಯರು ಚೆಲ್ಲಾಟವಾಡುವುದು ಸರಿಯಿಲ್ಲ ಎಂದು ಹೈಕೋರ್ಟ್ ಎಚ್ಚರಿಸಿತು.  

ವೈದ್ಯರ ಮುಷ್ಕರದ ಬಗ್ಗೆ ಅಮೃತೇಶ್ ಎಂಬವರು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು. ರಾಜ್ಯಸರ್ಕಾರಕ್ಕೆ ಒಂದು ಸೂಚನೆಯನ್ನು ನೀಡಿ ಮುಷ್ಕರದಿಂದ ಆಗಿರುವ ನಷ್ಟವನ್ನು ವೈದ್ಯರೇ ಭರಿಸಬೇಕೆಂದು ಕೋರ್ಟ್ ಸೂಚಿಸಿತು. 

Share this Story:

Follow Webdunia kannada