Select Your Language

Notifications

webdunia
webdunia
webdunia
webdunia

ಬಿಎಸ್‌ವೈ ಬೆಂಬಲವಿದೆ ಎಂದು ಸೊಸೆಗೆ ಕಿರುಕುಳ ನೀಡಿದ ಮಾವ

ಬಿಎಸ್‌ವೈ ಬೆಂಬಲವಿದೆ ಎಂದು ಸೊಸೆಗೆ ಕಿರುಕುಳ ನೀಡಿದ ಮಾವ
ಶಿವಮೊಗ್ಗ , ಮಂಗಳವಾರ, 18 ನವೆಂಬರ್ 2014 (15:25 IST)
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲವಿದೆ ಎಂದು ಹೇಳಿ ಸೊಸೆಗೆ ಮಾವನೊಬ್ಬ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.
 
ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖಂಡರಾಗಿರುವ ಮಾವ ಪ್ರತಿನಿತ್ಯ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದುದಲ್ಲದೇ ದೈಹಿಕವಾಗಿ ಕೂಡಾ ಹಲ್ಲೆ ನಡೆಸುತ್ತಿದ್ದಾರೆ ಎಂದು ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ.
 
ನನಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲವಿರುವುದರಿಂದ ಯಾವ ಕಡೆ ದೂರು ನೀಡಿದರು ಯಾರು ನನ್ನ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮಾವ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ಸೊಸೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. 

Share this Story:

Follow Webdunia kannada