Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ: ಮಹಿಳೆಯ ಸರ ಅಪಹರಣ

ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ: ಮಹಿಳೆಯ ಸರ ಅಪಹರಣ
ಬೆಂಗಳೂರು: , ಬುಧವಾರ, 17 ಫೆಬ್ರವರಿ 2016 (11:38 IST)
ಬೆಂಗಳೂರಿನಲ್ಲಿ ಸರಗಳ್ಳರ ಅಟ್ಟಹಾಸ ಮುಂದುವರಿದಿದ್ದು, ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಮಹಿಳೆಯ ಸರಗಳ್ಳತನ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 55 ವರ್ಷದ ಯಶೋದಮ್ಮರ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ನಂದಿನ ಲೇಔಟ್ ಎಪಿಎಂಸಿ ವಸತಿಗೃಹದ ಬಳಿ ಇದು ಸಂಭವಿಸಿದ್ದು, ಯಶೋದಮ್ಮ ರಸ್ತೆಯಲ್ಲಿ ನಡೆದುಹೋಗುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.
 
ಬೆಂಗಳೂರಿನಲ್ಲಿ ಒಂದು ಗಂಟೆಯಲ್ಲಿ 12  ಸರಗಳ್ಳತನಗಳು ನಡೆದ ಪ್ರಕರಣಗಳು ಕಳೆದ ಜೂನ್‌ನಲ್ಲಿ ವರದಿಯಾಗಿತ್ತು.  ಪಲ್ಸರ್ ಬೈಕ್‌ನಲ್ಲಿ ಬರುವ ಸರಗಳ್ಳರು ಸರ ಎಗರಿಸಿ ವೇಗವಾಗಿ ನಾಪತ್ತೆಯಾಗುವ ಪ್ರಸಂಗಗಳು ಸಾರ್ವಜನಿಕರನ್ನು ನಿದ್ದೆಗೆಡಿಸಿದೆ. ಕಾಮಾಕ್ಷಿಪಾಳ್ಯ, ವಿಜಯನಗರ, ಬಸವೇಶ್ವರನಗರ, ಗಿರಿನಗರ, ಕೆಂಗೇರಿ ಮುಂತಾದ ಕಡೆ ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
 
ಸರಗಳ್ಳತನಕ್ಕೆ ಒಳಗಾದವರು ಪೊಲೀಸರಿಗೆ ದೂರು ನೀಡಿ ಪೊಲೀಸರು ಸ್ಥಳಕ್ಕೆ ಧಾವಿಸಿಬರುವಷ್ಟರಲ್ಲಿ ಕಳ್ಳರು ಕ್ಷಣಾರ್ಧದಲ್ಲಿ ಪಲ್ಸರ್ ಬೈಕಿನಲ್ಲಿ ಪರಾರಿಯಾಗುತ್ತಿದ್ದರು.
 ಸರಗಳ್ಳರ ಕಣ್ಣಾಮುಚ್ಚಾಲೆ ಆಟದಿಂದ  ಬೆಂಗಳೂರು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಸರಗಳ್ಳರು ಹೆಚ್ಚಾಗಿ ವೃದ್ಧೆಯರ ಸರಗಳನ್ನೇ ಅಪಹರಿಸುವುದು ಕಂಡುಬಂದಿದ್ದು, ಅವರ ಸುಳಿವು ಮಾತ್ರ ಪೊಲೀಸರಿಗೆ ಸಿಗುತ್ತಿಲ್ಲ.  
 

Share this Story:

Follow Webdunia kannada