Webdunia - Bharat's app for daily news and videos

Install App

ಯದುವೀರ್ ಪಟ್ಟಾಭಿಷೇಕ: ವಿಧಿ-ವಿಧಾನಗಳು ನಡೆದು ಬಂದ ಹಾದಿ

Webdunia
ಗುರುವಾರ, 28 ಮೇ 2015 (13:31 IST)
ಸ್ವಾತಂತ್ರ್ಯ ಪಡೆದ ಬಳಿಕ ಮೈಸೂರು ರಾಜ ಮನೆತನದಲ್ಲಿ 2ನೇ ಬಾರಿಗೆ ಪಟ್ಟಾಭಿಷೇಕ ನಡೆದಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಅಧಿಕೃತವಾಗಿ ಯದುವಂಶದ 27ನೇ ಅರಸರಾಗಿ ಸಿಂಹಾಸನ ಏರಿದ್ದಾರೆ. 
 
ಹಿನ್ನೆಲೆ: 40 ವರ್ಷಗಳ ಬಳಿಕ ಈ ಪಟ್ಟಾಭಿಷೇಕ ಕಾರ್ಯಕ್ರಮ ನಡೆದಿದ್ದು, ಇದಕ್ಕೂ ಮುನ್ನ 1974ರಲ್ಲಿ ರಾಣಿ ಪ್ರಮೋದಾದೇವಿ ಅವರ ಪತಿ ಶ್ರೀಕಂಠದತ್ತ ಒಡೆಯರ್ ಅವರ ಪಟ್ಟಾಭಿಷೇಕ ನಡೆದಿತ್ತು. 
 
ಕಾರ್ಯಕ್ರಮದ ಸ್ವರೂಪ: ಈ ಪಟ್ಟಾಭಿಷೇಕ ಸಂಭ್ರಮವು ಅರಮನೆಯಲ್ಲಿ ಇಂದು ಮರುಕಳಿಸಿತ್ತು. ಬೆಳಗ್ಗೆ 9.30ರಿಂದ 10.38ರ ವೇಳೆಯ ನಡುವೆ ನಡೆದ ಮುಹೂರ್ತದಲ್ಲಿ ಯದುವೀರ್ ಅವರು ಭದ್ರಾಸನ ಅಲಂಕರಿಸುವ ಮೂಲಕ ಸಿಂಹಾನ ಏರಿದರು. ರಾಜಮಾತೆ ಪ್ರವೋದಾದೇವಿ ಸಮ್ಮುಖದಲ್ಲಿ ರಾಜಪುರೋಹಿತರು ಪಟ್ಟಾಭಿಷೇಕರ ವಿಧಿವಿಧಾನಗಳನ್ನು ನೆರವೇರಿಸಿದರು. ಯದುವೀರರ ಸಂಪೂರ್ಣವಿವರವಿದ್ದ ಚಿನ್ನದ ಬಾಸಿಂಗವನ್ನು ಪುರೋಹಿತರು ಕಟ್ಟಿದರು. ಈ ಮೂಲಕ 27ನೇ ಉತ್ತರಾಧಿಕಾರಿಯಾಗಿ ಯದುವೀರ್ ಪಟ್ಟಕ್ಕೆ ಏರುವ ಮೂಲಕ 41 ವರ್ಷಗಳ ಬಳಿಕ ಐತಿಹಾಸಿಕ ಕ್ಷಣಕ್ಕೆ ಮೈಸೂರು ಅರಮನೆ ಸಾಕ್ಷಿಯಾಯಿತು. ಈ ಮೂಲಕ ರಾಜವಂಶದ ನೂತನ ಅರಸರಾದರು.
 
ಇಂದು ಮುಂಜಾನೆಯೇ ಆರಂಭವಾದ ಸಂಪ್ರಾದಾಯಿಕ ವಿಧಿವಿಧಾನಗಳು ಗುರುಗಳ ಪಾದಪೂಜೆಯೊಂದಿಗೆ ಚಾಲಿತವಾದವು. ಅರಮನೆಯ ಗುರು ಪುರೋಹಿತರಿಗೆ ಗುರುವಿಗೆ ದಶ ದಾನ ಕಾರ್ಯಕ್ರಮ ನಡೆಸಿಕೊಟ್ಟ ಯದುವೀರ್, ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ಬಳಿಕ ಯದುವೀರ್ ಅವರಿಗೆ ಸಪ್ತ ನದಿಗಳ ನೀರನ್ನು ಪೋಷಿಸಲಾಯಿತು. ಈ ವೇಳೆ ಶೃಂಗೇರಿಯ ಶಾರದಾ ಮಾತೆ, ನಂಜನಗೂಡಿನ ಶ್ರೀ ಹರಿಕೇಶ್ವರ ಸ್ವಾಮಿ, ಮೇಲುಕೋಟೆಯ ಚೆಲುವನಾರಾಯಣಸ್ವಾಮಿ, ಚಾಮುಂಡಿದೇವಿ, ಅರಮನೆಯ ಒಳಗಿನ 16 ದೇವತೆಗಳ ಹಾಗೂ ಪರಕಾಲ ಮಠದ ಪ್ರಸಾದವನ್ನು ಮಹಾರಾಜರಿಗೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ವೇದಾಶೀರ್ವಾದ ಮಾಡಿ ರಾಜರಿಗೆ ಆರತಿ ಬೆಳಗಲಾಯಿತು. ಬಳಿಕ ಆಶೀರ್ವಾದಕ್ಕೆ ಅವಕಾಶ ಮಾಡಿಕೊಡಲಾಯಿತು. 
 
ಈ ವೇಳೆ ಮಾಜಿ ಪ್ರಧಾನಿ ದೇವೇಗೌಡ, ಮೈಸೂರು ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್, ಸಚವರುಗಳಾದ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಮಹಾದೇವಪ್ರಸಾದ್, ರೋಷನ್ ಬೇಗ್, ಸಂಸದ ಪ್ರತಾಪ್ ಸಿಂಹ, ರಾಜ್ಯದ ಉಪ ಲೋಕಾಯುಕ್ತ ಡಾ.ಸುಭಾಷ್.ಡಿ.ಅಡಿ ಸೇರಿದಂತೆ ಇತರೆ ಗಣ್ಯರು ಯದುವೀರ್ ಅವರಿಗೆ ಶುಭಕೋರಿದರು.  
 
ಇಂದು ನಡೆಯಲಿರುವ ಇತರೆ ಕಾರ್ಯಕ್ರಮಗಳು: 
ಪಟ್ಟಾಭಿಷೇಕ ಮುಗಿದ ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಯದುವೀರ್ ವಿಶೇಷ ಕಾರಿನಲ್ಲಿ ಆಗಮಿಸಿ ಅರಮನೆ ಆವರಣದಲ್ಲಿರುವ 16 ದೇವರಿಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮೆರವಣಿಗೆ ಮೂಲಕ ದರ್ಬಾರ್ ಹಾಲ್ ತೆರಳಲಿದ್ದು, ಸಂಜೆ 7 ಗಂಟೆಗೆ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಸಾರ್ವಜನಿಕರು ಮುಕ್ತವಾಗಿ ದರ್ಶನ ಪಡೆಯಬಹುದಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments