Webdunia - Bharat's app for daily news and videos

Install App

ಯಡಿಯೂರಪ್ಪ Vs ಶೆಟ್ಟರ್: ಇದು ಒಳ ರಾಜಕೀಯ...!

Webdunia
ಶುಕ್ರವಾರ, 28 ಅಕ್ಟೋಬರ್ 2016 (09:52 IST)
ಬೆಂಗಳೂರು: ಕಿಕ್ ಬ್ಯಾಕ್ ಪ್ರಕರಣದಿಂದ ಆರೋಪ ಮುಕ್ತರಾಗಿರುವ ಬಿ.ಎಸ್. ಯಡಿಯೂರಪ್ಪ ಇದೀಗ ರಾಜ್ಯ ಬಿಜೆಪಿಯಲ್ಲಿ 'ಮಹಾನ್' ನಾಯಕನೆನಿಸಿಕೊಂಡಿದ್ದಾರೆ. ಅದೂ ಅಲ್ಲದೆ ಲಿಂಗಾಯಿತ ಸಮುದಾಯದ ಪ್ರಬಲ ಮುಖಂಡರಾಗಿ ಮತ್ತೊಮ್ಮೆ ಮೇಲೆದ್ದಿದ್ದಾರೆ.
ಹೌದು, ಈ ಹಿಂದೆ ರಾಜ್ಯದಲ್ಲಿ ಪ್ರಪ್ರಥಮವಾಗಿ ಬಿಜೆಪಿ ಆಡಳಿತಕ್ಕೆ ಬಂದಾಗ, ಅದರ ಚುಕ್ಕಾಣಿಯನ್ನು ಯಡಿಯೂರಪ್ಪರೇ ಹಿಡಿದಿದ್ದರು. ಕಾಲಾಂತರದಲ್ಲಿ ಒಂದಿಲ್ಲೊಂದು ಪ್ರಕರಣಗಳು ಅವರ ಮೈಗೆ ಸುತ್ತಿಕೊಳ್ಳುತ್ತ, ಕೊನೆಗೆ ಪ್ರೇರಣಾ ಟ್ರಸ್ಟ್ ಗೆ ಸಂಬಂಧಿಸಿದ 40 ಕೋಟಿ ರು. ಕಿಕ್ಕ್ ಬ್ಯಾಕ್ ಹಗರಣ ಅವರನ್ನು ಸಂಪೂರ್ಣ ಆವರಿಸಿಕೊಂಡು ಬಿಟ್ಟಿತು. ಕೊನೆಗೆ ಅದು ಅವರ ಮುಖ್ಯಮಂತ್ರಿ ಕುರ್ಚಿಯನ್ನೇ ಅಲುಗಾಡಿಸಿ, ಕೆಡವಿ ಬಿಟ್ಟಿದ್ದು ಈಗ ಇತಿಹಾಸ.
 
ಅಂದಿನಿಂದ ಮೊನ್ನೆ ಮೊನ್ನೆವರೆಗೂ ಅವರು ಕಾನೂನು ಸಮರ ನಡೆಸಿ, ಅದರಲ್ಲಿ ಯಶಸ್ವಿಯಾಗಿ ನಿರಪರಾಧಿ ಎಂದು ನ್ಯಾಯಾಲಯದಿಂದಲೇ ಆದೇಶ ಪಡೆದರು. ನ್ಯಾಯಾಲಯದ ಈ ಆದೇಶ ಯಡಿಯೂರಪ್ಪರ ಪಾಲಿಗೆ ರಾಜಕೀಯ ಬದುಕಿನಲ್ಲಿ ಪುನರ್ಜನ್ಮ ಎಂದೇ ಹೇಳಬಹುದು. ಈಗಾಗಲೇ 2018ರ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿ ರಾಜ್ಯದ ಮೂರು ಪಕ್ಷಗಳಿಂದ ನಿಧಾನವಾಗಿ ಆರಂಭವಾಗಿದೆ. ಮೂರ್ನಾಲ್ಕು ತಿಂಗಳು ಉರುಳುತ್ತಿದ್ದಂತೆ ಅದು ಇನ್ನಷ್ಟು ಬಿರುಸು ಪಡೆದುಕೊಳ್ಳುತ್ತವೆ. ಅದಕ್ಕೂ ಮೊದಲೇ ಯಡಿಯೂರಪ್ಪ ಪ್ರಮುಖ ಆರೋಪಗಳಿಂದ ಮುಕ್ತರಾಗಿರುವುದು, ಅಭಿಮಾನಿಗಳಲ್ಲಿ ಸಂತಸವನ್ನು ಹೆಚ್ಚಿಸಿದೆ. ಅದರ ಪರಿಣಾಮವೇ ನ್ಯಾಯಾಲಯದ ತೀರ್ಪು ಹೊರ ಬೀಳುತ್ತಿದ್ದಂತೆ ರಾಜ್ಯಾದ್ಯಂತ ಬಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದು.
 
ಯಡಿಯೂರಪ್ಪ ಆರೋಪ ಮುಕ್ತರಾಗಿರುವುದು ಹಾಗೂ ಅದರ ಬೆನ್ನಲ್ಲೇ ಅವರು ನೀಡಿರುವ 'ರಾಜಕೀಯವಾಗಿ ಇದು ನನಗೆ ಮಹತ್ವದ ತೀರ್ಪು' ಎನ್ನುವ ಹೇಳಿಕೆ, ರಾಜಕೀಯ ವಲಯದಲ್ಲಿ ಸಣ್ಣದೊಂದು ಅಲೆ ಎಬ್ಬಿಸಿದ್ದಂತೂ ಸತ್ಯ. ಆ ಅಲೆ ಕೇವಲ ವಿರೋಧಿ ಪಾಳಯ(ಕಾಂಗ್ರೆಸ್-ಜೆಡಿಎಸ್)ದಲ್ಲಿ ಮಾತ್ರವಲ್ಲ, ಸ್ವತಃ ಬಿಜೆಪಿಯ ಅಂಗಳದಲ್ಲಿಯೂ ಎದ್ದಿದೆ. ಯಾಕೆಂದರೆ, ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರಿಗೆ ಯಡಿಯೂರಪ್ಪ ಆರೋಪ ಮುಕ್ತರಾಗಿರುವುದು, ರಾಜಕೀಯ ಸ್ಥಾನಮಾನದ ದೃಷ್ಟಿಯಲ್ಲಿ ಪ್ರತಿಸ್ಪರ್ಧಿಯಾದಂತಾಗಿದೆ. ಇಲ್ಲಿವರೆಗೆ ಯಾವೊಂದು ಕಳಂಕವಿಲ್ಲದೆ ನಿಷ್ಠಾವಂತ ಹಾಗೂ ಬಿಜೆಪಿಯ ಪ್ರಬಲ ರಾಜಕಾರಣಿ ಎಂದು ಶೆಟ್ಟರ್ ಗುರುತಿಸಿಕೊಂಡಿದ್ದರು. ಆ ಸ್ಥಾನ-ಮಾನಕ್ಕೆ ಈಗ ಕಳಂಕ ಮುಕ್ತರಾದ ಅವರದೇ ಸಮುದಾಯದ ಯಡಿಯೂರಪ್ಪ ಎದುರಾಗಿದ್ದು, ಶೆಟ್ಟರ್ ಅವರಿಗೆ ರಾಜಕೀಯದ ದಾರಿಯಲ್ಲಿ ದೊಡ್ಡ ತಡೆಗೋಡೆಯೇ ಆಗಿದೆ ಎನ್ನಬಹುದು.
 
ಇವುಗಳ ನಡುವೆಯೇ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, 'ಶೆಟ್ಟರ್ ಕೇವಲ ಹುಬ್ಬಳ್ಳಿಗೆ ಮಾತ್ರ ಪ್ರತಿಪಕ್ಷದ ನಾಯಕರೇ?' ಎಂದು ಅವರ ವಿರುದ್ಧ ಹರಿಹಾಯ್ದಿದ್ದು ರಾಜಕೀಯವಾಗಿ ಸ್ವಲ್ಪ ಹಿನ್ನೆಡೆಯಾದರೂ ಅಚ್ಚರಿಯಿಲ್ಲ. ಯಾಕೆಂದರೆ, ಈಗಾಗಲೇ ಶೆಟ್ಟರ್ ವಿರುದ್ಧ ಸ್ಥಳೀಯವಾಗಿ ಹಾಗೂ ರಾಜ್ಯದ ಇಕ್ಕೆಲಗಳಲ್ಲಿ ಅಪಸ್ವರದ ಮಾತುಗಳು ಕೇಳಿ ಬರುತ್ತಲೇ ಇವೆ. ಒಂಬತ್ತು ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಹಾಗೂ ಐದಾರು ಬಾರಿ ಶಾಸಕರಾಗಿ ಜೊತೆಗೆ ಪ್ರತಿಪಕ್ಷದ ನಾಯಕರಾಗಿಯೂ ಅವರು ಹೇಳಿಕೊಳ್ಳುವಂತ ಯಾವೊಂದು ಕೆಲಸವನ್ನು ಮಾಡಿಲ್ಲ ಎನ್ನುವುದು ಸಾರ್ವಜನಿಕರ ಸಾಮಾನ್ಯ ದೂರು. ಆ ದೂರನ್ನು ಅಲ್ಲಗಳೆಯಲೂ ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ ಅವರದೇ ಸಮಾಜದ ಇನ್ನೊಮ್ಮ ನಾಯಕ ಯಡಿಯೂರಪ್ಪ ಮತ್ತೊಮ್ಮೆ ಅಖಾಡಕ್ಕೆ ಇಳಿದದ್ದು ಶೆಟ್ಟರ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎನ್ನುವುದು ಸದ್ಯದ ರಾಜಕೀಯ ವಿಶ್ಲೇಷಣೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments