ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಬರುತ್ತಿದ್ದಾರೆ. ಈ ಕುರಿತು ಮಾಜಿ ಪ್ರತಿಪಕ್ಷ ನಾಯಕ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಅಮಿತ್ ಶಾ ಬರ್ತಾರೆ, ಹೋಗ್ತಾರೆ. ಅವರು ಬಂದ್ರೆ ಸದನ ಮಾಡೋಕೇನು? ಅಧಿವೇಶನ ಇದೆ ಬರಬೇಡಿ ಅಂತಾ BJPಯವರು ಹೇಳಬೇಕಿತ್ತು. ಆ ಧಮ್ಮು ರಾಜ್ಯ BJPಯವರಿಗೆ ಇದೆಯಾ ಎಂದು BJPಯನ್ನು ಪ್ರಶ್ನಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅಧಿವೇಶನದಲ್ಲಿ ಅವಕಾಶ ಸಿಕ್ಕಿಲ್ಲ. ಕಬ್ಬು ಬೆಳೆಗಾರರು, ಭತ್ತ ಬೆಳೆಗಾರರ ಬಗ್ಗೆ ಚರ್ಚೆಯಾಗಬೇಕು. ಈ ಚರ್ಚೆಗೆ ಸ್ಪೀಕರ್ ಎರಡು ದಿನ ಅವಕಾಶ ಕೊಡ್ತೀನಿ ಅಂದಿದ್ರು. ಆದರೆ ಅವರು ಚರ್ಚೆಗೆ ಬರಲೇ ಇಲ್ಲ ಎಂದು ಸಿದ್ದು ಬೇಸರ ವ್ಯಕ್ತಪಡಿಸಿದರು.