ಗೃಹ ಕಚೇರಿ ಕೃಷ್ಣಾದಲ್ಲಿ ವೈನ್ ಮರ್ಚೆಂಟ್ಸ್ ಅಸೋಷಿಯೇಷನ್ ನಿಯೋಗ ಸಿಎಂರನ್ನ ಭೇಟಿ ಮಾಡಿದ್ದಾರೆ.ರಾಜ್ಯದಲ್ಲಿ 2863 ವೈನ್ ಅಂಗಡಿಗಳು ಹೆಚ್ಚಾಗಿದ್ದು, ಮಾರಾಟ ಕಡಿಮೆಯಾಗಿದೆ.ಡಿಸ್ಟಿಲರಿಗಳು, ಅಬಕಾರಿ, ಚಿಲ್ಲರೆ ವ್ಯಾಪಾರಿಗಳ ಮಧ್ಯೆ ಸಮನ್ವಯದ ಕೊರತೆಯಾಗಿದೆ.ಸಮನ್ವಯ ಸಮಿತಿ ರಚಿಸಿದರೆ ಅನುಕೂಲವಾಗಲಿದೆ ಎಂದು ನಿಯೋಗ ಮನವಿ ಮಾಡಿದೆ.ಅಧಿವೇಶನದ ನಂತರ ಸಭೆ ಕರೆದು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಭರವಸೆವನ್ನ ಸಿಎಂ ನೀಡಿದ್ದಾರೆ.ಸೋರಿಕೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ರು.ಈ ವೇಳೆಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.