Webdunia - Bharat's app for daily news and videos

Install App

ಹವಾಮಾನ ವರದಿಯಲ್ಲಿ ಬರೋ ಆರೇಂಜ್, ಯೆಲ್ಲೊ, ರೆಡ್ ಅಲರ್ಟ್ ಗಳೆಂದರೆ ಏನು.?

Webdunia
ಶುಕ್ರವಾರ, 12 ನವೆಂಬರ್ 2021 (20:12 IST)
ಬೆಂಗಳೂರಿನಲ್ಲಿ ಮಳೆ ವಾತಾವರಣ ಮುಂದುವರಿಯಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂಬ ವಾಕ್ಯವೊಂದನ್ನು ನೀವು ಹವಾಮಾನ ವರದಿಗಳಲ್ಲಿ ಓದಿರುತ್ತೀರಿ. ಇದೇನಿದು ಬಣ್ಣಗಳಲ್ಲಿ ವಿಂಗಡಿಸಿರುವ ಎಚ್ಚರಿಕೆಗಳು? ಕೆಂಪು, ಹಳದಿ, ಕಿತ್ತಳೆ ಬಣ್ಣದ ಎಚ್ಚರಿಕೆಗಳೆಲ್ಲ ಏನನ್ನು ಸೂಚಿಸುತ್ತವೆ. ಇಲ್ಲಿದೆ ಸಂಕ್ಷಿಪ್ತ ಮಾಹಿತಿ.ಏನದು ಗ್ರೀನ್ ಅಲರ್ಟ್?
 
ಗ್ರೀನ್ ಅಲರ್ಟ್ ಅಡಿಯಲ್ಲಿ ಬರುವ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇರುವುದಿಲ್ಲ. ಇಲ್ಲೆಲ್ಲ ವಾತಾವರಣ ಸಹಜವಾಗಿಯೇ ಇರುತ್ತದೆ.
 
ರೆಡ್ ಅಲರ್ಟ್
 
ರೆಡ್ ಅಲರ್ಟ್ ನ ಸೂಚನೆ ಹೊಂದಿರುವ ಪ್ರದೇಶಗಳು ಅಪಾಯಕಾರಿ ಹಂತದಲ್ಲಿರಲಿದೆ. 130 ಕಿ.ಮೀ. ವೇಗದ ಗಾಳಿ, ಗುಡುಗು ಸಹಿತ ಭಾರೀ ಮಳೆ ಇರಲಿದೆ. ಅಂತಹ ಪ್ರದೇಶಗಳಿಗೆ ಚಂಡಮಾರುತದ ಮುನ್ಸೂಚನೆ ಕೊಡಲಾಗುತ್ತದೆ.
 
ಯೆಲ್ಲೋ ಅಲರ್ಟ್
 
ಯೆಲ್ಲೋ ಅಲರ್ಟ್ ಘೋಷಣೆ ಪಡೆದಿರುವ ಜಿಲ್ಲೆಗಳಲ್ಲಿ 7.5 ರಿಂದ 15 ಮಿಮೀ ವರೆಗೆ ಭಾರೀ ಮಳೆಯಾಗುವ ಸೂಚನೆ ಇರಲಿದೆ. ಜೊತೆಗೆ ಈ ಮಳೆ 2 ಗಂಟೆಗಿಂತ ಹೆಚ್ಚು ಕಾಲ ಸುರಿದರೆ ಪ್ರವಾಹ ಉಂಟಾಗಬಹುದು. ಹಾಗಾಗಿ ಜನರನ್ನು ಜಾಗೃತಗೊಳಿಸಲು ಈ ಅಲರ್ಟ್ ಘೋಷಿಸಲಾಗುತ್ತದೆ.
 
ಆರೇಂಜ್ ಅಲರ್ಟ್
 
ಇದು ಯೆಲ್ಲೋ ಅಲರ್ಟ್ ಗಿಂತ ಹೆಚ್ಚು ಪರಿಣಾಮಕಾರಿಯಾಗಲಿದೆ. ಆರೆಂಟ್ ಅಲರ್ಟ್ ಇರುವ ಜಿಲ್ಲೆಗಳಲ್ಲಿ ಚಂಡಮಾರುತ ಜನಜೀವನ ಹದಗೆಡಿಸುವಂತದ್ದಾಗಿರಬಹುದು. ಈ ಪ್ರದೇಶದಲ್ಲಿ ಆಸ್ತಿ ನಷ್ಟವಾಗುವ ಸಾಧ್ಯತೆ ಇರಲಿದೆ.ಹಾಗಾಗಿ ಮಳೆಯ ಸಂದರ್ಭದಲ್ಲಿ ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ ಇರಲು ಹೇಳಲಾಗುತ್ತದೆ. ಕೆಲವು ಕಡೆ ಪ್ರವಾಹ ಭೀತಿಯಿಂದ ಮೀನುಗಾರರನ್ನು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪ್ರಾಪ್ತ ಮಗಳ ಮೇಲೆ ಮೂರು ವರ್ಷ ಲೈಂಗಿಕ ದೌರ್ಜನ್ಯ: ಪಾಪಿ ಅಪ್ಪನಿಗೆ ಜೀವಾವಧಿ ಶಿಕ್ಷೆ

ಯೋಗಿ ಸಿಎಂ ಆದ್ಮೇಲೆ ಯುಪಿಯಲ್ಲಿ 15 ಸಾವಿರ ಎನ್‌ಕೌಂಟರ್‌, 30 ಸಾವಿರ ಕ್ರಿಮಿನಲ್‌ಗಳ ಅರೆಸ್ಟ್‌

ಜಮೀನು ಒತ್ತುವರಿ ಪ್ರಕರಣ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಬಿಗ್ ರಿಲೀಫ್‌

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಡಿಎನ್‌ಎ ಟೆಸ್ಟ್‌ಗೆ ಮುಂದಾದ ಪಂಜಾಬ್ ಸರ್ಕಾರ

ಶುಭಾಂಶು ಶುಕ್ಲಾ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಸ್ರೋ

ಮುಂದಿನ ಸುದ್ದಿ
Show comments