Webdunia - Bharat's app for daily news and videos

Install App

ಸಿಪಿ ಯೋಗೇಶ್ವರ್ ಫ್ಯಾಮಿಲಿ ಮ್ಯಾಟರ್: ರಣದೀಪ್ ಸುರ್ಜೇವಾಲಗೆ ದೂರು ಕೊಟ್ಟ ಪತ್ನಿ

Krishnaveni K
ಬುಧವಾರ, 9 ಜುಲೈ 2025 (15:33 IST)
ಬೆಂಗಳೂರು: ಚನ್ನಪಟ್ಟಣ ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್ ವಿರುದ್ಧ ಅವರ ಮಾಜಿ ಪತ್ನಿ ಮಾಳವಿಕಾ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಗೆ ದೂರು ಕೊಟ್ಟಿದ್ದಾರೆ. ಇದರೊಂದಿಗೆ ಸಿಪಿ ಯೋಗೇಶ್ವರ್ ಫ್ಯಾಮಿಲಿ ವಿಚಾರ ಹೈಕಮಾಂಡ್ ಅಂಗಳಕ್ಕೆ ಬಂದು ನಿಂತಿದೆ.

ಮಾಳವಿಕಾ-ಯೋಗೇಶ್ವರ್ ಪುತ್ರಿ ನಿಶಾ ಕೂಡಾ ಕೆಲವು ಸಮಯದ ಹಿಂದೆ ಕಾಂಗ್ರೆಸ್ ಗೆ ಸೇರ್ಪಡೆಯಾದವರು. ಆಗಲೇ ಅವರು ತಂದೆ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ನಮಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೀಗ ನಿಶಾ ತಮ್ಮ ತಾಯಿ ಮಾಳವಿಕಾ ಜೊತೆಗೂಡಿ ರಣದೀಪ್ ಸುರ್ಜೇವಾಲ ಭೇಟಿ ಮಾಡಿದ್ದು ಯೋಗೇಶ್ವರ್ ವಿರುದ್ಧ ದೂರು ನೀಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಳವಿಕಾ ‘ನನಗೆ ಫ್ಯಾಮಿಲಿ ವಿಚಾರವನ್ನು ಬೀದಿಗೆ ತರಲು ಇಷ್ಟವಿರಲಿಲ್ಲ. ಆದರೆ ಈಗ ನನ್ನ ಮಕ್ಕಳಿಗೆ ಉಸಿರಾಡಲು ಕಷ್ಟವಾಗುವ ಪರಿಸ್ಥಿತಿಯಾಗಿದೆ. ಹೀಗಾಗಿ ಅನಿವಾರ್ಯವಾಗಿ ದೂರು ಕೊಡಬೇಕಾಯಿತು. ನನಗೆ ಹೈಕಮಾಂಡ್ ನಾಯಕರ ಮೇಲೆ, ಪಕ್ಷದ ಮೇಲೆ ಅಪಾರ ಗೌರವ ಮತ್ತು ನಂಬಿಕೆಯಿದೆ. ಅವರು ನಮಗೆ ಸಮಯ ಕೊಟ್ಟು ಮಾತುಗಳನ್ನು ಕೇಳಿಸಿಕೊಂಡಿದ್ದಾರೆ’ ಎಂದಿದ್ದಾರೆ.

ಸಿಪಿ ಯೋಗೇಶ್ವರ್ ಅವರ ಮೊದಲ ಪತ್ನಿ ಮಾಳವಿಕಾ. ಈಗ ಯೋಗೇಶ್ವರ್ ಶೀಲಾ ಎಂಬವನ್ನು ಎರಡನೇ ಮದುವೆಯಾಗಿದ್ದಾರೆ. ಮೊದಲ ಪತ್ನಿ, ಮಕ್ಕಳೊಂದಿಗೆ ಕೌಟುಂಬಿಕ ಜಗಳ ಗುಟ್ಟಾಗೇನೂ ಉಳಿದಿಲ್ಲ. ಈಗ ಹೈಕಮಾಂಡ್ ಗೆ ದೂರು ಹೋಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗುಜರಾತ್‌: ಸೇತುವೆ ಮುರಿದು ನದಿಗೆ ಬಿದ್ದ ವಾಹನಗಳು, 9ಮಂದಿ ಸಾವು

ಮುಂಬೈ ದಾಳಿಯ ಮಾಸ್ಟರ್ ಮೈಂಡ್‌ ತಹವ್ವುರ್ ರಾಣಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ನಮ್ಮ ಪಕ್ಷದ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಬಿಕೆ ಹರಿಪ್ರಸಾದ್ ಗೆ ಟಾಂಗ್ ಕೊಟ್ಟ ವಿಜಯೇಂದ್ರ

ಜನೌಷಧಿ ಸರ್ಕಾರೀ ಆಸ್ಪತ್ರೆ ಬಳಿ ಬೇಡ ಅಷ್ಟೇ ಎಂದ ಸಚಿವ ಶರಣಪ್ರಕಾಶ್ ಪಾಟೀಲ್: ನೆಟ್ಟಿಗರ ಪ್ರತಿಕ್ರಿಯೆ ನೋಡಿ

Arecanut Price: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

ಮುಂದಿನ ಸುದ್ದಿ
Show comments