Select Your Language

Notifications

webdunia
webdunia
webdunia
webdunia

ಶೂನ್ಯ ಫಲಿತಾಂಶ ಗಳಿಸಿದ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರ್ಕಾರದ ದ್ವಂದ್ವ ನೀತಿ

ಶೂನ್ಯ ಫಲಿತಾಂಶ ಗಳಿಸಿದ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರ್ಕಾರದ ದ್ವಂದ್ವ ನೀತಿ
ಬೆಂಗಳೂರು , ಗುರುವಾರ, 21 ಮೇ 2015 (12:09 IST)
2014-15ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಪರೀಕ್ಷೆಯಲ್ಲಿ ಕೆಲ ಶಿಕ್ಷಣ ಸಂಸ್ಥೆಗಳು ಶೂನ್ಯ ಫಲಿತಾಂಶ ಘಲಿಸಿದ್ದು, ಇವುಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ರಾಜ್ಯದ ಶಿಕ್ಷಣ ಇಲಾಖೆಯಲ್ಲಿಯೇ ದ್ವಂದ್ವತೆ ತಳೆದಿದೆ. 
 
ಪ್ರಸಕ್ತ ವರ್ಷದ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಶೂನ್ಯ ಫಲಿತಾಂಶ ದಾಖಲಿಸಿರುವ ಪ್ರೌಢಶಾಲೆಗಳ ಮಾನ್ಯತೆ ರದ್ದುಪಡಿಸಲು ಸಾರ್ವಜನಿಕ ಶಿಕ್ಷಣ ಇಳಾಖೆ ನಿರ್ಧರಿಸಿದೆ. ಆದರೆ ಈ ಕ್ರಮಕ್ಕೆ ಮುಂದಾಗಲು ಪದವಿಪೂರ್ವ ಶಿಕ್ಷಣ ಮಂಡಲಿಯು ಕಾಲಾವಕಾಶ ಕೇಳಿದೆ. ಈ ವಿಚಾರಗಳು ಇಲಾಖೆಯ ದ್ವಂದ್ವ ನೀತಿಯನ್ನು ಎತ್ತಿ ತೋರುತ್ತಿವೆ. 
 
10ನೇ ತರಗತಿ ಫಲಿತಾಂಶದಲ್ಲಿ ರಾಜ್ಯದ ಒಟ್ಟು 36 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಅಂತೆಯೇ ಪದವಿ ಪೂರ್ವ ಫಲಿತಾಂಶದಲ್ಲಿಯೂ ಕೂಡ ಇಂತಹ ಯಡವಟ್ಟು ಸಂಭವಿಸಿದ್ದು, 47 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಇವುಗಳ ಪೈಕಿ ಒಂದು ಸರ್ಕಾರಿ ಕಾಲೇಜು ಇದ್ದರೆ, ಮತ್ತೆರಡು ವಿಭಜಿತ ಹಾಗೂ 44 ಖಾಸಗಿ ಕಾಲೇಜುಗಳು ಸೇರಿವೆ. 
 
ಕಳೆದ ಬಾರಿಯೂ ಇಂತಹ ಅಚಾತುರ್ಯಗಳು ದಾಖಲಾಗಿದ್ದವು. ಆದರೆ ತಪ್ಪಿತಸ್ಥ ಶಾಲಾ ಸಂಸ್ಥೆಗಳಿಗೆ ಕೇವಲ ನೋಟಿಸ್ ಜಾರಿಗೊಳಿಸಿ ಕೈ ಬಿಡಲಾಗಿತ್ತು. ಇದರ ಪರಿಣಾಮ ಮತ್ತಷ್ಟು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಬಾರಿ ಮತ್ತೆ ಮೂರು ಸಂಸ್ಥೆಗಳು ಈ ಗುಂಪಿಗೆ ಸೇರಿಕೊಂಡಿವೆ ಎನ್ನಲಾಗುತ್ತಿದೆ. 
 
ಇನ್ನು ಈ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು, ಶಿಕ್ಷಣ ಇಲಾಖೆ ಕ್ರಮ ಫಲಿತಾಂಶಗಳಂತೆಯೇ ಕಳಪೆಯಾಗಿದ್ದು, ಈ ಪರಿಣಾಮ ಕಳೆದ ಹಲವು ವರ್ಷಗಳಿಂದಲೂ ರಾಜ್ಯದ ಹಲವು ಶಿಕ್ಷಣ ಸಂಸ್ಥೆಗಳು ಶೂನ್ಯ ಫಲಿತಾಂಶದ ಹಾದಿ ಹಿಡಿದಿವೆ. ಈಗಾಗಲೇ ಪಿಯುಸಿ ಪ್ರವೇಶ ಪ್ರಕ್ರಿಯೆಯೂ ಪ್ರಾರಂಭವಾಗಿದ್ದು, ಮಾನ್ಯತೆ ರದ್ದುಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಲ್ಲದೆ ಶಿಕ್ಷಣ ಇಲಾಖೆಯ ದ್ವಂದ್ವ ನೀತಿಯೇ ಕಳಪೆ ಶಿಕ್ಷಣ ಸಂಸ್ಥೆಗಳಿಗೆ ವರದಾನವಾಗಿದೆ. ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಇಂತಹ ಸಂಸ್ಥೆಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada