Daily Horoscope
✕

ರಾಜ್ಯಪಾಲರು ಇಂದು ಅಧಿವೇಶನಕ್ಕೆ ಬರದೇ ಇದ್ದರೆ ಏನಾಗುತ್ತದೆ

Krishnaveni K
ಗುರುವಾರ, 22 ಜನವರಿ 2026 (08:46 IST)
ಬೆಂಗಳೂರು: ಕೇಂದ್ರದ ವಿಬಿ ಜಿ ರಾಮ್ ಜಿ ಬಿಲ್ ವಿರೋಧಿಸಿ ರಾಜ್ಯ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಲು ರಾಜ್ಯಪಾಲ ಥ್ಯಾವರ್ ಚಂದ್ರ ಗೆಹ್ಲೋಟ್ ನಿರಾಕರಿಸಿದ್ದಾರೆ. ಒಂದು ವೇಳೆ ಅವರು ಇಂದು ಸದನಕ್ಕೆ ಬಾರದೇ ಇದ್ದರೆ ಏನಾಗುತ್ತದೆ?

ರಾಜ್ಯಪಾಲರಿಗೆ ಇಂದು ಮಾಡಬೇಕಿರುವ ಭಾಷಣವನ್ನು ನಿನ್ನೆಯೇ ಕಳುಹಿಸಿಕೊಡಲಾಗಿತ್ತು. ಈ ಭಾಷಣದಲ್ಲಿ ಜಿ ರಾಮ್ ಜಿ ಬಿಲ್ ಬಗ್ಗೆ ಟೀಕೆ ಮಾಡಲಾಗಿದೆ. ಭಾಷಣದಲ್ಲಿರುವ ಕೆಲವು ಅಂಶಗಳನ್ನು ತಿದ್ದುಪಡಿ ಮಾಡದೇ ಭಾಷಣ ಮಾಡಲ್ಲ ಎಂದು ರಾಜ್ಯಪಾಲರು ಸೂಚನೆ ನೀಡಿದ್ದರು.

ಇದರಿಂದ ಈಗ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಭೀತಿ ಎದುರಾಗಿದೆ. ಒಂದು ವೇಳೆ ರಾಜ್ಯಪಾಲರು ಸದನಕ್ಕೆ ಬಾರದೇ ಹೋದಲ್ಲಿ ಸದನ ನಡೆಯದೇ ಹೋಗಬಹುದು. ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಮಾತನಾಡುವುದು ಅವರ ಕರ್ತವ್ಯಗಳಲ್ಲಿ ಒಂದು. ಹೀಗಾಗಿ ಅವರು ಸದನಕ್ಕೆ ಬಾರದೇ ಇದ್ದರೆ ರಾಜ್ಯ ಸರ್ಕಾರ ಕೋರ್ಟ್ ಮೊರೆ ಹೋಗಬಹುದು. ಇದರೊಂದಿಗೆ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ತಿಕ್ಕಾಟ ಹೆಚ್ಚಾಗಬಹುದು. ಸಚಿವ ಸಂಪುಟ ಕರೆದು ರಾಜ್ಯಪಾಲರ ವಿರುದ್ಧ ನಿರ್ಣಯ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಜೊತೆಗೆ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಬಹುದು. ಹೀಗಾಗಿ ಇಂದು ಏನಾಗಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ಮಿಂದ ಇಡೀ ದೇಶವೇ ಹೆಮ್ಮೆಪಡುತ್ತಿದೆ: ವಿಮಾನ ಅಪಘಾತ ತಪ್ಪಿಸಿದ ಸಾಹಸಿ ಪೈಲಟ್‌ಗೆ ಕರೆ ಮಾಡಿ ಪ್ರಶಂಸಿಸಿದ ಪ್ರಧಾನಿ ಮೋದಿ Video

ಮಾಂಸಪ್ರಿಯರಿಗೆ ಇಂದು ನಿರಾಸೆ: ಇಂದು ಎಲ್ಲೂ ಮಾಂಸ ಸಿಗಲ್ಲ

ದೇಶದಾದ್ಯಂತ ಇಂದು ನೋ ಯುಪಿಐ ಡೇ: ಶಾಪಿಂಗ್ ಹೋಗುವಾಗ ತಪ್ಪದೇ ನಗದು ತೆಗೆದುಕೊಂಡು ಹೋಗಿ

ಮಾನವೀಯತೆ ಎಂದರೆ ಏನು ಎಂದು ತೋರಿಸಿಕೊಟ್ಟ ಕೋತಿ: Viral video

ಬಿಜೆಪಿ ವಿರುದ್ಧ ಆರೋಪ ಸಾಬೀತುಪಡಿಸದೇ ಇದ್ದರೆ ಸಿ.ಎಂ. ರಾಜೀನಾಮೆ ಕೊಡಲಿ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments