Select Your Language

Notifications

webdunia
webdunia
webdunia
webdunia

ದೆವ್ವವೆಂದು ಭ್ರಮಿಸಿ ಮಹಿಳೆಯ ಕೊಲೆ

ದೆವ್ವವೆಂದು ಭ್ರಮಿಸಿ ಮಹಿಳೆಯ ಕೊಲೆ
ಜಮಶೆಡ್‌ಪುರ್ , ಶನಿವಾರ, 12 ಮಾರ್ಚ್ 2016 (13:05 IST)
ಕರಾಳ ರಾತ್ರಿಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ದೆವ್ವವೆಂದು ಭಾವಿಸಿ ಮಾರಣಾಂತಿಕ ಹಲ್ಲೆ ಮಾಡಿ ಸಾಯಿಸಿದ  ದಾರುಣ ಘಟನೆ ಛತ್ತೀಸ್‌ಘಡದ ಪೂರ್ವ ಸಿಂಗ್ಭುಮ್ ಜಿಲ್ಲೆಯ ನನ್ಸೊಲ್‌ ಗ್ರಾಮದಲ್ಲಿ ನಡೆದಿದೆ.

ಮೃತಳನ್ನು 48ವರ್ಷದ ಅಹಲ್ಯ ಸಿಂಗ್ ಎಂದು ಗುರುತಿಸಲಾಗಿದ್ದು ಗುರುವಾರ ತಡರಾತ್ರಿ ಅಹಲ್ಯ ತನ್ನ ತವರೂರಿನಿಂದ ಅತ್ತಿಗೆ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕಳೆದ 9 ವರ್ಷಗಳಿಂದ ಅಹಲ್ಯ ತನ್ನ ವಿಧವೆ ಅತ್ತಿಗೆಯೊಂದಿಗೆ ವಾಸವಾಗಿದ್ದಳು. 
 
ಆರೋಪಿಯನ್ನು 52 ವರ್ಷದ ಜೋಧಾ ಸಿಂಗ್ ಎಂದು ಗುರುತಿಸಲಾಗಿದ್ದು ರಸ್ತೆಯಲ್ಲಿ ಹೋಗುತ್ತಿದ್ದಾಗ ನನ್ನ ಬಳಿ ಬಂದ ಮಹಿಳೆಯ ಆಕೃತಿಯೊಂದು ನನ್ನನ್ನು ಸ್ಪರ್ಶಿಸಿತು. ಕತ್ತಲೆಯಲ್ಲಿ ಅದು ಭೂತವೆಂದು ಭಾವಿಸಿ ನನ್ನನ್ನು ನಾನು ರಕ್ಷಿಸಿಕೊಳ್ಳಲು ನನ್ನ ಕೈಯಲ್ಲಿದ್ದ ಲಾಠಿಯಿಂದ ಥಳಿಸಿದೆ ಎಂದಾತ ವಿಚಾರಣೆ ವೇಳೆ ಹೇಳಿದ್ದಾನೆ.
 
ಥಳಿತದಿಂದಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಅಧಿಕಾರಿ ವೀರೇಂದ್ರ ತೊಪ್ಪೋ ತಿಳಿಸಿದ್ದಾರೆ.
 
ಅಹಲ್ಯ ಕುಟುಂಬದ ಸದಸ್ಯರು ಸ್ಥಳಕ್ಕೆ ಬಂದಾಗ ಆಕೆಯ ಮೆದುಳಿನ ಭಾಗಗಳು ಸಹ ನೆಲದಲ್ಲಿ ಬಿದ್ದಿದ್ದವು. ಆರೋಪಿ ಶವದ ಬಳಿ ಕುಳಿತಿದ್ದ. ಗ್ರಾಮಸ್ಥರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಾದ ಆತ ಪ್ರತಿರೋಧ ಒಡ್ಡದೆ ಸುಮ್ಮನೆ ಕುಳಿತಿದ್ದ ಎಂದು ಪೊಲೀಸರು ಹೇಳಿದ್ದಾರೆ. 

Share this Story:

Follow Webdunia kannada