Webdunia - Bharat's app for daily news and videos

Install App

ಕಾಲೇಜು ವಿದ್ಯಾರ್ಥಿಗಳಿಗೆ ಆಕೆ ಮಾರಾಟ ಮಾಡಿದ್ದೇನು?

Webdunia
ಸೋಮವಾರ, 27 ಆಗಸ್ಟ್ 2018 (19:57 IST)
ಮನೆಯಲ್ಲಿ ತುಳಸಿ ಗಿಡ ಇಟ್ಟಕೊಂಡು ಕಾಲೇಜು ವಿದ್ಯಾರ್ಥಿಗಳನ್ನ ದೇವರ ದರ್ಶನದ ಹೆಸರಿನಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಮಾಡ್ತಿದ್ದ ನಟೋರಿಯಸ್ ಆಂಟಿಯ ಅಡ್ಡೆಯ ಮೇಲೆ ದಾಳಿ ಮಾಡಲಾಗಿದೆ.

ಅಬಕಾರಿ ಪೊಲೀಸರು ದಾಳಿ ಮಾಡಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಬಸವನಗರ ಬಡಾವಣೆಯಲ್ಲಿ ರೇಣುಕಾ ಜಲ್ದೆ ಎಂಬ ಮಹಿಳೆ ಕಾಲೇಜು ವಿದ್ಯಾರ್ಥಿಗಳಿಗೆ ನಶೆ ಎರಿಸುವ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು. ಮನೆಯ ಅಂಗಳದಲ್ಲಿ ತುಳಸಿ ಗಿಡದ ಪಕ್ಕದಲ್ಲೆ ಪೋದೆಯೊಂದರಲ್ಲಿ ಭೂಮಿ ಅಗೆದು ಒಳಗೆ ಡ್ರಗ್ಸ್ ಇಟ್ಟು ದರ್ಶನದ ನೆಪ ಮಾಡಿ ಬರುವ ಯುವಕರಿಗೆ ಮಾರಾಟ ಮಾಡ್ತಿದ್ದಳು.

ಈ ದಂಧೆ ಮೇಲ್ಮೋಟಕ್ಕೆ ಸಾಮಾನ್ಯವಾಗಿ ಕಂಡು ಬಂದರು ಇಷ್ಟೊಂದು ಜನ ಯಾಕೆ ಈ ಮನೆಯತ್ತ ಹೋಗ್ತಿದ್ದಾರೆ ಅಂತ ಅನುಮಾನ ಬಂದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಬಕಾರಿ ಜಿಲ್ಲಾಧಿಕಾರಿ ಶಿವಪ್ರಕಾಶ್, ಡ್ರಗ್ಸ್ ಕಂಟ್ರೋಲ್ ಅಧಿಕಾರಿ ಶರಣಬಸಪ್ಪ ಸೇರಿದಂತೆ ಅಧಿಕಾರಿಗಳ ತಂಡ ಮಹಿಳೆ ಮನೆ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆಯಲ್ಲಿ ಅಪಾರ ಪ್ರಮಾಣದ ಮತ್ತೆರಿಸುವ ಮಾತ್ರೆಗಳು ಪತ್ತೆಯಾಗಿವೆ. ರೇಣುಕಾ ಜಲ್ದೆ ಅವಳನ್ನು ಬಂಧಿಸಿರುವ ಪೊಲೀಸರು ಪರಾರಿಯಾದ ಆಕೆಯ ಗಂಡ ಸಂಜೀವಕುಮಾರ್ ಜಲ್ದೆ ಪತ್ತೆಗಾಗಿ ಜಾಲ ಬೀಸಿದ್ದಾರೆ.





ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ