ಬೆಂಗಳೂರು: ಕೆಲವರು ಪ್ರಾಣಿಗಳನ್ನು ತಮ್ಮ ಸ್ವಂತ ಮಕ್ಕಳಂತೇ ನೋಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪತಿ ಮಹಾಶಯನಿಗೆ ಈಗ ಅದುವೇ ಮುಳುವಾಗಿದೆ. ಇದೇ ಕಾರಣಕ್ಕೆ ಆತನ ಪತ್ನಿ ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಬೆಂಗಳೂರಿನ ಮಹಿಳೆಯೊಬ್ಬರು ತನ್ನ ಗಂಡನಿಗೆ ತನಗಿಂದ ಸಾಕು ಬೆಕ್ಕಿನ ಮೇಲೇ ಪ್ರೀತಿ ಹೆಚ್ಚು. ನನ್ನನ್ನು ಕಡೆಗಣಿಸಿ ಬೆಕ್ಕಿನ ಮೇಲೆ ಹೆಚ್ಚಿನ ಗಮನ ಕೊಡುತ್ತಾನೆ ಎಂಬ ಕಾರಣಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಯಾವಾಗ ನೋಡಿದರೂ ಗಂಡನ ಗಮನವೆಲ್ಲಾ ಬೆಕ್ಕಿನ ಮೇಲೆಯೇ ಇರುತ್ತದೆ ಎಂದು ಪತ್ನಿ ದೂರಿದ್ದಾಳೆ.
ಕೇವಲ ಗಂಡ ಮಾತ್ರವಲ್ಲ, ಅತ್ತೆ ಮಾವನ ವಿರುದ್ಧವೂ ಮಹಿಳೆ ಪ್ರಕರಣ ದಾಖಲಿಸಿದ್ದಾಳೆ. ಪ್ರಕರಣ ಹೈಕೊರ್ಟ್ ಮೆಟ್ಟಿಲೇರಿದ್ದು ಹೈಕೋರ್ಟ್, ಮಹಿಳೆಯ ಪತಿ, ಅತ್ತೆ, ಮಾನವ ವಿರುದ್ಧ ದೌರ್ಜನ್ಯ ಪ್ರಕರಣಕ್ಕೆ ತಡೆ ನೀಡಿದೆ.
ಪತ್ನಿಯ ಕೇಸ್ ಗೆ ತಡೆ ನೀಡುವಂತೆ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದ. ಅದರಂತೆ ಪತಿ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಪತ್ನಿಗೆ ನೋಟಿಸ್ ನೀಡಿದೆ. ಅಸಲಿಗೆ ಇಲ್ಲಿ ವರದಕ್ಷಿಣೆ ಕಿರುಕುಳ ನೀಡಿಲ್ಲ. ಬೆಕ್ಕು ಮಹಿಳೆಗೆ ಪರಚಿತ್ತಷ್ಟೇ. ಹೀಗಾಗಿ ವರದಕ್ಷಿಣೆ ಕಿರುಕುಳ ಕೇಸ್ ಕೈ ಬಿಡುವಂತೆ ದೂರುದಾರ ಪತಿ ಆಗ್ರಹಿಸಿದ್ದ.