Select Your Language

Notifications

webdunia
webdunia
webdunia
webdunia

ಸಚಿವರ ರಾಜೀನಾಮೆ ಪಡೆಯುವ ಎದೆಗಾರಿಕೆ ನಿಮಗಿಲ್ಲವೇ? : ಸಿಎಂಗೆ ಶೆಟ್ಟರ್ ಪ್ರಶ್ನೆ

ಸಚಿವರ ರಾಜೀನಾಮೆ ಪಡೆಯುವ ಎದೆಗಾರಿಕೆ ನಿಮಗಿಲ್ಲವೇ? : ಸಿಎಂಗೆ ಶೆಟ್ಟರ್ ಪ್ರಶ್ನೆ
ಬೆಂಗಳೂರು , ಗುರುವಾರ, 26 ನವೆಂಬರ್ 2015 (12:54 IST)
ಬೆಂಗಳೂರು: ಸಚಿವ ಆಂಜನೇಯ  ಪ್ರಕರಣವನ್ನು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಸಚಿವ ಆಂಜನೇಯ ರಾಜೀನಾಮೆಗೆ ಅವರು ಒತ್ತಾಯಿಸಿ ತನಿಖೆ ಮುಗಿಯುವ ತನಕ ಅಧಿಕಾರದಲ್ಲಿ ಮುಂದುವರಿಯಬೇಡಿ ಎಂದು ಆಂಜನೇಯ ಅವರಿಗೆ ಸಲಹೆ ಮಾಡಿದರು.  ಆಂಜನೇಯ ಪ್ರಕರಣದ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ. ಅಂಥ ಮಂತ್ರಿ ಅಧಿಕಾರದಲ್ಲಿರುವುದು ಸರಿಯೇ ಎಂದು ಸ್ಪೀಕರ್ ಶೆಟ್ಟರ್ ಮಾತಿಗೆ ದನಿಗೂಡಿಸಿದಾಗ ಪ್ರತಿಪಕ್ಷ ಬಿಜೆಪಿ ಮೇಜು ಕುಟ್ಟಿ ಸ್ವಾಗತಿಸಿತು.

 ಆಂಜನೇಯ ವಿಷಯ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ತನಿಖೆ ಹೆಸರಲ್ಲಿ ಸರ್ಕಾರ ಜನರ ಕಣ್ಣೊರೆಸೋದು ಬೇಡ. ಪ್ರಸ್ತಾಪ, ಸದನ ಇರುವುದೇ ಚರ್ಚೆ ಮಾಡಲು, ಸರ್ಕಾರ ಚರ್ಚೆ ಎದುರಿಸಬೇಕಿತ್ತು. ಪಾರದರ್ಶಕ ಸರ್ಕಾರ ಎನ್ನುತ್ತಿದ್ದ ಸಿಎಂ ಎದೆಗಾರಿಕೆ ಎಲ್ಲಿದೆ, ಸಚಿವರ ರಾಜೀನಾಮೆ ಪಡೆಯುವ ಎದೆಗಾರಿಕೆ ನಿಮಗೆ ಎಲ್ಲಿ ಹೋಗಿದೆ ಎಂದು ಸಿಎಂ ವಿರುದ್ಧ ಜಗದೀಶ್ ಶೆಟ್ಟರು ವಾಗ್ದಾಳಿ ಮಾಡಿದರು.
  ಅಧಿಕಾರಿಗಳು, ಮಂತ್ರಿಗಳು, ಸರ್ಕಾರವೇ ಭ್ರಷ್ಟವಾಗಿದೆ.  ಸಿಎಂ ಅವರೇ ಪ್ರತಿ ಹಂತದಲ್ಲೂ ಭ್ರಷ್ಟರನ್ನು ರಕ್ಷಿಸುತ್ತಿದ್ದೀರಿ ಎಂದು ಹೇಳಿದಾಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಉಂಟಾಗಿ   ಸದನದಲ್ಲಿ ಗದ್ದಲ ಕೋಲಾಹಲ ಹಿನ್ನೆಲೆಯಲ್ಲಿ ಕಲಾಪ ಮುಂದೂಡಿಕೆಯಾಯಿತು. 
 
 ಏನಿದು ಆಂಜನೇಯ ವಿರುದ್ಧ ಪ್ರಕರಣ? 
ಸಚಿವ ಆಂಜನೇಯ ಅವರ  ಅಧಿಕೃತ ನಿವಾಸದಲ್ಲೇ ಅವರ ಪತ್ನಿ ವಿಜಯ ಅವರು ಕಮೀಷನ್ ಪಡೆಯುತ್ತಿರುವ ದೃಶ್ಯ ಖಾಸಗಿ ಟೀವಿ ವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿತ್ತು.
ಈ ಸಂಬಂಧ ಪ್ರಮುಖ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ನಾಗರಿಕ ವೇದಿಕೆಗಳು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ್ದವು.  ಆಂಜನೇಯ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಡ ಹೇರಿದ್ದವು. ಈ ಹಿನ್ನಲೆಯಲ್ಲಿ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. 

Share this Story:

Follow Webdunia kannada