Select Your Language

Notifications

webdunia
webdunia
webdunia
webdunia

ಬೀದರ್: ಚಟ್ನಳ್ಳಿ ಗ್ರಾಮಸ್ಥರ ಗೋಳು ಕೇಳೋತ್ಯಾರು... ?

ಬೀದರ್: ಚಟ್ನಳ್ಳಿ ಗ್ರಾಮಸ್ಥರ ಗೋಳು ಕೇಳೋತ್ಯಾರು... ?
ಬೀದರ್ , ಬುಧವಾರ, 17 ಡಿಸೆಂಬರ್ 2014 (18:00 IST)
ಅಧಿಕಾರಿಗಳು ಎಂದೋ ಮಾಡಿದ ತಪ್ಪಿನಿಂದ ತಾಲೂಕಿನ ಚಿಟ್ನಳ್ಳಿ ಗ್ರಾಮಸ್ಥರು ಪ್ರಸ್ತುತ ಪೇಚಿಗೆ ಸಿಲುಕಿದ್ದು, ದಾರಿ ಕಾಣದವರಂತೆ
ಪರಿತಪಿಸುತ್ತಿದ್ದಾರೆ. 
 
ಹೌದು, ಇದೊಂದು ಮನಕಲಕುವ ಸಂಗತಿಯಾಗಿದ್ದು, ಅಧಿಕಾರಿಗಳ ತಪ್ಪಿನಿಂದ ಈ ಊರಿನ ಗ್ರಾಮಸ್ಥರು ನಿದ್ದೆಗೆಟ್ಟಿದ್ದು, ಸರ್ಕಾರದ ಪ್ರತಿನಿಧಿಗಳ ಮೊರೆ ಹೋಗಿದ್ದಾರೆ. ವಿಷಯವೆಂದರೆ 1974-75ರಲ್ಲಿ ಸರ್ಕಾರವೇ ಮಂಜೂರು ಮಾಡಿದ್ದ ಆಸ್ತಿ ಪ್ರಸ್ತುತ ಸರ್ಕಾರದ ಪಾಲಾಗಿದ್ದು, ಇದರಿಂದ ಊರಿನ ಗ್ರಾಮಸ್ಥರು ಬೀದಿಗೆ ಬೀಳುವಂತಹ ಸಂಕಷ್ಟ ಎದುರಾಗಿದೆ. 
 
ಇನ್ನು ಈ ಪೇಚಿಗೆ ಕಾರಣವೆಂದರೆ ಅಂದು ಈ ಆಸ್ತಿ ಸರ್ಕಾರದ ಆಸ್ತಿಯಾಗಿತ್ತು. ಅಲ್ಲದೆ ವಕ್ಫ್ ಮಂಡಳಿಗೆ ಸೇರಿತ್ತು. ಆದರೆ ಆಸ್ತಿಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿದ ಬಳಿಕವೂ ಕೂಡ ಭೂ ಹಿಡುವಳಿದಾರರ ಪಹಣಿಯಲ್ಲಿ ಈ ವಕ್ಫ್ ಸಂಸ್ಥೆಯ ಹೆಸರು ನಮೂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ವಕ್ಫ್ ಮಂಡಳಿಯ ಅಧ್ಯಕ್ಷರಾಗಿರುವ ಸಚಿವ ಕಮರುಲ್ ಇಸ್ಲಾಂ ಅವರು ವಕ್ಫ್ ಮಂಡಳಿಯ ಹೆಸರು ನಿಮ್ಮ ಪಹಣಿಗಳಲ್ಲಿ ಇಂದಿಗೂ ಬರುತ್ತಿದೆ. ಅಲ್ಲದೆ ಇದು ಮಂಡಳಿಯದ್ದೇ ಆಗಿದೆ. ಇದಕ್ಕೆ ದಾಖಲೆಗಳೂ ಇವೆ. ಹಾಗಾಗಿ ನೀವು ಆಸ್ತಿಯನ್ನು ಸರ್ಕಾರಕ್ಕೆ ಬಿಟ್ಟು ಕೊಡಬೇಕಿದೆ ಎಂದು ಖಡಕ್ಕಾಗಿ ಸೂಚಿಸಿದ್ದಾರೆ ಎನ್ನಲಾಗಿದೆ. ಇಷ್ಟಲ್ಲದೆ ಜಿಲ್ಲೆಯ ಉನ್ನತ ಅಧಿಕಾರಿಗಳ ತಂಡ ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾರ್ಯಾರಂಭಿಸಿದ್ದಾರೆ. ಇದರಿಂದ ಕಂಗೆಟ್ಟಿರುವ ಗ್ರಾಮಸ್ಥರು ಬೀದಿಗಿಳಿಯುವ ಹಂತಕ್ಕೆ ತಲುಪಿದ್ದಾರೆ. 
 
ಇನ್ನು ಗ್ರಾಮಸ್ಥರ ಒಟ್ಟು ಆಸ್ತಿ 960 ಎಕರೆ ಇದ್ದು, ಎಲ್ಲವೂ ಕೂಡ ವಕ್ಫ್ ಮಂಡಳಿಗೆ ಸೇರಲಿದೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ, ಪಟ್ಟು ಬಿಡದ ಗ್ರಾಮಸ್ಥರು, ಸರ್ಕಾರ ಇದನ್ನು ಪರಿಹರಿಸಿಕೊಡಬೇಕು. ಇಲ್ಲವಾದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. 

Share this Story:

Follow Webdunia kannada