Webdunia - Bharat's app for daily news and videos

Install App

ಭ್ರೂಣ ಹತ್ಯೆ ವಿವಾದ: ಇಬ್ರಾಹಿಂ ಪುತ್ರಿಗೆ ಮಹಿಳಾ ಆಯೋಗ ಭರವಸೆ

Webdunia
ಮಂಗಳವಾರ, 3 ಜನವರಿ 2017 (17:36 IST)
ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ ಇಬ್ರಾಹಿಂ ಕುಟುಂಬದ ಮೇಲೆ ಮೇಲೆ ಭ್ರೂಣ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಯಾರೇ ತಪ್ಪು ಮಾಡಿದರು, ಅದು ತಪ್ಪೇ. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭರವಸೆ ನೀಡಿದ್ದಾರೆ. 
ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗಕ್ಕೆ ದೂರು ನೀಡಿದರೆ ದೂರು ಸ್ವೀಕರಿಸುತ್ತೇವೆ. ಇಲ್ಲದಿದ್ದರೆ, ನಾವೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದರು. 
 
ಇಬ್ರಾಹಿಂ ಪುತ್ರಿ ಇಫಾ ಮತ್ತು ಅವರ ತಮ್ಮನ ಪುತ್ರ ಸಿ.ಎಂ. ಫೈಸಲ್ ಏಳು ತಿಂಗಳ ಹಿಂದೆ  ಪ್ರೀತಿಸಿ ಮದುವೆಯಾಗಿದ್ದರು. ಈ ಮದುವೆಗೆ ಇಬ್ರಾಹಿಂ ಕುಟುಂಬ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು. ಇಫಾ ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ನಿನ್ನನ್ನು ನೋಡಬೇಕು ಅನ್ನಿಸುತ್ತದೆ ಎಂದು ಹೇಳಿ ಖಾದರ್ ಪತ್ನಿ ಕಳೆದ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಆಕೆಯನ್ನು ಮನೆಗೆ ಕರೆಸಿಕೊಂಡಿದ್ದರು. ಮೊನ್ನೆ ಆಕೆಯ ಪತಿ ತವರುಮನೆಗೆ ಬಿಡಲು ಬಂದಾಗ ಆತನ ಮೇಲೆ ಹಲ್ಲೆ ಕೂಡ ನಡೆದಿತ್ತು.
 
ನಿನ್ನೆ ಮುಂಜಾನೆ ಇಫಾಗೆ ಆಕೆಯ ತಾಯಿ ಹಣ್ಣಿನ ಜ್ಯೂಸ್ ನೀಡಿದ್ದರು. ಬಳಿಕ ಆಕೆಗೆ ಹೊಟ್ಟೆ ನೋವು ಕಂಡುಬಂದಿತ್ತು. ಆಕೆ ಪತಿಗೆ ಫೋನ್ ಕರೆ ಮಾಡಿ ತಕ್ಷಣ ಬರುವಂತೆ ಹೇಳಿದ್ದಾಳೆ. ಆತ ಮೈಸೂರಿನಿಂದ ಬೆಂಗಳೂರಿಗೆ ಬರುವಷ್ಟರಲ್ಲಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹಣ ನೀಡಿ ಗರ್ಭಪಾತ ಮಾಡಿಸಿದ್ದಾರೆ ಎಂದು ಇಬ್ರಾಹಿಂ ಸೋದರ ಖಾದರ್ ಆರೋಪಿಸಿದ್ದಾರೆ. 
 
ನಮ್ಮ (ಪತಿಯ) ಕುಟುಂಬಕ್ಕೆ ಮಾಹಿತಿ ನೀಡದೆ ಸೊಸೆಯ ಗರ್ಭಪಾತ ಮಾಡಿಸಲಾಗಿದೆ. ಈ ಕುರಿತು ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಖಾದರ್ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

13ರಂದು ಕರ್ನಾಟಕ ಬಂದ್ ಮಾಡಿಯೇ ಸಿದ್ದ: ಹೋರಾಟದಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದ ವಾಟಾಳ್

ಕಾವೇರಿ ನೀರು ಹಂಚಿಕೆ ವಿವಾದ: ವಿಜಯ್‌ಗೆ ಮಹತ್ವದ ಪತ್ರ ಬರೆದ ಬಿವೈ ವಿಜಯೇಂದ್ರ

ವರುಣಾರ್ಭಟ ನಡುವೆ ಮುಂದಿನ ನಾಲ್ಕು ದಿನ ಉಡುಪಿಯಲ್ಲಿ ಹೇಗಿರಲಿದೆ ಗೊತ್ತಾ ಹವಾಮಾನ

ಪ್ರತಿಯೊಂದು ವರ್ಗವೂ ಪ್ರಧಾನಿ ಮೋದಿಯೊಂದಿಗಿದೆ ಎಂಬ ನಂಬಿಕೆ: ಪಿಯೂಷ್ ಗೋಯಲ್

ಕರಾವಳಿಯಲ್ಲಿ ಭಾರೀ ಮಳೆ, ನೇತ್ರಾವತಿ ನೀರಿನ ಮಟ್ಟ ಎಷ್ಟು ಏರಿಕೆಯಾಗಿದೆ ಗೊತ್ತಾ

ಮುಂದಿನ ಸುದ್ದಿ
Show comments